ಶ್ರೀರಂಗಪಟ್ಟಣದಲ್ಲಿ ರೌಡಿ ಶೀಟರ್‌ ಪತ್ನಿಯ ಕಾರು ಚಾಲಕನ ಕೊಲೆ, ಇಬ್ಬರು ಆರೋಪಿಗಳ ಸೆರೆ!

ಶ್ರೀರಂಗಪಟ್ಟಣ: ಮಂಡ್ಯದ ರೌಡಿ ಶೀಟರ್‌ನ ಪತ್ನಿಯ ಕಾರು ಚಾಲಕನನ್ನು ಕೊಲೆಮಾಡಿ ಕಾವೇರಿ ನದಿಗೆ ಎಸೆದಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕು ನೊದೆಕೊಪ್ಪಲು ಗ್ರಾಮದ ಶ್ರೀಕಾಂತ್‌ ಅಲಿಯಾಸ್‌ ಸಾಗರ್‌, ಮಳವಳ್ಳಿ ತಾಲೂಕು ಮುಟ್ಟಿನಹಳ್ಳಿ ಗ್ರಾಮದ ಪ್ರಜ್ವಲ್‌ ಬಂಧಿತರು. ಪ್ರಕರಣದ ಪ್ರಮುಖ ಆರೋಪಿಗಳಾದ ಮಂಡ್ಯ ನಗರದ ಜಯಂತ್‌ ಹಾಗೂ ಚೀರನಹಳ್ಳಿ ಗ್ರಾಮದ ವಿಘ್ನೇಶ್‌ ತಲೆಮರೆಸಿಕೊಂಡಿದ್ದಾರೆ. ನಾಲ್ವರು ಆರೋಪಿಗಳು ಜ.12 ರಂದು ರಾತ್ರಿ ಮಂಡ್ಯ ಡೇಂಜರ್‌ ಶಿವನ ಪತ್ನಿಯ ಅನೂಪ್‌ ಜಾಯ್‌ನನ್ನು ಕೊಲೆಮಾಡಿ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಬಳಿ ಕಾವೇರಿ ನದಿಗೆ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸಿಪಿಐ ಯೋಗೇಶ್‌ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯ ವಶಕ್ಕೆ ಒಪ್ಪಿಸಿದ್ದಾರೆ.


from India & World News in Kannada | VK Polls https://ift.tt/3pIzHPH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...