ಕಡಬದ ಮನೆಯ ಶೌಚಾಲಯದಲ್ಲಿ ಚಿರತೆ: ಮನೆ ಮಾಲಕಿ ಜಯಲಕ್ಷ್ಮಿ ದಿಟ್ಟತನಕ್ಕೆ ಸಲಾಂ!

ಕಡಬ: ಕಡಬದ ಮನೆಯೊಂದರಲ್ಲಿ ನಾಯಿಯನ್ನು ಓಡಿಸಿಕೊಂಡು ಬಂದ ಚಿರತೆ ಶೌಚಾಲಯದಲ್ಲಿ ಬಂಧಿಯಾಗಿತ್ತು. ನಂತರ ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದರು ಕೂಡ ಅದು ಸಫಲವಾಗಿಲ್ಲ. ಆದರೆ ಚಿರತೆಯನ್ನು ಶೌಚಾಲಯದಲ್ಲಿ ಕೂಡಿಡುವಲ್ಲಿ ಮನೆ ಮಾಲಕಿ ಜಯಲಕ್ಷ್ಮೀ ಯಶಸ್ವಿಯಾಗಿದ್ದಾರೆ. ಅವರ ದಿಟ್ಟ ತನಕ್ಕೆ ಇದೀಗ ಸಾರ್ವಜನಿಕರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜಯಲಕ್ಷಿತ್ರ್ಮೕ ಅವರ ಗಂಡ ವೆಂಕಪ್ಪ ಗೌಡ ಕೆಲ ಸಮಯದ ಹಿಂದೆ ತೀರಿಕೊಂಡಿದ್ದು, ಮಕ್ಕಳು ಬೇರೆ ಕಡೆ ಇದ್ದಾರೆ. ಒಬ್ಬಂಟಿಯಾಗಿರುವ ಇವರು ಹಗಲು ಹೊತ್ತು ಮನೆಯಲ್ಲಿದ್ದರೂ, ರಾತ್ರಿ ಮಾತ್ರ ಪಕ್ಕದಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ತಂಗುತ್ತಿದ್ದರು. ಬುಧವಾರ ಮುಂಜಾನೆ ಮನೆಗೆ ಬಂದಾಗ ಶೌಚಾಲಯದಲ್ಲಿ ಚಿರತೆ ಇರುವುದು ಗೊತ್ತಾಗಿದೆ. ಹಠಾತ್‌ ದಿಟ್ಟತನ ತೋರಿದ ಅವರು ತಕ್ಷಣ ಬಾಗಿಲು ಹಾಕುವ ಮೂಲಕ ಚಿರತೆಯನ್ನೇ ಬಂಧಿಸುವ ಧೈರ್ಯ ತೋರಿದರು. ಅವರು ಬಂಧಿಸಿಕೊಟ್ಟರೂ ಇಲಾಖೆಗೆ ಮಾತ್ರ ಸೆರೆ ಹಿಡಿಯಲು ಸಾಧ್ಯವಾಗದೇ ಹೋಯಿತು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇವರು ತೋರಿದ ಧೈರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕಾರ್ಯಾಚರಣೆ ವಿಫಲಗೊಂಡ ಬಳಿಕ ಅಧಿಕಾರಿಗಳು ನಾಯಿಯನ್ನು ಹೊರ ತಂದರು. ಯಜಮಾನಿ ಜಯಲಕ್ಷ್ಮಿ ಅವರನ್ನು ಕಂಡೊಡನೆ ನಾಯಿ ತನ್ನೆಲ್ಲ ಭಯ ಮರೆತು ಬಾಲ ಅಲ್ಲಾಡಿಸುತ್ತಾ ಅವರ ಪಕ್ಕದಲ್ಲಿ ನಿರಾಳತೆಯಿಂದ ನಿಟ್ಟುಸಿರು ಬಿಟ್ಟಿತು. ನಾಯಿಗೆ ಜೀವದಾನ ಮಾಡಿದ ಚಿರತೆಯ ಬಗ್ಗೆ ಸಾರ್ವಜನಿಕರಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಸಾಕು ನಾಯಿ ಬಚಾವ್‌!ಚಿರತೆಗೆ ನಾಯಿಯೇ ಪ್ರಧಾನ ಬೇಟೆ. ನಾಯಿ ತಿನ್ನಲೆಂದೇ ಮಧ್ಯರಾತ್ರಿ ಅಟ್ಟಿಸಿಕೊಂಡು ಬಂದಿತ್ತು. ಭಯದಿಂದ ಕಂಗೆಟ್ಟ ನಾಯಿ ಶೌಚಾಲಯ ಹೊಕ್ಕಿತ್ತು. ಜತೆಯಲ್ಲೇ ಬಂದು ತಾನೂ ಶೌಚಾಲಯಕ್ಕೆ ನುಗ್ಗಿದ ಚಿರತೆಗೆ ಮತ್ತೇನಾಯಿತೋ ಗೊತ್ತಿಲ್ಲ. ಅಲ್ಲೇ ಮಲಗಿ ನಿದ್ರಿಸಿತು. ನಾಯಿ ಮಾತ್ರ ಮೃತ್ಯುವಿನ ಎದುರಲ್ಲೇ ಪ್ರಾಣ ಕೈಯ್ಯಲ್ಲಿ ಹಿಡಿದುಕೊಂಡು ಕಾಲ ಕಳೆಯಿತು. ಬುಧವಾರ ಬೆಳಗ್ಗೆ ಜನ ಸೇರಿ, ಇಲಾಖೆ ಕಾರ್ಯಾಚರಣೆ ಆರಂಭಿಸಿ ಅರ್ಧ ದಿನ ಕಳೆದಿದ್ದರೂ ಅಲ್ಲಿಯವರೆಗೂ ಚಿರತೆ ಮಾತ್ರ ನಾಯಿ ಮೇಲೆ ದಾಳಿ ಮಾಡಿಲ್ಲ. ಕೊನೆಗೂ ಅದು ತನ್ನ ಸ್ವಂತ ಬಲದಿಂದ ಪರಾಕ್ರಮ ಮೆರೆದು ಓಡಿ ತಪ್ಪಿಸಿಕೊಂಡಿತೇ ಹೊರತು, ನಾಯಿಗೆ ಏನೂ ಮಾಡಿಲ್ಲ. ಈ ಚಿರತೆ ಈಗಾಗಲೇ ಸುಮಾರು 40ಕ್ಕೂ ಮಿಕ್ಕಿದ ನಾಯಿಗಳನ್ನು ತಿಂದು ಮುಗಿಸಿದೆ ಎನ್ನುತ್ತಿದ್ದಾರೆ ಸ್ಥಳೀಯರು.


from India & World News in Kannada | VK Polls https://ift.tt/3oNEazh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...