ಆರ್‌ಸಿಬಿಗೆ ಮ್ಯಾಕ್ಸ್‌ವೆಲ್‌ರನ್ನು‌ ಖರೀದಿಸಲು ಕಾರಣ ತಿಳಿಸಿದ ಮೈಕ್‌ ಹೇಸನ್‌!

ಹೊಸದಿಲ್ಲಿ: ಇತ್ತೀಚೆಗೆ ನಡೆದಿದ್ದ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಟಗಾರರ ಹರಾಜಿನಲ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು() 14.25 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆಸ್ಟ್ರೇಲಿಯಾ ಸ್ಟಾರ್‌ ಆಲ್‌ರೌಂಡರ್‌ರನ್ನು ಖರೀದಿಸಲು ಪ್ರಮುಖ ಕಾರಣವೇನುಂಬುದು ಇದೀಗ ಬಹಿರಂಗವಾಗಿದೆ. 2020ರ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಿಂಗ್ಸ್ ಇಲೆವೆನ್‌ ಪರ ಆಡಿದ್ದರು. ಆಡಿದ್ದ 13 ಪಂದ್ಯಗಳಿಂದ ಗಳಿಸಿದ್ದು ಕೇವಲ 108 ರನ್‌ ಮಾತ್ರ. ಕಳೆದ ವರ್ಷದ ಜತೆಗೆ ಅದಕ್ಕಿಂದಿನ ಆವೃತ್ತಿಗಳಲ್ಲಿಯೂ ಮ್ಯಾಕ್ಸಿ ವೈಫಲ್ಯ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್‌ ಫ್ರಾಂಚೈಸಿ 2021ರ ಐಪಿಎಲ್ ಆಟಗಾರರ ಹರಾಜಿಗೆ ಮ್ಯಾಕ್ಸ್‌ವೆಲ್‌ ಅವರನ್ನು ಬಿಡುಗಡೆ ಮಾಡಿತ್ತು. ಇದೀಗ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಆರ್‌ಸಿಬಿ ಡೈರೆಕ್ಟರ್ , ಗ್ಲೆನ್‌ ಮ್ಯಾಕ್ಸ್‌ ಖರೀದಿಸಲು ಪ್ರಮುಖ ಕಾರಣವೇನೆಂಬುದನ್ನು ಬಹಿರಂಗಪಡಿಸಿದ್ದಾರೆ. "ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು ನಾವು ಏಕೆ ಇಷ್ಟಪಡುತ್ತೇವೆ ಅಂದರೆ, ಅವರು 10 ರಿಂದ 15 ಓವರ್‌ಗಳಲ್ಲಿ ಅಪಾಯಕಾರಿ ಆಟಗಾರ. 2014ರಿಂದ ಇಲ್ಲಿಯವರೆಗೂ ಆತ 28 ಸರಾಸರಿ ಹಾಗೂ 161.5 ಸ್ಟ್ರೈಕ್ ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ. ಇದನ್ನು ಪರಿಗಣಿಸಿ ನಮ್ಮ ತಂಡಕ್ಕೂ ಅವರು ಕೊಡುಗೆ ನೀಡಬಹುದೆಂದು ನಿರೀಕ್ಷೆ ಮಾಡಲಾಗಿದೆ," ಎಂದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬೌಲಿಂಗ್‌ ಸಾಮರ್ಥ್ಯದಿಂದಲೂ ಮೈಕ್‌ ಹೇಸನ್‌ ಪ್ರಭಾವಿತರಾದರು. ಆಸ್ಟ್ರೇಲಿಯಾ ತಂಡ ಮ್ಯಾಕ್ಸ್‌ವೆಲ್‌ಗೆ ಸತತ 4 ಓವರ್‌ಗಳನ್ನು ನೀಡುವುದಿಲ್ಲ ಎಂದು ತಿಳಿದಿದ್ದರೂ ಸಹ ಹೇಸನ್‌, ಮ್ಯಾಕ್ಸ್‌ವೆಲ್ ಅವರ ಸರ್ವಾಂಗೀಣ ಸಾಮರ್ಥ್ಯಗಳು ಆರ್‌ಸಿಬಿಗೆ ಆಕರ್ಷಕ ಆಯ್ಕೆಯಾಗಿದೆ ಎಂದು ಒಪ್ಪಿಕೊಂಡರು. "ಅವರಿಂದ ಬೌಲಿಂಗ್‌ ಆಯ್ಕೆಯೂ ನಮಗೆ ಸಿಗುತ್ತದೆ. ಅಗ್ರ ಆರರೊಳಗೆ ನಮಗೆ ಯಾರಾದರೂ ಲಭ್ಯರಿದ್ದರೆ ಅವರು 3 ರಿಂದ 4 ಓವರ್‌ ಬೌಲಿಂಗ್‌ ಮಾಡಬಹುದು. ಈ ಜಾಗದಲ್ಲಿ ಮ್ಯಾಕ್ಸ್‌ವೆಲ್‌ ಬೌಲಿಂಗ್‌ ಮಾಡಲಿದ್ದಾರೆ. ಅವರ ಬೌಲಿಂಗ್ ಸಂಖ್ಯೆಗಳು ಅಸಾಧಾರಣವಾಗಿವೆ," ಎಂದು ಮೈಕ್‌ ಹೇಸನ್‌ ತಿಳಿಸಿದರು. ಹರಾಜಿನಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿರುವ ಗ್ಲೆನ್ ಮ್ಯಾಕ್ಸ್‌ವೆಲ್, 2021ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಒಳಗಾಗಿದ್ದಾರೆ. ಟೂರ್ನಿಗೂ ಮುನ್ನ ರೂಪಿಸಿರುವ ಎಲ್ಲಾ ಯೋಜನೆಗಳು ಆರ್‌ಸಿಬಿಗೆ ಸಕಾರವಾಗಲಿದೆಯೇ ಎಂಬುದನ್ನು ಸಮಯವೇ ನಿರ್ಧರಿಸಬೇಕಾಗಿದೆ. ನಿರೀಕ್ಷೆಯಂತೆ ಬೆಂಗಳೂರು ಫ್ರಾಂಚೈಸಿಯು ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಖರೀದಿಗೆ ಬಿಡ್ಡಿಂಗ್‌ ವಾರ್‌ ನಡೆಸಿತ್ತು. ಸಿಎಸ್‌ಕೆ ಜೊತೆಗೆ ಕೋಟಿ ಕೋಟಿ ಚೆಲ್ಲಲು ಮುಂದಾದ ಆರ್‌ಸಿಬಿ ಅಂತಿಮವಾಗಿ ಬರೋಬ್ಬರಿ 14.25 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಮ್ಯಾಕ್ಸ್‌ವೆಲ್‌ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಕಳೆದ ವರ್ಷದ ಹರಾಜಿನಲ್ಲಿ 10.75 ಕೋಟಿ ರೂ. ಗಳಿಗೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಫ್ರಾಂಚೈಸಿ ಪಾಲಾಗಿದ್ದ ಹಾರ್ಡ್‌ ಹಿಟ್ಟರ್‌, ಈ ಬಾರಿ ಮಿನಿ ಹರಾಜಿನಲ್ಲಿ ನಾಲ್ಕು ಕೋಟಿ ಜಾಸ್ತಿ ಮೊತ್ತಕ್ಕೆ ಆರ್‌ಸಿಬಿ ಪಾಲಾಗಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3uiXKHr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...