ರೈಲು ಡಿಕ್ಕಿ ಹೊಡೆದು ಅಳಿವಿನಂಚಿನಲ್ಲಿರುವ ಅಪರೂಪದ ಕಪ್ಪು ಚಿರತೆ ಸಾವು..!

: ತಾಲೂಕಿನ ಬಡಾಕೆರೆ ಎಂಬಲ್ಲಿ ರೈಲಿಗೆ ಸಿಲುಕಿ ಕಪ್ಪು ವರ್ಣದ ಚಿರತೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪರೂಪದಲ್ಲಿ ಅಪರೂಪವಾಗಿರುವ ಈ ಸಂಖ್ಯೆ ಬಹಳ ವಿರಳವಾಗಿದ್ದು, ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಈ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ಹೇಳಲಾಗ್ತಿದೆ. ಅಂದಾಜು 4 ಹರೆಯದ ದಷ್ಟಪುಷ್ಟ ಕಾಯದ ತೀರಾ ವಿರಳವಾಗಿರುವ ಚಿರತೆ ಆಕಸ್ಮಿಕ ರೈಲಿಗೆ ಸಿಲುಕಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಮಂಗಳವಾರ ನಸುಕಿನ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕಾಗಮಿಸಿ ಸತ್ತ ಚಿರತೆಯ ಅಂತ್ಯವಿಧಿ ನೆರವೇರಿಸಿದ್ದಾರೆ. ಕರಿ ಚಿರತೆ ಹೋಲುವಿಕೆ: ಕರಿ ಚಿರತೆ ಈ ಭಾಗದಲ್ಲಿಲ್ಲ. ಜೆನೆಟಿಕ್‌ ದೋಷದಿಂದ ಕಪ್ಪು ವರ್ಣಕ್ಕೆ ತಿರುಗುತ್ತವೆ. ನಮ್ಮಲ್ಲಿ ತೀರಾ ವಿರಳ ಸಂಖ್ಯೆಯಲ್ಲಿ ಈ ರೀತಿಯ ಚಿರತೆಗಳಿವೆ. ಆಹಾರ ಅರಸಿ ನಾಡಿಗೆ ಬಂದಿದ್ದ ಇದು ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಶಂಕೆಯಿದೆ. ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯವಿಧಿ ನೆರವೇರಿಸಲಾಗಿದೆ. ಮೇಲ್ನೋಟಕ್ಕೆ ಕರಿಚಿರತೆ ಅಂತೆ ಕಾಣುವ ಇದು ಕರಿಚಿರತೆ ಅಲ್ಲ. ಕಪ್ಪು ವರ್ಣದ ಚಿರತೆ ಎಂದು ಆರ್‌ಎಫ್‌ಓ ಪ್ರಭಾಕರ ಕುಲಾಲ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/3pNgLiO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...