ಪುತ್ತೂರು: ಪ್ರಾಣ ಕೈಯಲ್ಲಿಟ್ಟುಕೊಂಡು ಬದುಕುತ್ತಿದೆ ಬಡ ಜೀವಗಳು, ಕಚೇರಿಗಳಿಗೆ ಅಲೆದರು ಯುವತಿ ಕುಟುಂಬಕ್ಕೆ ಮೋಸ!

ಪುತ್ತೂರು: ಒಂದೆಡೆ ಕುಸಿಯುವ ಹಂತದಲ್ಲಿರುವ ಜೋಪಡಿ ರೂಪದ ಮನೆ, ಮತ್ತೊಂದೆಡೆ ಅನಾರೋಗ್ಯ ಪೀಡಿತ ಹೆತ್ತವರು. ಈ ಎಲ್ಲ ಸಮಸ್ಯೆಗಳನ್ನು ಹೊತ್ತುಕೊಂಡು ಕಚೇರಿಯಿಂದ ಕಚೇರಿಗೆ ಹಲವು ವರ್ಷಗಳಿಂದ ಅಲೆಯುತ್ತಿರುವ ಯುವತಿಯ ಕೌಟುಂಬಿಕ ಬದುಕು ಸಮಸ್ಯೆಯ ಸುಳಿಯಲ್ಲಿ ಬಿದ್ದು ಒದ್ದಾಡುತ್ತಿದೆ. ಈ ಮಧ್ಯೆ, ಬಡ ಕುಟುಂಬಕ್ಕೆ ನೆರವು ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿದ ಕೇರಳ ಮೂಲದ ಸಂಸ್ಥೆಯೊಂದು ಆ ಹಣವನ್ನು ಬಡ ಕುಟುಂಬಕ್ಕೆ ನೀಡದೆ ವಂಚಿಸಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ವಿದ್ಯಮಾನ ನಡೆದಿರುವುದು ನಗರಸಭಾ ವ್ಯಾಪ್ತಿಯಲ್ಲಿ ಬರುವ ಕೆಮ್ಮಿಂಜೆ ಗ್ರಾಮದ ಮಂದಾರಬೈಲ್‌ ಎಂಬಲ್ಲಿ. ಪ್ರಕಾಶ್‌ ಪೂಜಾರಿ ಹಾಗೂ ಮೀನಾಕ್ಷಿ ದಂಪತಿಗಳ ಮನೆ ಮತ್ತು ಆರೋಗ್ಯ ಎರಡೂ ಸಂಕಟಮಯವಾಗಿದ್ದು, ಮಗಳು ಸುರಕ್ಷಾ ಈ ಬದುಕಿನ ರಥವನ್ನು ಸಮರ್ಪಕಗೊಳಿಸಲು ಹೆಣಗಾಡುತ್ತಿದ್ದಾರೆ. 25 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಈ ಕುಟುಂಬ ವಾಸಿಸುತ್ತಿದೆ. 2018ರಲ್ಲಿ 94ಸಿಸಿ ಯೋಜನೆಯಡಿ 2.5 ಸೆಂಟ್ಸ್‌ ನಿವೇಶನ ಪ್ರಕಾಶ್‌ ಪೂಜಾಯವರಿಗೆ ನೀಡಲಾಗಿದೆ. ಇದರಲ್ಲಿರುವ ಹಳೆಯ ಮನೆ ಕುಸಿದಿದ್ದು, ಅಸುರಕ್ಷಿತ ಸ್ಥಿತಿಯಲ್ಲೇ ವಾಸಿಸುತ್ತಿದ್ದಾರೆ. ಸುರಕ್ಷಾ ತನ್ನ ಹೆತ್ತವರು ಮತ್ತು ತಮ್ಮ ಜತೆ ವಾಸವಾಗಿದ್ದು, ಕಳೆದ ಹಲವು ವರ್ಷಗಳಿಂದ ಮನೆ, ನಿವೇಶಕ್ಕಾಗಿ ಕಚೇರಿ ಕಚೇರಿಗೆ ಅಲೆಯುತ್ತಾ ಬಂದಿದ್ದರೂ ನ್ಯಾಯ ಸಿಕ್ಕಿರಲಿಲ್ಲ. ಈ ನಡುವೆ, ಕೇರಳ ಮೂಲದ ಸಂಸ್ಥೆಯೊಂದು ಇವರನ್ನು ಸಂಪರ್ಕಿಸಿ ದಾನಿಗಳಿಂದ 10 ಲಕ್ಷ ರೂ. ಸಂಗ್ರಹಿಸಿ ಮನೆ ಕಟ್ಟಿ ಕೊಡುವುದಾಗಿ ಹೇಳಿತ್ತು. ಮನೆಯ ಸ್ಥಿತಿಗತಿಯನ್ನು ಚಿತ್ರೀಕರಣ ಮಾಡಿ ವಿಡಿಯೋ ವೈರಲ್‌ ಮಾಡಲಾಗಿತ್ತು. ಈ ಮೂಲಕ ಸುಮಾರು ಐದು ಲಕ್ಷ ರೂ. ಸಂಗ್ರಹವಾಗಿದೆ ಎನ್ನಲಾಗಿದ್ದು, ಹಣವನ್ನು ಕುಟುಂಬಕ್ಕೆ ನೀಡದೆ ಸತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅವರ ಮಾತು ನಾವು ನಂಬಿದೆವು. ಆದರೆ ನಮಗೆ ಇನ್ನೂ ಯಾವುದೇ ನೆರವು ಸಿಕ್ಕಿಲ್ಲ ಎಂದು ಪ್ರಕಾಶ್‌ ಪೂಜಾರಿ ತಿಳಿಸಿದ್ದಾರೆ. 5 ವರ್ಷಗಳಿಂದ ಮನೆ ಹಾಗೂ ನಿವೇಶನಕ್ಕಾಗಿ ಅಲೆದಾಡುತ್ತಾಗ ಅಧಿಕಾರಿಗಳಾಗಲಿ, ಆಡಳಿತವಾಗಲಿ ನೆರವಿಗೆ ಬಂದಿರಲಿಲ್ಲ ಎಂಬ ಕೊರಗು ಈ ಕುಟುಂಬಕ್ಕಿದೆ. ಕೇರಳ ಮೂಲದ ಸಂಸ್ಥೆ ದಾನಿಗಳಿಂದ ಸಂಗ್ರಹಿಸಿದ ಹಣ ನೀಡದೆ ಸತಾಯಿಸುತ್ತಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಹಿಂದೂ ಸಂಘಟನೆಗಳ ನಾಯಕರು ಹಾಗೂ ನಗರಸಭೆ ಆಡಳಿತ ವರ್ಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿ, ಧೈರ್ಯ ತುಂಬಿದರು. ಮತಾಂತರದ ಒತ್ತಡ ಇದೆ ಎಂಬ ವದಂತಿಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ನಗರಸಭಾ ಅಧ್ಯಕ್ಷ ಜೀವಂಧರ್‌ ಜೈನ್‌, ಉಪಾಧ್ಯಕ್ಷೆ ವಿದ್ಯಾಗೌರಿ, ಸದಸ್ಯ ಪಿ.ಜಿ. ಜಗನ್ನಿವಾಸ್‌ ರಾವ್‌, ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಭೇಟಿ ನೀಡಿದ ಪ್ರಮುಖರದಲ್ಲಿಸೇರಿದ್ದಾರೆ.


from India & World News in Kannada | VK Polls https://ift.tt/3jhZziE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...