ದೀರ್ಘಾವಧಿ ಬಳಿಕ ತಂಡಕ್ಕೆ ಮರಳಿದ ಇಶಾಂತ್‌ಗೆ ಇದೀಗ ಮತ್ತೊಂದು ಕಂಟಕ!

ಚೆನ್ನೈ: ಗಾಯದಿಂದಾಗಿ ಹೆಚ್ಚಿನ ಆಯ್ಕೆಗಳು ಲಭ್ಯವಿಲ್ಲದೇ ಇದ್ದರೂ ಇಂಗ್ಲೆಂಡ್‌ ವಿರುದ್ಧ ಫೆ.5 ರಿಂದ ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡುವುದು ಟೀಮ್‌ ಇಂಡಿಯಾಗೆ ತಲೆ ಬಿಸಿ ಶುರುವಾಗಿದೆ. ಗಾಯದಿಂದ ಸಂಪೂರ್ಣ ಫಿಟ್‌ ಆಗಿರುವ ಹಿರಿಯ ವೇಗಿ , ಯುವ ಪ್ರತಿಭೆ ಜತೆ ಕಠಿಣ ಸ್ಪರ್ಧೆ ಎದುರಿಸಬೇಕಾಗಿದೆ. ಮೊದಲನೇ ಪಂದ್ಯಕ್ಕೆ ಟೀಮ್‌ ಇಂಡಿಯಾಗೆ ಮೂರು ದಿನಗಳ ಅಭ್ಯಾಸಕ್ಕೆ ಅವಕಾಶ ಸಿಕ್ಕಿದೆ. ಆದರೆ, ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದ ಪಿಚ್‌ ಸ್ಪಿನ್‌ಗೆ ಸಹಕಾರಿಯಾಗಿರುವುದರಿಂದ ಇಬ್ಬರು ವೇಗಿಗಳು ಹಾಗೂ ಮೂವರು ಸ್ಪಿನ್ನರ್‌ಗಳೊಂದಿಗೆ ಭಾರತ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಗಾಗಿ, ಇಬ್ಬರು ವೇಗಿಗಳನ್ನು ಆಡಿಸುವ ವಿಚಾರದಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಸಮಸ್ಯೆಗೆ ಸಿಲುಕಿದೆ. "ಚಿಪಾಕ್‌ ವಿಕೆಟ್‌ ಸ್ವಲ್ಪ ವಿಶಿಷ್ಠವಾಗಿದೆ. ಇಂಗ್ಲೆಂಡ್‌ ಅಥವಾ ಬೇರೆ ರೀತಿಯ ಅನುಭವವಾಗುವುದಿಲ್ಲ. ಇಲ್ಲಿನ ಆರ್ದ್ರತೆಗೆ ತಕ್ಕಂತೆ ಪಿಚ್‌ ಮೇಲೆ ಹುಲ್ಲು ಬೆಳೆದಿರಬೇಕು, ಆಗ ವಿಕೆಟ್‌ ಸುಲಭವಾಗಿ ಒಡೆಯುವುದಿಲ್ಲ. ಆ ಮೂಲಕ ಇಲ್ಲಿನ ವಿಕೆಟ್‌ ಸ್ಪಿನ್ನರ್‌ಗಳಿಗೆ ನೆರವಾಗಲಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಮೊದಲನೇ ಪಂದ್ಯದ ನಿಮಿತ್ತ ಹೆಡ್‌ ಕೋಚ್‌ ರವಿಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ನಾಯಕ ವಿರಾಟ್‌ ಕೊಹ್ಲಿಗೆ ಜಸ್‌ಪ್ರಿತ್‌ ಬುಮ್ರಾ ಜತೆ ಎರಡನೇ ವೇಗಿಯಾಗಿ ಯಾರನ್ನು ಕಣಕ್ಕೆ ಇಳಿಸಬೇಕೆಂಬ ತಲೆ ನೋವು ಶುರುವಾಗಿದೆ. ಆಸ್ಟ್ರೇಲಿಯಾದಲ್ಲಿ ತೊಡೆಸಂದು ನೋವಿಗೆ ಒಳಗಾಗಿದ್ದ ವೇಗಿ ಜಸ್‌ಪ್ರಿತ್‌ ಬುಮ್ರಾ, ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಕೊನೆಯ ಟೆಸ್ಟ್‌ ಆಡಿರಲಿಲ್ಲ. ಇದೀಗ ಅವರು ಫುಲ್‌ ಫಿಟ್‌ ಆಗಿದ್ದಾರೆ. ಒಂದು ವರ್ಷದಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಿರಿಯ ವೇಗಿ ಇಶಾಂತ್‌ ಶರ್ಮಾ ಅವರ ಬಗ್ಗೆ ಇದೀಗ ಪ್ರಶ್ನೆ ಉದ್ಭವವಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೊಹಮ್ಮದ್‌ ಸಿರಾಜ್‌ ಆಡಿದ ಮೂರು ಪಂದ್ಯಗಳಿಂದ 5 ವಿಕೆಟ್‌ ಸಾಧನೆ ಸೇರಿ 13 ವಿಕೆಟ್‌ ಕಿತ್ತು ಫುಲ್‌ ಫಾರ್ಮ್‌ನಲ್ಲಿದ್ದಾರೆ. ಆದರೆ, ಇಶಾಂತ್‌ ಇತ್ತೀಚೆಗೆ ಮಾತ್ರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದು, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಕೇವಲ 14.1 ಓವರ್‌ ಮಾತ್ರ ಬೌಲಿಂಗ್‌ ಮಾಡಿದ್ದರು. ಇದೀಗ ಇಬ್ಬರು ವೇಗಿಗಳ ನಡುವೆ ಎದುರಾಗಿರುವ ಸಮಸ್ಯೆಯನ್ನು ಮುಂದಿನ ಎರಡು ದಿನಗಳಲ್ಲಿ ಬೌಲಿಂಗ್‌ ಕೋಚ್‌ ಭರತ್ ಅರುಣ್‌ ಪರಿಹರಿಸಲಿದ್ದಾರೆ. ಅದ್ಭುತ ಲಯದಲ್ಲಿರುವ ವಾಷಿಂಗ್ಟನ್‌ ಸುಂದರ್‌ ಹಾಗೂ ಅಕ್ಷರ್‌ ಪಟೇಲ್‌, ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಹಾಗೂ ಕುಲ್ದೀಪ್‌ ಯಾದವ್‌ ಇವರ ನಡುವೆ ಅಂತಿಮ 11ಕ್ಕೆ ಯಾರನ್ನು ಪರಿಗಣಿಸಬೇಕೆಂಬುದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಮತ್ತೊಂದು ತೆಲೆ ನೋವು ಶುರುವಾಗಿದೆ. ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿಯೇ ವಾಷಿಂಗ್ಟನ್ ಸುಂದರ್‌ ಅರ್ಧಶತಕ ಹಾಗೂ ನಾಲ್ಕು ವಿಕೆಟ್‌ ಕಿತ್ತಿದ್ದರು. ಮತ್ತೊಂದೆಡೆ ಅಕ್ಷರ್‌ ಪಟೇಲ್ ಸ್ಪಿನ್‌ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿ ರವೀಂದ್ರ ಜಡೇಜಾ ಸ್ಥಾನ ತುಂಬಬಲ್ಲರು. ಸುಂದರ್‌ ಉಪಸ್ಥಿತಿಯು ಗುಣಮಟ್ಟದ ವಿಷಯದಲ್ಲಿ ಬಹಳ ವ್ಯತ್ಯಾಸವಿದ್ದರೂ ಈ ಇಬ್ಬರು ಒಂದೇ ಬೌಲರ್‌ಗಳೆಂಬುದನ್ನು ಅರ್ಥೈಸುತ್ತದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tpafRh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...