ಕಾರ್ಮಿಕರ ವೇತನ ಸಹಿತ ರಜೆಯನ್ನು 45ಕ್ಕೇರಿಸುವ ವಿಧೇಯಕಕ್ಕೆ ಸದನದಲ್ಲಿ ಅನುಮೋದನೆ

ಬೆಂಗಳೂರು: ವರ್ಷಕ್ಕೆ ಕಾರ್ಮಿಕರ ಸಂಖ್ಯೆಯನ್ನು 30 ರಿಂದ 45ಕ್ಕೆ ಹೆಚ್ಚಿಸುವ 2020ನೇ ಸಾಲಿನ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (2ನೇ ತಿದ್ದುಪಡಿ) ವಿಧೇಯಕಕ್ಕೆ ಸದನ ಅನುಮೋದನೆ ನೀಡಿತು. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌, ಉದ್ಯಮಗಳಿಗೆ ಅನುಕೂಲ ಮತ್ತು ಕಾರ್ಮಿಕ ಹಿತರಕ್ಷಣೆಗೂ ಸರಕಾರ ಬದ್ಧವಾಗಿದೆ. ಇದುವರೆಗೆ ಒಬ್ಬ ಕಾರ್ಮಿಕ ವರ್ಷಕ್ಕೆ 30 ದಿನ ಸಂಬಳ ಸಹಿತ ರಜೆ ಪಡೆಯಲು ಇದ್ದ ಅವಕಾಶವನ್ನು 45 ದಿನಕ್ಕೆ ಹೆಚ್ಚಳ ಹಾಗೂ ಆ ವರ್ಷದಲ್ಲಿ ಕಾರ್ಮಿಕ ರಜೆ ಬಳಸಿಕೊಳ್ಳದಿದ್ದಲ್ಲಿ ಮುಂದಿನ ವರ್ಷಕ್ಕೂ ಕ್ಯಾರಿಒವರ್‌ (ಮುಂದುವರಿಕೆ) ಆಗಲಿದೆ ಎಂದರು. ಆಂಧ್ರದಲ್ಲಿ 65, ತಮಿಳುನಾಡಿನಲ್ಲಿ 45, ಮಧ್ಯಪ್ರದೇಶದಲ್ಲಿ 90 ದಿನ, ಗುಜರಾತ್‌ನಲ್ಲಿ 67 ದಿನದ ವೇತನ ಸಹಿತ ರಜೆ ಪಡೆಯುವ ಕಾನೂನು ಜಾರಿಯಲ್ಲಿದೆ ಎಂದು ಸಮರ್ಥನೆ ಮಾಡಿಕೊಂಡರು. ಬಿಜೆಪಿಯ ಆರಗ ಜ್ಞಾನೇಂದ್ರ , ಕಾಂಗ್ರೆಸ್‌ನ ಆನಂದ ಸಿದ್ದುನ್ಯಾಮಗೌಡ ಪ್ರಸ್ತಾಪದ ಮೇಲೆ ಮಾತನಾಡಿದರು. ಚರ್ಚೆ ಇಲ್ಲದೆ ಅನುಮತಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರ ಸಂಖ್ಯೆಯನ್ನು 17 ರಿಂದ 14ಕ್ಕೆ ಇಳಿಸುವ 2020ನೇ ಸಾಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆ ಅಂಗೀಕರಿಸಿದೆ. ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್‌.ಶಂಕರ್‌ ಅವರು ತಿದ್ದುಪಡಿ ವಿಧೇಯಕ ಕುರಿತು ವಿವರಣೆ ನೀಡಿದ ಬಳಿಕ ಸದನ ಯಾವುದೇ ರೀತಿಯ ಚರ್ಚೆ ಇಲ್ಲದೆ ಅನುಮತಿ ನೀಡಿತು.


from India & World News in Kannada | VK Polls https://ift.tt/2YHRNp0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...