
ಬೆಂಗಳೂರು: ಕೇಂದ್ರ ಬಜೆಟ್ ಬೆನ್ನಲ್ಲೇ ರಾಜ್ಯ ಸರಕಾರ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಇತರೆ ಟ್ಯಾಕ್ಸಿಗಳ ನಿಗದಿತ ದರಗಳನ್ನು ಪರಿಷ್ಕರಣೆ ಮಾಡಿ ಸೋಮವಾರ ಹೊರಡಿಸಿದೆ. ಹವಾನಿಯಂತ್ರಿತ ರಹಿತ ಟ್ಯಾಕ್ಸಿ, ಎಸಿ ಟ್ಯಾಕ್ಸಿ, ಕಾಯುವಿಕೆ ದರ, ಲಗೇಜ್ ದರ, ರಾತ್ರಿ ದರಗಳು ಪರಿಷ್ಕರಣೆಯಲ್ಲಿ ಸೇರಿವೆ. ಈ ಪರಿಷ್ಕರಣೆ ಪ್ರಯಾಣಿಕರಿಗೆ ಆಘಾತ ನೀಡಿದರೆ, ಟ್ಯಾಕ್ಸಿ ಚಾಲಕರಿಗೆ ಸಿಹಿ ಸುದ್ದಿಯಾಗಿದೆ. ತೈಲ ದರ ಹೆಚ್ಚಳ ಸೇರಿದಂತೆ ಇತರೆ ಕಾರಣಗಳಿಂದ ಟ್ಯಾಕ್ಸಿ ದರಗಳನ್ನು ಪರಿಷ್ಕರಣೆ ಮಾಡುವಂತೆ ಟ್ಯಾಕ್ಸಿ ಚಾಲಕರು ನಗರದ ಫ್ರೀಡಂಪಾರ್ಕ್ ನಲ್ಲಿ ಅರೆಬೆತ್ತಲೆ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ದರ ಪರಿಷ್ಕರಣೆ ನಡೆಸಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಟ್ಯಾಕ್ಸಿಗಳ ಪರಿಷ್ಕೃತ ದರಗಳು ವಾಹನಗಳ ಮಾದರಿ ನಿಗದಿತ ದರ ಪ್ರತಿ ಕಿ.ಮೀ.ಗೆ
- ಹವಾನಿಯಂತ್ರಿತ ರಹಿತ ಟ್ಯಾಕ್ಸಿ 75 ರೂ. (ಕನಿಷ್ಠ 4 ಕಿ.ಮೀ.ವರೆಗೆ) 18 ರೂ.
- ಹವಾನಿಯಂತ್ರಿತ ಟ್ಯಾಕ್ಸಿ 100 ರೂ. (ಕನಿಷ್ಠ 4 ಕಿ.ಮೀ.ವರೆಗೆ) 24 ರೂ.
- ಕಾಯುವಿಕೆ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ. ನಂತರದ ಪ್ರತಿ ನಿಮಿಷಕ್ಕೆ 1 ರೂ.,
- ಲಗೇಜ್ ದರಗಳು ಮೊದಲಿನ 120 ಕೆ.ಜಿ.ವರೆಗೆ ಉಚಿತ (ಸೂಟ್‌ಕೇಸ್, ಬೆಡ್ಡಿಂಗ್, ಇತ್ಯಾದಿ ವೈಯಕ್ತಿಕ ಲಗೇಜ್‌ಗಳು). ನಂತರದ ಪ್ರತಿ 20 ಕಿ.ಗ್ರಾಂ.ಗೆ 7 ರೂ.
- ರಾತ್ರಿ ದರಗಳು ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣದ ದರದ ಮೇಲೆ ಶೇ.10ರಷ್ಟು ಹೆಚ್ಚುವರಿ ದರ.
from India & World News in Kannada | VK Polls https://ift.tt/2YCngJi