ಈ ವರ್ಷದ ಕೊನೆಗೆ ಅಮೆಜಾನ್‌ ಸಿಇಒ ಹುದ್ದೆ ತ್ಯಜಿಸಲಿದ್ದಾರೆ ಜೆಫ್‌ ಬೆಜೋಸ್‌!

ಈ ಕಾಮರ್ಸ್‌ ದಿಗ್ಗಜ, ಬಿಲಿಯನೇರ್‌ ಜೆಫ್ ಬೆಜೋಸ್(57) ಈ ವರ್ಷದ ಕೊನೆಯಲ್ಲಿ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು(CEO) ತ್ಯಜಿಸುವುದಾಗಿ ತಿಳಿಸಿದ್ದಾರೆ. ಟೆಕ್ ಮತ್ತು ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ರಜಾ ಕಾಲದ ತ್ರೈಮಾಸಿಕದಲ್ಲಿ ಲಾಭ ಮತ್ತು ಆದಾಯದಲ್ಲಿ ಎರಡರಲ್ಲೂ ಏರಿಕೆ ಕಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಸದ್ಯ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥರಾಗಿರುವ ಆಂಡಿ ಜೆಸ್ಸಿ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ಕಳೆದ ಮೂವತ್ತು ವರ್ಷಗಳ ಕಾಲ ಅಮೆಜಾನ್‌ನ ಸಿಇಒ ಆಗಿದ್ದ ಈ ಪದವಿಯಿಂದ ಕೆಳಗಿಳಿಯುತ್ತಿದ್ದಾರೆ. ಇನ್ನು ಸಿಇಒ ಪದವಿ ತ್ಯಜಿಸುವುದು ಎಂದರೆ ನಿವೃತ್ತಿ ಹೊಂದುವುದು ಎಂದು ಅರ್ಥವಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ. ರಜೆಕಾಲದ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ದುಪ್ಪಟ್ಟು 7.2 ಬಿಲಿಯನ್ ಡಾಲರ್‌ ಹೆಚ್ಚಾಗಿದ್ದು, ಶೇ. 44 ರಷ್ಟು ಜಿಗಿದು 125.6 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಈ ಬಗ್ಗೆ ಇತ್ತೀಚೆಗೆ ಹಲವು ವರದಿಗಳ ಬಂದಿತ್ತು. ಈ ಬೆನ್ನಲ್ಲೇ ಜೆಫ್ ಬೆಜೋಸ್ ಸಿಇಒ ಪದವಿ ತ್ಯಜಿಸುವುದಾಗಿ ತನ್ನ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ. ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ನಾನು ಪ್ರಮುಖ ಅಮೆಜಾನ್ ಉಪಕ್ರಮಗಳಲ್ಲಿ ನಿರತನಾಗಿರುತ್ತೇನೆ. ಆದರೆ ಪ್ರತಿದಿನ ನಿಧಿಯತ್ತ ಗಮನ ಹರಿಸಬೇಕಾದ ಸಮಯ ಮತ್ತು ಶಕ್ತಿಯನ್ನು ಸಹ ಹೊಂದಿದ್ದೇನೆ. ಅಮೆಜಾನ್ ಇಂದು ಏನಾಗಿದೆಯೊ ಅದಕ್ಕೆ ಅದರ ಆವಿಷ್ಕಾರ ಕಾರಣ. ಇದೀಗ ನಾನು ಅಮೆಜಾನ್‌ನಲ್ಲಿ ಅದರ ಸೃಜನಶೀಲತೆಯ ಉತ್ತುಂಗವನ್ನು ನೋಡುತ್ತಿದ್ದೇನೆ, ಪರಿವರ್ತನೆಗೆ ಇದು ಸೂಕ್ತ ಸಮಯವಾಗಿದೆ ಎಂದು ತಿಳಿಸಿದ್ದಾರೆ. ಜೆಫ್ ಬೆಜೋಸ್ ಬಳಿಕ ಅಮೆಜಾನ್ ಸಿಇಒ ಹುದ್ದೆಗೇರಲಿರುವ ಜೆಸ್ಸಿ, 1997ರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. 2003ರಲ್ಲಿ ಕಂಪನಿಯ ಅತ್ಯಂತ ಲಾಭದಾಯಕ ವೆಬ್ ವಿಭಾಗ ಎಡಬ್ಲ್ಯೂಎಸ್ ಸ್ಥಾಪಿಸಿದ್ದರು.


from India & World News in Kannada | VK Polls https://ift.tt/3jgH0eP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...