ತಮಿಳುನಾಡಿನ ಕಾವೇರಿ ಯೋಜನೆಗೆ ಅವಕಾಶ ನೀಡಲ್ಲ..! ಕಾನೂನು ಹೋರಾಟ ಎಂದ ಸಿಎಂ ಯಡಿಯೂರಪ್ಪ

ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿನ ಯೋಜನೆಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಕಾನೂನು ಮಾರ್ಗದ ಮೂಲಕ ಬಿಗಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಮೂಲಕ ತಮಿಳುನಾಡಿನ ಕಾವೇರಿ ಗುಂಡಾರು ನದಿ ಜೋಡಣೆ ಯೋಜನೆಯನ್ನು ವಿರೋಧಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ತಮಿಳುನಾಡಿನ ಯೋಜನೆಗೆ ಅವಕಾಶ ಕೊಡುವುದಿಲ್ಲ. ಹೇಳಿಕೆ ಕೊಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಯಾವ ಕಾರಣಕ್ಕೂ ಕಾವೇರಿಯಿಂದ ಹೆಚ್ಚುವರಿ ನೀರನ್ನು ತೆಗೆದುಕೊಳ್ಳಲು ಬಿಡಲ್ಲ. ಈ ಸಂಬಂಧ ಕಾನೂನು ಮಾರ್ಗದ ಮೂಲಕ ಬಿಗಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು. ತಮಿಳುನಾಡು ಸರಕಾರ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಸಲುವಾಗಿ ಕಾವೇರಿ, ವೈಗೈ ಹಾಗೂ ಗುಂಡಾರು ನದಿಗಳನ್ನು ಜೋಡಿಸುವ 14,400 ಕೋಟಿ ರೂ. ಯೋಜನೆಯ ಮೊದಲ ಹಂತದ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿದೆ. ಆದರೆ, ತಮಿಳುನಾಡಿನ ನಡೆಗೆ ರಾಜ್ಯ ಸರಕಾರ ವಿರೋಧಿಸಿದೆ. ಕಾವೇರಿ ನದಿಯ 45 ಟಿಎಂಸಿ ಹೆಚ್ಚುವರಿ ನೀರನ್ನು ತಮಿಳುನಾಡು ಬಳಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆ ಕೇಂದ್ರದ ಮೇಲೆ ಒತ್ತಡ ತರಲು ರಾಜ್ಯ ಸರಕಾರ ಮುಂದಾಗಿದ್ದು, ತಮಿಳುನಾಡಿನ ಯೋಜನೆಗೆ ಅನುಮತಿ ನೀಡಿದರೆ, ಮೇಕೆದಾಟು, ಮಾರ್ಕಂಡೇಯ ಯೋಜನೆಗಳಿಗೂ ಅನುಮತಿ ನೀಡುವಂತೆ ಕೇಳಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ. ಬಜೆಟ್‌: ಎಲ್ಲ ಇಲಾಖೆಗಳ‌ ಸಭೆ ಮುಕ್ತಾಯರಾಜ್ಯ ಬಜೆಟ್ ವಿಚಾರವಾಗಿ ಎಲ್ಲ ಇಲಾಖೆಗಳ ಸಭೆ ಸೋಮವಾರ ಮುಗಿಯುತ್ತದೆ. ಮಂಗಳವಾರ ಬಜೆಟ್ ಸಿದ್ಧತಾ ಸಭೆ ನಡೆಸುತ್ತೇವೆ. ಬೇರೆ ಬೇರೆ ಪ್ರಮುಖರ ಜೊತೆ ಮಂಗಳವಾರ ಸಂಜೆವರೆಗೂ ಸಮಾಲೋಚನೆ ನಡೆಸುತ್ತೇವೆ ಎಂದ ಅವರು, ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ವಿಚಾರವಾಗಿ ಆ ಸಮಾಜದ ಸಚಿವರು ಸುದ್ದಿಗೋಷ್ಠಿಯಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತಾರೆ ಎಂದು ಹೇಳಿದರು.


from India & World News in Kannada | VK Polls https://ift.tt/3qJ3rwj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...