ಚೀನಾ ಬದಲು ಭಾರತದ ಕೊರೊನಾ ಲಸಿಕೆಗೆ ಶ್ರೀಲಂಕಾ ಬೇಡಿಕೆ, 380 ಕೋಟಿ ಮೌಲ್ಯದ ಲಸಿಕೆ ಖರೀದಿ!

ಕೊಲೊಂಬೊ: ಈಗಾಗಲೇ ಭಾರತದಿಂದ ಉಡುಗೊರೆ ರೂಪದಲ್ಲಿ ಐದು ಲಕ್ಷ ಡೋಸ್‌ ಕೊರೊನಾ ನಿರೋಧಕ ಲಸಿಕೆಗಳನ್ನು ಪಡೆದಿರುವ ಶ್ರೀಲಂಕಾ ಸರಕಾರ, ಹೆಚ್ಚುವರಿಯಾಗಿ 1.35 ಕೋಟಿ ಡೋಸ್‌ಗಳ ಖರೀದಿಗೆ ಬೇಡಿಕೆ ಇರಿಸಿದೆ. ಈ ಮೂಲಕ ಇದುವರೆಗೂ ತಾನು ಬಳಸುತ್ತಿದ್ದ ಚೀನಾ ತಯಾರಿಕೆಯ ಲಸಿಕೆಯನ್ನು ಮುಂದುವರಿಸದೇ ಇರಲು ಶ್ರೀಲಂಕಾ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. '' ಚೀನಾ ತಯಾರಿಸಿರುವ ಕೊರೊನಾ ನಿರೋಧಕ ಲಸಿಕೆಗಳ ಗುಣಮಟ್ಟ ಮತ್ತು ಸುರಕ್ಷತೆ ಖಾತ್ರಿಪಡಿಸುವ ಮೂರನೇ ಹಂತದ ಪರೀಕ್ಷೆಗಾಗಿ ಇನ್ನೂ ಕೂಡ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಸದ್ಯ ಮೊದಲ ಹಂತದ ಲಸಿಕೆ ನೀಡುವಿಕೆ ಅಭಿಯಾನ ಶ್ರೀಲಂಕಾದಲ್ಲಿತೀವ್ರಗತಿಯಲ್ಲಿ ನಡೆಯುತ್ತಿದ್ದು, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ತಯಾರಿಕೆಯಾಗಿರುವ ಆಸ್ಟ್ರಾಜೆನೆಕಾ ಕಂಪನಿಯ ಕೊರೊನಾ ನಿರೋಧಕ ಲಸಿಕೆಗಳನ್ನು ಇನ್ಮುಂದೆ ಬಳಸಲು ನಿರ್ಧರಿಸಿದ್ದೇವೆ. ಹಾಗಾಗಿ ಸುಮಾರು 380 ಕೋಟಿ ರೂ. ವೆಚ್ಚದಲ್ಲಿ 1 ಕೋಟಿಗೂ ಅಧಿಕ ಡೋಸ್‌ಗಳನ್ನು ಪೂರೈಸಲು ಬೇಡಿಕೆ ಇಟ್ಟಿದ್ದೇವೆ. ಬಳಿಕ ಕೊವ್ಯಾಕ್ಸ್‌ ಯೋಜನೆ ಅಡಿಯಲ್ಲಿ ನೇರವಾಗಿ ಆಸ್ಟ್ರಾಜೆನೆಕಾ ಕಂಪನಿಯಿಂದಲೇ ಲಸಿಕೆಗಳನ್ನು 35 ಲಕ್ಷ ಹೆಚ್ಚುವರಿ ಡೋಸ್‌ಗಳನ್ನು ಖರೀದಿಸಲು ಸಿದ್ಧತೆ ನಡೆದಿದೆ,'' ಎಂದು ತೋಟಗಾರಿಕಾ ಸಚಿವ ಮತ್ತು ಸರಕಾರದ ವಕ್ತಾರ ರಮೇಶ್‌ ಪಥಿರಾಣ ತಿಳಿಸಿದ್ದಾರೆ. 'ನೆರೆಹೊರೆಗೆ ಆದ್ಯತೆ' ನೀತಿ ಅಡಿಯಲ್ಲಿ ಉಡುಗೊರೆಯಾಗಿ ನೀಡಿದ್ದ ಲಸಿಕೆಗಳನ್ನು ಬಳಸಿ ಕಳೆದ ಜನವರಿಯಲ್ಲಿ ಶ್ರೀಲಂಕಾ ಸರಕಾರ ತನ್ನ ಮೊದಲ ಹಂತದ ಲಸಿಕಾ ಅಭಿಯಾನ ಆರಂಭಿಸಿದೆ.


from India & World News in Kannada | VK Polls https://ift.tt/3qQeDHl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...