ವಾಹನಗಳನ್ನು ಸಾಗಿಸುವ ಸೋಗಿನಲ್ಲಿ ಗ್ರಾಹಕರನ್ನು ಯಾಮಾರಿಸುತ್ತಿದ್ದ ಖದೀಮರ ಬಂಧನ

ಬೆಂಗಳೂರು: ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಸಾಗಿಸುವ ಸೋಗಿನಲ್ಲಿ ಗ್ರಾಹಕರನ್ನು ಯಾಮಾರಿಸುತ್ತಿದ್ದ ಮೂವರನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿಯ ಮಾಕಳಿ ಗ್ರಾಮದಲ್ಲಿಬಾಡಿಗೆ ಮನೆಯಲಿದ್ದ ಶಿವಕುಮಾರ್‌(20), ಸಂದೀಪ್‌(21), ಪ್ರದೀಪ್‌(19) ಬಂಧಿತರು. ತಲೆಮರೆಸಿಕೊಂಡಿರುವ ದೀಪಕ್‌ ಶರ್ಮಾ, ಟಿಂಕು, ರಾಕೇಶ್‌ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಈ ಎಲ್ಲ ಆರೋಪಿಗಳು ಮೂಲತಃ ಹರಿಯಾಣದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಹಕರನ್ನು ವಂಚಿಸಲೆಂದೇ ಆರೋಪಿಗಳು ಲಾಜಿಸ್ಟಿಕಾರ್ಟ್‌ ಎಂಬ ವೆಬ್‌ಸೈಟ್‌ ಮಾಡಿಕೊಂಡಿದ್ದರು. ಪ್ರತಿಷ್ಠಿತ ಪ್ಯಾಕರ್ಸ್‌ ಮತ್ತು ಮೂವರ್ಸ್‌ ಸಂಸ್ಥೆಗಳ ಗ್ರಾಹಕರಿಗೆ ಗಾಳ ಹಾಕಿ ಫೋನ್‌ ಮೂಲಕ ಸಂಪರ್ಕಿಸಿ, ಕಡಿಮೆ ಬೆಲೆಯಲ್ಲಿ ವಾಹನ ಸಾಗಿಸುತ್ತೇವೆ ಎಂದು ಹೇಳುತ್ತಿದ್ದರು. ಪ್ರತಿಷ್ಠಿತ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಡೆಲಿವರಿ ಬಿಲ್‌ಗಳನ್ನು ಗ್ರಾಹಕರಿಗೆ ನೀಡಿ ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ಪಡೆಯುತ್ತಿದ್ದರು. ಬಳಿಕ ವಾಹನಗಳನ್ನು ಡೆಲಿವರಿ ಮಾಡದೇ ಗ್ರಾಹಕರಿಗೆ ಕರೆ ಮಾಡಿ ಹೆಚ್ಚಿನ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು. ಪೊಲೀಸರು ಆರೋಪಿಗಳೀಂದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳು, ಬಿಲ್‌ ಬುಕ್‌ಗಳು ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವೈಟ್‌ಫೀಲ್ಡ್‌ ಮತ್ತು ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಐದು ಪ್ರಕರಣಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3cLoASe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...