
: ಅಕ್ರಮವಾಗಿ ಮಾದಕ ವಸ್ತು ಶೇಖರಿಸಿಟ್ಟಿದ್ದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾದಕವಸ್ತು ಶೇಖರಿಸಿಟ್ಟಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳ ಬಿಜೆಪಿ ಯುವ ಘಟಕದ ಪದಾಧಿಕಾರಿ ಪೊಲೀಸರ ವಿಚಾರಣೆ ವೇಳೆ ಮತ್ತೊಬ್ಬ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರ ಹೆಸರು ಹೇಳಿದ್ದು, ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬುದ್ರ್ವಾನ್ ಜಿಲ್ಲೆಯಲ್ಲಿದ್ದ ರಾಕೇಶ್ ತನ್ನನ್ನು ಪೊಲೀಸರು ಬಂಧಿಸಲು ಬರುತ್ತಿರುವ ಮಾಹಿತಿ ಸಿಕ್ಕ ಕೂಡಲೇ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ ರಾಜ್ಯ ತೊರೆಯುವ ಸಂದರ್ಭ ರಸ್ತೆಯಲ್ಲೇ ಅಡ್ಡಗಟ್ಟಿದ ಪೊಲೀಸರು ರಾಕೇಶ್‌ನನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ರಾಕೇಶ್ ಮನೆಗೆ ಶೋಧಕಾರ್ಯಕ್ಕೆ ತೆರಳಿದ್ದ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಇಬ್ಬರು ಪುತ್ರರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ತಮ್ಮ ಕಾರಿನಲ್ಲಿ 100 ಗ್ರಾಂ ಕೊಕೇನ್ ಸಾಗಿಸುತ್ತಿರುವಾಗಲೇ ಕಳೆದ ವಾರ ಪಮೇಲಾ ಪೊಲೀಸರಿಗೆ ಸೆರೆಸಿಕ್ಕಿದ್ದರು. ಬಳಿಕ ರಾಕೇಶ್ ವಿರುದ್ಧ ಆರೋಪ ಹೊರಿಸಿ, ತಮ್ಮ ವಿರುದ್ಧ ಬಹಳ ದಿನಗಳಿಂದ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದರು. ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಅವರ ಆಪ್ತ ವಲಯದಲ್ಲಿ ರಾಕೇಶ್ ಗುರುತಿಸಿಕೊಂಡಿದ್ದಾರೆ.
from India & World News in Kannada | VK Polls https://ift.tt/3pOOqYy