ವಾಣಿಜ್ಯ ವಾಹನಗಳಿಗೆ ಗ್ರೀನ್‌ಟ್ಯಾಕ್ಸ್‌: ಏಕಾಏಕಿ ನಿಯಮ ಹೇರಿಕೆಗೆ ರಾಜ್ಯಾದ್ಯಂತ ತೀವ್ರ ವಿರೋಧ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರಬೆಂಗಳೂರು: ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಮಾಲಿನ್ಯವನ್ನು ನಿಯಂತ್ರಣ ಮಾಡಲು ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ ಗ್ರೀನ್‌ಟ್ಯಾಕ್ಸ್‌ ಎನ್ನುವ ಪದ್ಧತಿಯನ್ನು ಜಾರಿಗೊಳಿಸುತ್ತಿದೆ. 2022ರ ಏ.1ರಿಂದ ತೆರಿಗೆ ವ್ಯವಸ್ಥೆ ಜಾರಿಯಾಗಲಿದ್ದು, 8ವರ್ಷ ಪೂರೈಸಿದ ವಾಣಿಜ್ಯೋದ್ದೇಶ ವಾಹನಗಳು ರಸ್ತೆ ತೆರಿಗೆಯ ಮೇಲೆ ಶೇ.10ರಿಂದ 25ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ದೇಶದಲ್ಲಿ ಹೆಚ್ಚು ಮಾಲಿನ್ಯ ಪೀಡಿತ ನಗರಗಳಾದ ದಿಲ್ಲಿ, ಕೊಲ್ಕತಾ, ಚೆನೈ, ಮುಂಬೈ, ಬೆಂಗಳೂರು, ಪೂನಾಗಳಲ್ಲಿ ಶೇ.50ರವರೆಗೆ ಈ ತೆರಿಗೆ ಏರಿಕೆಯಾಗಲಿದೆ. ಆವಿಷ್ಕಾರದ ಕೊರತೆದೇಶಾದ್ಯಂತ ತಯಾರಿಕಾ ಕಂಪನಿಗಳು ಯೂರೋ-6 ಎಂಜಿನ್‌ ಬಳಕೆ ಮಾಡಿಕೊಂಡು ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಆದರೆ, ಯೂರೋ-6ಕ್ಕೆ ಅಗತ್ಯ ಪ್ರಮಾಣದ ಆಯಿಲ್‌ ಪೂರೈಸಬಲ್ಲ ತಯಾರಿಕಾ ರೀಫೈನರಿಗಳಿಲ್ಲ. ಸರಕಾರಗಳು ಮಾಲಿನ್ಯ ಕಡಿಮೆ ಮಾಡುವ ನೆಪದಲ್ಲಿ ದೇಶದ ನಾಗರಿಕರ ಮೇಲೆ ಕಾನೂನು ಜಾರಿ ಮಾಡುವ ಮುನ್ನ ತಂತ್ರಜ್ಞಾನದ ಆವಿಷ್ಕಾರಕ್ಕೆ ಮಹತ್ವ ನೀಡಬೇಕಿದೆ. ಯೂರೋ-3, ಯೂರೋ-4 ಎಂಜಿನ್‌ಗಳಿರುವ ಹಳೆ ವಾಹನಗಳಲ್ಲಿ ಎಂಜಿನ್‌ ಬದಲಾವಣೆ ಸೇರಿದಂತೆ ಪರಿಸರಕ್ಕೆ ಮಾಲಿನ್ಯಕಾರುವ ಉಪಕರಣಗಳ ಬದಲಾಯಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಿದರೆ ಖಚಿತವಾಗಿ ಉಪಯೋಗವಿದೆ ಎಂದು ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘ ತಿಳಿಸಿದೆ. ಸ್ಕ್ರಾಪಿಂಗ್‌ ಗೊಂದಲ ದೇಶಾದ್ಯಂತ 15ವರ್ಷ ಮೇಲ್ಪಟ್ಟ ವಾಹನಗಳನ್ನು ವಯೋಮಾನದ ಆಧಾರದ ಮೇಲೆ ಸ್ಕ್ರಾಪಿಂಗ್‌ ಮಾಡಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ವಾಹನದ ಸಾಮರ್ಥ್ಯ(ಕಂಡೀಶನ್‌) ಚೆನ್ನಾಗಿದ್ದರು ಕೇವಲ ವಯೋಮಾನ ಪರಿಗಣಿಸಿ ಸ್ಕ್ರಾಪ್‌ ಮಾಡುವುದು ಸರಿಯಲ್ಲ. ಇದರಿಂದಾಗಿ ವಿನಾಕಾರಣ ಸಂಪನ್ಮೂಲಗಳ ನಾಶವಾಗುವುದು ಮಾತ್ರವಲ್ಲದೆ ಮಾಲೀಕರಿಗೆ ಹೆಚ್ಚಿನ ಹೊರೆ ಬೀಳುತ್ತದೆ. ಜತೆಗೆ, ಸ್ಕ್ರಾಪಿಂಗ್‌ ವಾಹನದ ಮಾಲೀಕರಿಗೆ ನೀಡಲಾಗುವ ತೆರಿಗೆ ವಿನಾಯಿತಿಯ ವಿಚಾರಗಳು ಅಸ್ಪಷ್ಟವಾಗಿದ್ದು, ಸರಕಾರಗಳು ಕೂಡಲೇ ಈ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕಿದೆ ಎಂಬುದು ಟ್ರಾವೆಲರ್‌ಗಳ ಅಭಿಪ್ರಾಯ. ಸಾರಿಗೆ ಸಚಿವಾಲಯದ ಹೊಸ ರೂಲ್ಸ್‌
  • 8ವರ್ಷ ಮುಗಿದ ಹಳೆ ವಾಹನಗಳಿಗೆ ಗ್ರೀನ್‌ ಟಾಕ್ಸ್‌ ಕಡ್ಡಾಯ
  • ರಸ್ತೆ ತೆರಿಗೆಯ ಮೇಲೆ ಶೇ.10ರಿಂದ 25ರಷ್ಟು ಹೆಚ್ಚಿನ ತೆರಿಗೆ
  • ಫಿಟ್ನೆಸ್‌ ಸರ್ಟಿಫಿಕೇಟ್‌(ಎಫ್‌ಸಿ) ರಿನೀವಲ್‌ ವೇಳೆ ತೆರಿಗೆ ವಿಧಿಸಲಾಗುತ್ತದೆ.
