ಕೊರೊನಾ ಭೀತಿ; ಪಾಣಾಜೆ, ಸುಳ್ಯಪದವು ಗಡಿಯಲ್ಲಿ ಇಂದಿನಿಂದ ವಾಹನ ಸಂಚಾರ ನಿರ್ಬಂಧ..!

ಪೆರ್ಲ: ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಸೋಮವಾರದಿಂದ ಮತ್ತೆ ಕಠಿಣ ಕಾನೂನು ಕ್ರಮ ಜಾರಿಗೆ ತಂದಿರುವುದು ಗಡಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಲಪಾಡಿ, ಸಾರಡ್ಕ, ಜಾಲ್ಸೂರು, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಮೇನಾಲ ಗಡಿಗಳಲ್ಲಿ ಕೊರೊನಾ ನೆಗೆಟಿವ್‌ ಪ್ರಮಾಣಪತ್ರದೊಂದಿಗೆ ದ.ಕ. ಜಿಲ್ಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಎಣ್ಮಕಜೆ, ಬೆಳ್ಳೂರು, ಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ತೊಂದರೆಗೆ ಸಿಲುಕಿದ್ದಾರೆ. ಸಾರಡ್ಕದಲ್ಲಿ ತಪಾಸಣೆ ಕೇಂದ್ರ: ಸಾರಡ್ಕ ಗಡಿಯಲ್ಲಿ ಸೋಮವಾರ ಕೋವಿಡ್‌ ತಪಾಸಣಾ ಕೇಂದ್ರ ಆರಂಭವಾಗಿದೆ. ಕೇರಳದಿಂದ ಕರ್ನಾಟಕ ಸಂಚರಿಸುವ ಪ್ರಯಾಣಿಕರ ಕೋವಿಡ್‌ ತಪಾಸಣೆಗೆ ಸರತಿ ಸಾಲು ಕಂಡುಬಂದಿದೆ. ಆ್ಯಂಟಿಜೆನ್‌ ತಪಾಸಣೆ ನಡೆಸಿ ಫಲಿತಾಂಶ ನೆಗೆಟಿವ್‌ ಆದವರನ್ನು ಕರ್ನಾಟಕ ಪ್ರವೇಶಿಸಲು ಅನುಮತಿಸಲಾಗಿದೆ. ಬಸ್‌ ಚಾಲಕರ ಸಹಿತ ಇತರ ಪ್ರಯಾಣಿಕರು ಮಂಗಳವಾರದಿಂದ ಕಡ್ಡಾಯವಾಗಿ ಕೋವಿಡ್‌ ಪ್ರಮಾಣಪತ್ರ ತರುವಂತೆ ಅಧಿಕಾರಿಗಳು ಕಠಿಣ ಸೂಚನೆ ನೀಡಿದ್ದಾರೆ. ಪಾಣಾಜೆ, ಸುಳ್ಯಪದವು ಗಡಿಗಳಲ್ಲಿ ಸೋಮವಾರ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದ್ದರೂ ಸಂಜೆ ವೇಳೆ ಪೊಲೀಸರು ಬ್ಯಾರಿಕೇಡ್‌ ಇರಿಸಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಎರಡೂ ಗಡಿಗಳನ್ನು ಮುಚ್ಚಿ ಪೊಲೀಸ್‌ ನಾಕಾಬಂದಿ ನಡೆಸುವ ಸೂಚನೆ ಲಭಿಸಿದೆ.


from India & World News in Kannada | VK Polls https://ift.tt/2Miyn7C

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...