ಪಾತಳಕ್ಕಿಳಿದ ಎಲೆಕೋಸು ಬೆಲೆ; ಕಂಗೆಟ್ಟ ರೈತ ಬೆಳೆದ ಬೆಳೆಯನ್ನೇ ಉಳುಮೆ ಮಾಡಿಬಿಟ್ಟ..!

ಗುಂಡ್ಲುಪೇಟೆ: ಮತ್ತು ರೋಗಬಾಧೆಯಿಂದ ಕಂಗೆಟ್ಟ ರೈತನೊಬ್ಬ ತಾನು ಬೆಳೆದ ಬೆಳೆಯನ್ನೇ ಬೇಸರದಿಂದ ಉಳುಮೆ ಮಾಡಿರುವ ಘಟನೆ ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ನಡೆದಿದೆ. ಹೊರೆಯಾಲ ಗ್ರಾಮದ ರೈತರೊಬ್ಬರು ಬೆಲೆ ಕುಸಿತ ಮತ್ತು ರೋಗಬಾಧೆ ಹಿನ್ನೆಲೆ ಬೇಸರಗೊಂಡು ಎಲೆಕೋಸಿನ ಬೆಳೆಯನ್ನು ಉಳುಮೆ ಮಾಡಿಸುವ ಮೂಲಕ ನಾಶಗೊಳಿಸಿದ್ದಾರೆ. ಗ್ರಾಮದ ಅಂಕೇಶ್‌ ಬೆಳೆ ನಾಶಗೊಳಿಸಿದ ರೈತರಾಗಿದ್ದು, ಇವರು ಉತ್ತಮ ಬೆಲೆ ನಿರೀಕ್ಷೆಯಲ್ಲಿ ತಮ್ಮ 2 ಎಕರೆ 30 ಗುಂಟೆ ಜಮೀನಿನಲ್ಲಿ 12 ಸಾವಿರ ಎಲೆಕೋಸಿನ ಪೈರು ನಾಟಿ ಮಾಡಿಸಿದ್ದರು. ಉಳುಮೆ, ಗೊಬ್ಬರ, ಔಷಧ ಸಿಂಪಡಣೆ, ಕಳೆ ತೆಗೆಯಲು ಸಾಕಷ್ಟು ಹಣ ವೆಚ್ಚ ಮಾಡಿದರು. ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಲೆಕೋಸು ಕೆ.ಜಿ.ಯೊಂದಕ್ಕೆ 2 ರೂ.ನಂತೆ ಮಾರಾಟವಾಗುತ್ತಿತ್ತು. ಇದೇ ಸಂದರ್ಭ ರೋಗಬಾಧೆ ಹೆಚ್ಚಾಯಿತು. ಈ ಹಿನ್ನೆಲೆ ಬೆಳೆ ಉಳಿಸಿಕೊಂಡರೆ ಔಷಧ ಖರ್ಚು ಬರುವುದಿಲ್ಲ ಎಂದು ತೀರ್ಮಾನಿಸಿ ಉಳುಮೆ ಮಾಡಿಸುವ ನಿರ್ಧಾರಕ್ಕೆ ಬಂದೆ ಎಂದು ರೈತ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆ ಇದ್ದರೆ ಬೆಲೆ ಇರುವುದಿಲ್ಲ. ಬೆಲೆ ಇದ್ದರೆ ಬೆಳೆ ಇರುವುದಿಲ್ಲ ಎಂಬಂತಾಗಿದೆ. ಈಗಾಗಿ ರೈತ ಕಂಗಲಾಗಿದ್ದು, ಬೆಳೆ ಮಾಡಲು ಮಾಡಿದ್ದ ಖರ್ಚು ಬಾರದೇ ಕೈಸುಟ್ಟುಕೊಳ್ಳುವಂತಾಗಿದೆ. ಖಾಸಗಿ ಸಾಲಕ್ಕೆ ಬಡ್ಡಿ ಕಟ್ಟಲು ಪರದಾಡುತ್ತಿದ್ದಾರೆ.


from India & World News in Kannada | VK Polls https://ift.tt/3pZycgd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...