
ವಾಷಿಂಗ್ಟನ್: ಭಾರತ ವಿಶ್ವ ಗುರುವಾಗಬೇಕು ಎಂಬ ಕನಸು ಯಾರಿಗಿಲ್ಲ ಹೇಳಿ? ಕೆಲವು ದೇಶಗಳು ಖಡ್ಗ(ಹಿಂಸೆ)ದಿಂದ ಜಗತ್ತನ್ನು ಗೆಲ್ಲಲು ಬಯಸಿದರೆ, ಭಾರತ ತನ್ನ ವಿದ್ವತ್ತಿನಿಂದಲೇ ವಿಶ್ವದ ಮನ ಗೆಲ್ಲುತ್ತದೆ. ಇದೇ ಕಾರಣಕ್ಕೆ ಜಗತ್ತಿನ ಪ್ರತಿಯೊಂದು ದೇಶದ ಆಡಳಿತದಲ್ಲೂ ಭಾರತೀಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುತ್ತದೆ. ಅದರಲ್ಲೂ ಅಮರರಿಕದ ನೂತನ ಅಧ್ಯಕ್ಷ ಜೋ ಬಿಡನ್ ಆಡಳಿತದಲ್ಲಿ ಭಾರತೀಯರ ದಂಡೇ ಉನ್ನತ ಜವಾಬ್ದಾರಿಗಳನ್ನು ಹೊತ್ತುಕೊಂಡಿರುವುದನ್ನು ಇಡೀ ವಿಶ್ವ ಗಮನಿಸಿದೆ. ಇದೀಗ ಇಡೀ ಜಗತ್ತಿನ ಅತ್ಯಂತ ಬಲಿಷ್ಠ ಬಾಹ್ಯಾಕಾಶ ಸಂಸ್ಥೆ ಎನಿಸಿಕೊಂಡಿರುವ ಅಮೆರಿಕದ ನಾಸಾದಲ್ಲೂ ಭಾರತೀಯರ ಕಲರವ ಅರಂಭವಾಗಿದೆ. ಹೌದು, ಬಾಹ್ಯಾಕಾಶ ಸಂಸ್ಥೆಯ ಕಾರ್ಯಕಾರಿ ಸಿಬ್ಬಂದಿ ಮುಖ್ಯಸ್ಥರಾಗಿ ಭಾರತೀಯ ಮೂಲದ ನೇಮಕಗೊಂಡಿದ್ದಾರೆ. ಈ ಮೂಲಕ ನಾಸಾದ ಉನ್ನತ ಹುದ್ದೆಗೆ ಏರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಖ್ಯಾತಿಗೆ ಭವ್ಯಾ ಲಾಲ್ ಪಾತ್ರರಾಗಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆನ್ನು ನಿರ್ವಹಿಸಿರುವ, ಏಜೆನ್ಸಿ ರಿವ್ಯೂ ಟೀಮ್‌ನ ಸದಸ್ಯೆಯಾಗಿ ಭವ್ಯಾ ಲಾಲ್ ಕಾರ್ಯ ನಿರ್ವಹಿಸಿದ್ದರು. 2005-2020ರವರೆಗೆ STPI ಸಂಶೋಧನಾ ಸ ಇಬ್ಬಂದಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿರುವ ಭವ್ಯಾ ಲಾಲ್, ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದಾರೆ. ಇಷ್ಟೇ ಅಲ್ಲದೇ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡಮಿಗಳ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿರುವ ಭವ್ಯಾ ಲಾಲ್ ಅವರನ್ನು, ಅಂತಾರಾಷ್ಟ್ರೀಯ ಗಗನಯಾತ್ರಿಗಳ ಅಕಾಡಮಿಯ ಗೌರವ ಸದಸ್ಯೆಯನ್ನಾಗಿಯೂ ನೇಮಕ ಮಾಡಲಾಗಿದೆ. ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಯೋಜನಾ ನೀತಿಗಳನ್ನು ರೂಪಿಸುವಲ್ಲಿ ಭವ್ಯಾ ಲಾಲ್ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ನ್ಯೂಕ್ಲಿಒಯರ್ ಎಂಜಿನಿಯರಿಂಗ್ ವಿಷಯದಲ್ಲಿ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಭವ್ಯಾ ಲಾಲ್, ಎಂಐಟಿಯಿಂದ ತಂತ್ರಜ್ಞಾನ ಮತ್ತು ಕಾರ್ಯನೀತಿಯಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಹಾಗೂ ಜಾರ್ಜ್ ವಾಷಿಂಗ್ಟನ್ ವಿವಿಯಿಂದ ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ಆಡಳಿತ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಭವ್ಯಾ ಲಾಲ್ ಅವರನ್ನು, ಬಿಡೆನ್ ಆಡಳಿತ ನಾಸಾದ ಕಾರ್ಯಕಾರಿ ಸಿಬ್ಬಂದಿ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿ ಆದೇಶ ಹೊರಿಡಿಸಿದೆ. ಇದು ನಿಜಕ್ಕೂ ಸಮಸ್ತ ಭಾರತೀಯರ ಪಾಲಿಗೆ ಹೆಮ್ಮೆಯ ಕ್ಷಣ.
from India & World News in Kannada | VK Polls https://ift.tt/36uMQ7e