ಹೊಸದಿಲ್ಲಿ: ಟೂಲ್‌ಕಿಟ್' (ಹೋರಾ-ಟದ ಹೊತ್ತಿಗೆ) ಬಿಡುಗಡೆ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿರುವ ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದುವರೆಗೆ ಸಣ್ಣ ಮಟ್ಟದಲ್ಲಿ ನಡೆಯುತ್ತಿದ್ದ ರೈತ ಪ್ರತಿಭಟನೆಯನ್ನು ಅಂತಾರಾಷ್ಟ್ರೀಯ ವೇದಿಕೆಗೆ ಕೊಂಡೊಯ್ದು ಅಶಾಂತಿಯ ಕಿಚ್ಚು ಹೊತ್ತಿಸುವ ಸಂಚನ್ನು ಗ್ರೇಟಾ ಥನ್‌ಬರ್ಗ್ ಮಾಡಿದ್ದಾರೆ ಎನ್ನಲಾಗಿತ್ತು. ಇವರ ಹಿಂದೆ ಕಾಣದ ಕೈಗಳಿವೆ ಎನ್ನಲಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಕಿಂಗ್ ನ್ಯೂಸ್‌ವೊಂದು ಹೊರಬಂದಿದೆ. ಹಿಂದೆ ಖಲಿಸ್ತಾನ ಹೋರಾಟ ಸಂಘಟನೆಗಳ ಕೈವಾಡವಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ರೈತರ ಪರವಾಗಿ ಈ ಟೂಲ್‌ಕಿಟ್‌ನ್ನು ತಯಾರಿಸಿರುವುದು ಬೆಳಕಿಗೆ ಬಂದಿದೆ ಎಂದಿರುವ ಪೊಲೀಸರು ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ, ಆದರೆ ಗ್ರೇಟಾ ಥನ್‌ಬರ್ಗ್ ಅವರ ಹೆಸರಾಗಲಿ, ಬೇರೆಯವರ ಹೆಸರಾಗಲಿ ಎಫ್‌ಐಆರ್‌ನಲ್ಲಿ ನಮೂದಿಸಿಲ್ಲ. ಬದಲಾಗಿ ಟೂಲ್‌ಕಿಟ್ ಸೃಷ್ಟಿಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಿ ಎಫ್‌ಐಆರ್‌ನಲ್ಲಿ ಹೆಸರು ನಮೂದಿಸಲಾಗುವುದು ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಏನಿದು ಟೂಲ್ ಕಿಟ್? ಹೋರಾಟದ ರೂಪುರೇಷೆ ವಿವರಿಸುವ ದಾಖಲೆ. ಯಾವೆಲ್ಲಾ ಹ್ಯಾಶ್‌ಟ್ಯಾಗ್ ಬಳಸಬೇಕು, ಯಾರನ್ನು ಟ್ವೀಟ್ ಮಾಡಬೇಕು, ಆನ್‌ಲೈನ್ ಸಹಿ ಅಭಿಯಾನದಲ್ಲಿ ಹೇಗೆ ಭಾಗವಹಿಸಬೇಕು, ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆಯನ್ನು ಎಲ್ಲಿ ಸಂಘಟಿಸಬೇಕು, ಹೇಗೆ ವಿಡಿಯೊಗಳನ್ನು ಮಾಡಿ ಶೇರ್ ಮಾಡಬೇಕು ಎಂಬುದು ಸೇರಿದಂತೆ ಚಳವಳಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ವಿಸ್ತೃತ ಮಾರ್ಗಸೂಚಿಯನ್ನು ಇದು ಒಳಗೊಂಡಿದೆ. ಸಾಮಾನ್ಯವಾಗಿ ವಿಶ್ವಸಂಸ್ಥೆ ಸೇರಿದಂತೆ ಪ್ರಮುಖ ಸಂಘಟನೆಗಳು ತಮ್ಮ ಅಭಿಯಾನಗಳ ಪ್ರಚಾರಕ್ಕೆ ಇಂತಹ ಟೂಲ್‌ಕಿಟ್‌ಗಳನ್ನು ಬಳಸುತ್ತವೆ. ಆದರೆ, ಇದನ್ನು ರೈತ ಹೋರಾಟ ಪ್ರಚೋದನೆಗೆ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದೇ ಗೂಗಲ್ ಡಾಕ್ಯುಮೆಂಟ್‌ನ ಟೂಲ್‌ಕಿಟ್‌ನ್ನು ಗ್ರೇಟಾ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ನಂತರ ಡಿಲೀಟ್ ಮಾಡಿದ್ದರು. ರಿಹಾನಾ, ಥನ್‌ಬರ್ಗ್ ನನಗೆ ಗೊತ್ತಿಲ್ಲ! ಇನ್ನು ಗಾಯಕಿ ರಿಹಾನಾ, ಪರಿಸರವಾದಿ ಗ್ರೇಟಾ ಥನ್‌ಬರ್ಗ್ ಬೆಂಬಲದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ , ತನಗೆ ಪಾಪ್ ತಾರೆ ರಿಹಾನಾ ಹಾಗೂ ಯುವ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಗೊತ್ತಿಲ್ಲ ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಬೆಂಬಲವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. ನಮಗೆ ಅಂತರಾಷ್ಟ್ರೀಯ ಸ್ಟಾರ್‌ಗಳು ಬೆಂಬಲ ನೀಡುವುದಿರಂದ ಯಾವುದೇ ಸಮಸ್ಯೆ ಇಲ್ಲ. ಅವರು ನಮಗೆ ಏನು ಕೊಡುವುದು ಇಲ್ಲ, ತೆಗೆದುಕೊಳ್ಳುವುದು ಇಲ್ಲ ಎಂದು ತಿಳಿಸಿದ್ದಾರೆ.
from India & World News in Kannada | VK Polls https://ift.tt/3ji8xwu