ರಾಮ ಮಂದಿರ ನಿರ್ಮಾಣಕ್ಕೆ ಜೆಡಿಎಸ್‌ ಶಾಸಕ ಮಂಜುನಾಥ್‌ರಿಂದ 25 ಲಕ್ಷ ರೂ. ದೇಣಿಗೆ

ಪೀಣ್ಯ ದಾಸರಹಳ್ಳಿ: ರಾಮಮಂದಿರ ಎನ್ನುವುದು ಪ್ರೀತಿ, ಸಹಕಾರ ತ್ಯಾಗ, ವಿಶ್ವಭ್ರಾತೃತ್ವ ಹಾಗೂ ಶಕ್ತಿಯ ಪ್ರತೀಕ ಎಂದು ಶಾಸಕ ಆರ್‌.ಮಂಜುನಾಥ್‌ ಹೇಳಿದರು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ 25 ಲಕ್ಷ ರೂ. ದೇಣಿಗೆ ನೀಡಿ ಮಾತನಾಡಿದ ಅವರು, ''ಹಿಂದೆ ಅವಂತಿಯ ರಾಜ ವಿಕ್ರಮಾದಿತ್ಯ ಇದೇ ಭೂಮಿಯಲ್ಲಿಏಳು ಅಂತಸ್ತುಗಳ ಭವ್ಯ ಶ್ರೀರಾಮ ಮಂದಿರ ನಿರ್ಮಿಸಿದ ಎಂಬುದು ಇತಿಹಾಸ. ಆದರೆ ಇದೀಗ ಮೂರನೇ ಬಾರಿ 161 ಅಡಿ ಎತ್ತರದ 5 ಗೋಪುರಗಳ ಸುಂದರ ಮಂದಿರ ತಲೆ ಎತ್ತುತ್ತಿರುವ ಪರ್ವಕಾಲ ನಮಗೊದಗಿ ಬಂದಿದೆ,'' ಎಂದರು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಮುಖಂಡರಾದ ಶಿವಲಿಂಗಯ್ಯ, ಗಂಗಾಧರ್‌, ಜನಾರ್ದನ್‌, ನೀಲಯ್ಯ, ಸುರೇಶ್‌ ಮತ್ತಿತರರು ಇದ್ದರು. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ವಿವಿಧ ಪಕ್ಷಗಳು ಹಣವನ್ನು ನೀಡುತ್ತಿದೆ. ದೇಶದ ಮೂಲೆ ಮೂಲೆಯಿಂದಲೂ ಜನರು ದೇಣಿಗೆ ನೀಡುತ್ತಿದ್ದಾರೆ. ಅತ್ತ ಕಾಮಗಾರಿಯು ಭರದಿಂದ ಸಾಗುತ್ತಿದೆ. ಮುಂದಿನಮೂರು ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಇಡೀ ದೇಶವೇ ರಾಮ ಮಂದಿರ ನಿರ್ಮಾಣಕ್ಕೆ ಕಾಯುತ್ತಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಮೊದಲ ದೇಣಿಗೆ ನೀಡಿದ್ದು,‌ 5 ಲಕ್ಷ ಕೊಟ್ಟಿದ್ದರು.


from India & World News in Kannada | VK Polls https://ift.tt/3tr7QFW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...