ಸರ್ಕಾರಿ ಬಸ್ ಸಂಚಾರ ಹೆಚ್ಚಲಿ: ಅಪೂರ್ಣ ಸಂಚಾರದಿಂದ ಜನರಿಗೆ ಸಂಕಷ್ಟ!

ಬೆಂಗಳೂರು: ಸರಕಾರಿ ಬಸ್‌ ನಿಗಮಗಳು ಸಂಖ್ಯೆಗಳ ಲೆಕ್ಕಾಚಾರದಲ್ಲಿ ಶೇಕಡಾ 90ರಿಂದ 95 ಬಸ್‌ಗಳನ್ನು ರಸ್ತೆಗಿಳಿಸಿವೆಯಾದರೂ ಅವುಗಳ ಟ್ರಿಪ್‌ ಸಂಖ್ಯೆ ಮೊದಲಿನ ಸ್ಥಿತಿಗೆ ಬಂದಿಲ್ಲ. ಅಂದರೆ, ದಿನದ ಕೆಲವು ಹೊತ್ತಷ್ಟೇ ಬಸ್‌ಗಳು ಸಂಚರಿಸುತ್ತಿದ್ದು, ಉಳಿದ ಸಮಯದಲ್ಲಿ ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಕೆಲವೊಮ್ಮೆ ಪ್ರಯಾಣಿಕರಿಲ್ಲ ಎಂಬ ನೆಪದಲ್ಲಿ ಬಸ್‌ಗಳನ್ನೇ ಕ್ಯಾನ್ಸಲ್‌ ಮಾಡಲಾಗುತ್ತಿದೆ. ನೈಟ್‌ ಹಾಲ್ಟ್‌ ಬಸ್‌ಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಹಾಗಾಗಿ, ಮುಂಜಾನೆ ಹೊತ್ತು ಹಳ್ಳಿಗಳಿಂದ ನಗರಕ್ಕೆ ಬರುವವರಿಗೆ ತೊಂದರೆಯಾಗಿದೆ. ಬಸ್‌ ಸಿಗದೆ ಸಾವು
  • ಗದಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಮಧ್ಯಾಹ್ನ ತರಗತಿ ಮುಗಿಸಿ ಮನೆಗೆ ಹೋಗಲು ಬಸ್‌ ಸಿಗದೆ ಇದ್ದಾಗ, ಬಿಸಿಲಿನಲ್ಲೇ ನಡೆದು ಹೋಗುತ್ತಿದ್ದಳು. ಆಗ ಬವಳಿ ಬಂದು ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ.
  • ಬೆಳಗಾವಿ ಜಿಲ್ಲೆಯಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಬೆಳಗ್ಗೆ ಬಸ್‌ ಇಲ್ಲದೆ ಇರುವುದರಿಂದ ಆಗಷ್ಟೇ ಕಲಿತಿದ್ದ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ತಿರುವಿನಲ್ಲಿಸ್ಕಿಡ್‌ ಆಗಿ ಪ್ರಾಣ ಕಳೆದುಕೊಂಡಿದ್ದಾಳೆ.
ಬಸ್‌ಗಳಿವೆ ಟ್ರಿಪ್‌ ಮಾಡುತ್ತಿಲ್ಲ ನಿಗಮದ ಅಧಿಕಾರಿಗಳು ಬಹುತೇಕ ಎಲ್ಲ ಬಸ್‌ ಬಿಟ್ಟಿದ್ದೇವೆ ಎನ್ನುತ್ತಾರೆ. ಆದರೆ, ಎಲ್ಲ ಬಸ್‌ಗಳು ಹಿಂದಿನಂತೆ ಟ್ರಿಪ್‌ ಮಾಡುತ್ತಿವೆ. ಮಧ್ಯಾಹ್ನದ ಹೊತ್ತಿನಲ್ಲಿ ಬಸ್‌ಗಳೇ ಸಂಚರಿಸುವುದಿಲ್ಲ. ಇದಕ್ಕೆ ಪ್ರಯಾಣಿಕರಿಲ್ಲ ಎಂಬ ನೆಪ ಹೇಳಲಾಗುತ್ತಿದೆಯಾದರೂ ಈ ಹೊತ್ತಿನಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಖಾಸಗಿ ವಾಹನಗಳನ್ನು ಅವಲಂಬಿಸುವುದು ಕಾಣುತ್ತಿದೆ. ಯಾರಿಗೆಲ್ಲ ತೊಂದರೆ?
  • ಬೆಳಗ್ಗೆ ಕಚೇರಿ, ಶಾಲೆ, ಕಾಲೇಜಿಗೆ ಹೋಗಿಬರುವವರಿಗೆ
  • ಮಧ್ಯಾಹ್ನದ ಹೊತ್ತು ಬಸ್ಸಿಲ್ಲದೆ ತರಗತಿ ಮುಗಿದರೂ ವಿದ್ಯಾರ್ಥಿಗಳು ಸಂಜೆ ತನಕ ಕಾಯುವಂತಾಗಿದೆ.
  • ಸಂಜೆಯಾದ ನಂತರ ನಗರದಿಂದ ಹಳ್ಳಿ ಕಡೆಗೆ ಬಸ್ಸೇ ಕಡಿಮೆ
  • ಖಾಸಗಿ ಬಸ್‌ಗಳಿರುವಲ್ಲೂ ಇದೇ ಸಮಸ್ಯೆ
  • ಹೆಚ್ಚಿನ ಸಮಯ ಪ್ರಯಾಣಿಕರು ತುಂಬದೆ ಬಸ್‌ ಬಿಡುತ್ತಿಲ್ಲ
ನಿರೀಕ್ಷಿತ ಆದಾಯದ ಕೊರತೆ ಎಲ್ಲ ಟ್ರಿಪ್‌ ಓಡಿಸಲು ನಿರೀಕ್ಷಿತ ಆದಾಯದ ಕೊರತೆಯ ನೆಪ ಒಡ್ಡಲಾಗುತ್ತಿದೆ. ಆದರೆ, ಜನರಿಗೆ ಬೇಕಾದ ಹೊತ್ತಲ್ಲಿ ಬಸ್‌ ಓಡಿಸಿದರೆ, ಎಲ್ಲ ಟ್ರಿಪ್‌ಗಳನ್ನೂ ಸರಿಯಾಗಿ ನಡೆಸಿದರೆ ಸಮಸ್ಯೆಯಾಗದು ಎನ್ನುವುದು ಸಾರ್ವಜನಿಕರ ಮಾತು. ಸಂಚಾರಕ್ಕಿಳಿದ ಬಸ್‌ಗಳು
  • ವಾಯುವ್ಯ ಸಾರಿಗೆ: ಹಿಂದೆ 4664, ಈಗ 4295
  • ಈಶಾನ್ಯ ಸಾರಿಗೆ: ಹಿಂದೆ 0000, ಈಗ 0000
  • ಕೆಎಸ್ಸಾರ್ಟಿಸಿ: ಹಿಂದೆ 0000, ಈಗ 000
  • ಬಿಎಂಟಿಸಿ: ಹಿಂದೆ 0000, ಈಗ 0000


from India & World News in Kannada | VK Polls https://ift.tt/36AYRIr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...