ಮೂಡಬಿದಿರೆ: ಕೊರಗಜ್ಜನ ನೇಮೋತ್ಸವದ ವೇಳೆ ಮುಸ್ಲಿಂ ಮಹಿಳೆಗೆ ಆವೇಶ, ವಿಡಿಯೋ ವೈರಲ್‌!

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಂಟಲ್ಕಾಟ್ಟೆ ಮನೆಯೊಂದರಲ್ಲಿ ನಡೆದ ಕೊರಗಜ್ಜ ದೈವಾರಾಧನೆ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ಆವೇಶ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗುತ್ತಿದೆ. ಗಂಟಲ್ಕಾಟ್ಟೆ ಮನೆಯೊಂದರ ಕೊರಗಜ್ಜನ ಗುಡಿಯಲ್ಲಿ ನೇಮ ಭಾನುವಾರ ನಡೆದಿದ್ದು, ಈ ಸಂದರ್ಭದಲ್ಲಿ ಮಧ್ಯ ವಯಸ್ಕ ಮಹಿಳೆಗೆ ಆವೇಶ ಬಂದಿದೆ. ಅವೇಶದ ಸಂದರ್ಭದಲ್ಲಿ ಮಹಿಳೆ ತುಳುವಿನಲ್ಲಿ ಮಾತನಾಡಿದ್ದು, ಅಸ್ಪಷ್ಟವಾಗಿ ಕೇಳುತ್ತಿದೆ. ಒಬ್ಬ ತಮ್ಮ ವಿದೇಶದಲ್ಲಿರುವ ಬಗ್ಗೆ ಪ್ರಾಸ್ತಾವಿಸುವ ಮಾತುಗಳು ಆವೇಶ ಬಂದ ಮಹಿಳೆಯಿಂದ ಬಾಯಿಯಿಂದ ಕೇಳಿ ಬರುತ್ತಿದೆ. ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಕೊರಗಜ್ಜನ ಶಕ್ತಿ ಬಗ್ಗೆ ಜನರು ಕೊಂಡಾಡುತ್ತಿದ್ದಾರೆ. ತುಳುನಾಡಿನ ಶಕ್ತಿ ಕೊರಗಜ್ಜ! ದೇವರ ಆರಾಧನೆ ಜೊತೆ ಜೊತೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ದೈವದ ಆರಾಧನೆ ಮಾಡಲಾಗುತ್ತದೆ. ವರ್ಷಕ್ಕೆ ನೇಮೋತ್ಸವ ಕೂಡ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಅತ್ಯಂತ ಕಾರ್ಣಿಕ ದೈವ ಕೊರಗಜ್ಜ ಎನ್ನುವ ನಂಬಿಕೆ ಜನರಲ್ಲಿದೆ. ಅಜ್ಜನ ರೂಪದಲ್ಲಿರುವ ಕೊರಗಜ್ಜನ ನಂಬಿದರೆ, ಎಲ್ಲ ಕಷ್ಟಗಳು ದೂರವಾಗುತ್ತದೆ ಎಂದು ಇಲ್ಲಿನ ಜನ ನಂಬುತ್ತಾರೆ. ಕೊರಗಜ್ಜನ ಹಲವು ದೈವಸ್ಥಾನಗಳು ದಕ್ಷಿಣಕನ್ನಡದಲ್ಲಿ ಇದೆ. ‌


from India & World News in Kannada | VK Polls https://ift.tt/3cCjLea

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...