  • ನಗರ ಪ್ರದೇಶದ ಸಾರ್ವಜನಿಕ ಸಾರಿಗೆಗೆ ತೆರಿಗೆ ಕಡಿಮೆ
  • ಗರಿಷ್ಠ ವಾಯುಮಾಲಿನ್ಯವುಳ್ಳ ನಗರಗಳಲ್ಲಿ ಶೇ.50ಕ್ಕೂ ಹೆಚ್ಚಿನ ಗ್ರೀನ್‌ ಟಾಕ್ಸ್‌.
  • ಎಲೆಕ್ಟ್ರಿಕ್‌ ಬಸ್‌, ಸಿಎನ್‌ಜಿ ಬಸ್‌, ಎಥನಾಲ್‌ ಸೇರಿದಂತೆ ನೈಸರ್ಗಿಕ ಇಂಧನ ಬಳಸುವ ವಾಹನಗಳಿಗೆ ತೆರಿಗೆಯಿಂದ ವಿನಾಯಿತಿ.
  • 2022 ಏ.1ರಿಂದ ತೆರಿಗೆ ವ್ಯವಸ್ಥೆ ಜಾರಿಗೆ ಆದೇಶ
ಪ್ರಮುಖಾಂಶಗಳು
  • ರಾಜ್ಯಾದ್ಯಂತ 22ಲಕ್ಷ ವಾಣಿಜ್ಯೋದ್ದೇಶ ವಾಹನಗಳು
  • ಕೇಂದ್ರ ಸರಕಾರದ ಪ್ರಕಾರ ಗ್ರೀನ್‌ಟ್ಯಾಕ್ಸ್‌ನಿಂದ ಶೇ.5ರಷ್ಟು ಹಳೆವಾಹನಗಳ ಇಳಿಕೆ, ಶೇ.65ರಿಂದ 70ರಷ್ಟು ಮಾಲಿನ್ಯ ಇಳಿಕೆ
  • ವಯೋಮಾನದ ಆಧಾರಕ್ಕಿಂದ ವಾಹನದ ಗುಣಮಟ್ಟ ಆಧಾರದ ಮೇಲೆ ಕಾನೂನು ರೂಪಿಸಿ ಎಂಬುದು ಟ್ರಾವೆಲರ್‌ಗಳ ಒತ್ತಾಯ
  • ವಾಣಿಜ್ಯೋದ್ದೇಶಕ್ಕೆ ರಸ್ತೆಗಿಳಿಯುವ ಟ್ಯಾಕ್ಸಿಗಳು, ಬಸ್‌, ಮಿನಿಬಸ್‌, ಟ್ರಕ್‌, ಲಾರಿ, ಟೆಂಪೋ ಇತರೆ ವಾಹನಗಳಿಗೆ ಹೊರೆ
ಚಾಲ್ತಿಯಲ್ಲಿರುವ ವ್ಯವಸ್ಥೆಗಳು
  • 8ವರ್ಷದ ಬಳಿಕ ಪ್ರತಿ 2ವರ್ಷಕ್ಕೊಮ್ಮೆ ಎಫ್‌ಸಿ
  • 3ವರ್ಷದ ಮೇಲೆ ಪ್ರತಿ 6ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣಾ ವ್ಯವಸ್ಥೆ
  • ಯೂರೋ-4ರಿಂದ ಯೂರೋ-6 ಎಂಜಿನ್‌ ವಾಹನಗಳು ಪ್ರಸ್ತುತ ಚಾಲ್ತಿಯಲ್ಲಿವೆ.
ವಾಹನಗಳ ವಯೋಮಾನದ ಆಧಾರದ ಮೇಲೆ ಸ್ಕ್ರಾಪಿಂಗ್‌, ಗ್ರೀನ್‌ ಟ್ಯಾಕ್ಸ್‌ ಹೇರಿಕೆಯನ್ನು ಸರಕಾರ ಶೀಘ್ರವೇ ಹಿಂಪಡೆಯಬೇಕಿದ್ದು, ಹಳೇವಾಹನಗಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ಮಾಲಿನ್ಯ ಪ್ರಮಾಣ ಇಳಿಕೆಗೆ ಪ್ರಯತ್ನಿಸಬೇಕಿದೆ. ಕೆ ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘ


from India & World News in Kannada | VK Polls https://ift.tt/3pMWDwY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...