ಚಿಕ್ಕಬಳ್ಳಾಪುರ: ಜಿಲೆಟಿನ್‌ ಬಚ್ಚಿಡಲು ಸಾಗಾಟಕ್ಕೆ ಮುಂದಾದಾಗ ಅವಘಡ, ಬಿಜೆಪಿ ಮುಖಂಡನಿಗೆ ಸೇರಿದ ಕ್ವಾರಿ?

ಚಿಕ್ಕಬಳ್ಳಾಪುರ: ಶಿವಮೊಗ್ಗದ ರೀತಿಯ ಜಿಲೆಟಿನ್‌ ಸ್ಪೋಟ ಚಿಕ್ಕಬಳ್ಳಾಪುರದಲ್ಲಿಯು ನಡೆದಿದ್ದು, ಇದೀಗ ಮತ್ತೆ ರಾಜ್ಯದ ಜನತೆಗೆ ಬೆಚ್ಚಿಬಿದ್ದಿದ್ದಾರೆ. ಜಲಿಟಿನ್ ಸ್ಫೋಟದಿಂದ ಸದ್ಯ ಐವರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ. ಇನ್ನು ಸ್ಪೋಟದ ತೀವ್ರತೆಗೆ ಮೃತ ದೇಗಳಗು ಛಿದ್ರ ಛಿದ್ರವಾಗಿದ್ದು, 1000 ಅಡಿಗೂ ದೂರ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದೆ. ಅವಘಡ ನಡೆದಿದ್ದು ಹೇಗೆ? ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಸ್ಪೋಟ ಅವಘಡದಿಂದ ಎಚ್ಚೆತ್ತಿರುವ ಸರಕಾರ ಹಾಗೂ ಜಿಲ್ಲಾಡಳಿತ ವಿವಿಧ ಅಕ್ರಮ ಗಣಿಗಾರಿಕೆ ಕ್ವಾರೆಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ದಾಳಿ ಭಯದಿಂದ ಚಿಕ್ಕಬಳ್ಳಾಪುರದ ಭ್ರಮರವಾಹಿನಿ ಕ್ರಶರ್‌ನ ಸಿಬ್ಬಂದಿಗಳು ಟಾಟಾ ಏಸ್ ಗಾಡಿಯಲ್ಲಿ ಜಿಲೆಟಿನ್ ಸಾಗಿಸಿ ಬಚ್ಚಿಡಲು ಮುಂದಾಗಿದ್ದಾರೆ. ಕ್ವಾರೆಯಲ್ಲಿದ್ದ ಜಿಲೆಟಿನ್‌ಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಟಾಟಾ ಏಸ್‌ಗೆ ರಾತ್ರಿ ವೇಳೆ ಜಿಲೆಟಿನ್‌ ತುಂಬಿಸುವ ವೇಳೆ ಕೆಮಿಕಲ್‌ ರಿಯಾಕ್ಷನ್‌ ಆಗಿ ಜಿಲೆಟಿನ್‌ಗಳು ಸ್ಪೋಟಗೊಂಡಿದೆ. ಘಟನೆಯಲ್ಲಿ ಟಾಟಾ ಏಸ್ ಡ್ರೈವರ್ ರಿಯಾಜ್ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಇಂಜನಿಯರ್ ಉಮಾಕಾಂತ್, ಕಂಪ್ಯೂಟರ್ ಆಪರೇಟರ್ ಗಂಗಾಧರ್, ವಾಚ್‌ಮೆನ್ ಮಹೇಶ್ ಸ್ಥಳೀಯ ರಾಮು, ಅಕೌಂಟೆಂಟ್ ಮೃತಪಟ್ಟಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು, ಗುಡಿಬಂಡೆಯ ನಾಗರಾಜ್ ರೆಡ್ಡಿ, ಆಂಧ್ರದ ರಾಘವೇಂದ್ರ ರೆಡ್ಡಿ ಮತ್ತು ಶಿವಾರೆಡ್ಡಿ ಮಾಲೀಕತ್ವದ ಭ್ರಮರ ವಾಹಿನಿ ಕ್ರಶರ್ ಇದಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಸಚಿವ ಸುಧಾಕರ್‌ ಭೇಟಿ!ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ‌ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ ತಪ್ಪಿತಸ್ಥರ‌‌ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3kdT8h4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...