ಈ ಬಾರಿ ರಾಜಾಸೀಟ್‌ನಲ್ಲಿ ಫಲಪುಷ್ಪ ವೈಯ್ಯಾರವಿಲ್ಲ: ಕೊರೊನಾ ಹಿನ್ನೆಲೆ ಪ್ರದರ್ಶನ ರದ್ದು!

ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ: ಮಡಿಕೇರಿಯ ರಾಜಾಸೀಟ್‌ನಲ್ಲಿ ಪ್ರತಿವರ್ಷ ನಡೆಯುವ ಕೊರೊನಾ ಕಾರಣಕ್ಕೆ ಈ ವರ್ಷ ರದ್ದಾಗಿದ್ದು, ಪುಷ್ಪ ಪ್ರಿಯರಿಗೆ ನಿರಾಸೆ ಉಂಟಾಗಿದೆ. ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಪ್ರದರ್ಶನ ನಡೆಯುತ್ತಿತ್ತು. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ರೂಪಾಂತರ ಕೊರೊನಾದ ಆತಂಕದಿಂದ ಈ ಬಾರಿ ಪ್ರದರ್ಶನವನ್ನು ಮಾಡದಿರಲು ತೊಟಗಾರಿಕೆ ಇಲಾಖೆ ನಿರ್ಧರಿಸಿದೆ. ಫಲಪುಷ್ಪ ಪ್ರದರ್ಶನ ನಡೆಸಬೇಕಾದರೆ ಮೂರು ತಿಂಗಳಿನಿಂದ ಸಿದ್ಧತೆ ಆರಂಭಿಸಬೇಕಿತ್ತು. ಇನ್ನು ಇದು ಸಾಧ್ಯವಿಲ್ಲ ಎಂದು ಇಲಾಖೆ ಉಪನಿರ್ದೇಶಕ ಎಚ್‌. ಶಶಿಧರ್‌ ತಿಳಿಸಿದ್ದಾರೆ. ನಿರಾಸೆ ಕೊರೊನಾ ಕಂಟಕದಿಂದ ಮನೆಯಲ್ಲಿಯೇ ಕುಳಿತು ಬೇಸರಗೊಂಡಿದ್ದವರಿಗೆ ಫಲಪುಷ್ಪ ಪ್ರದರ್ಶನ ರದ್ದುಗೊಂಡಿರುವುದು ಮತ್ತಷ್ಟು ನಿರಾಸೆ ಮೂಡಿಸಿದೆ. ಈ ಹಿಂದೆ 2015-16 ನೇ ಸಾಲಿನಲ್ಲಿ ಕೆಲ ರಾಜ್ಯದಲ್ಲಿ ಭೀಕರ ಬರ ಮತ್ತು ಜಿಲ್ಲೆಯಲ್ಲಿಯೂ ನೀರಿನ ಕೊರತೆ ಹಾಗೂ 2016-17ರಲ್ಲಿ ಅನಿವಾರ‍್ಯ ಕಾರಣದಿಂದ ಪ್ರದರ್ಶನ ನಡೆದಿರಲಿಲ್ಲ. 2018-19, 19-20ನೇ ಸಾಲಿನಲ್ಲಿ ಫಲಪುಷ್ಪ ಪ್ರದರ್ಶನ ನಡೆದ ಸಂದರ್ಭ ರಾಜಾಸೀಟ್‌ಗೆ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಈ ಬಾರಿ ಪ್ರದರ್ಶನ ರದ್ದುಗೊಂಡಿರುವುದರಿಂದ ಇಲಾಖೆಗೆ ಸುಮಾರು 3ರಿಂದ 4 ಲಕ್ಷ ರೂ. ನಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕರ್ಷಣೆ ಹೆಚ್ಚಿಸಲು ಕ್ರಮಫಲಪುಷ್ಪ ಪ್ರದರ್ಶನ ಆಯೋಜನೆಯನ್ನು ಮಾಡದಿರಲು ನಿರ್ಧರಿಸಿದ್ದರೂ, ಉದ್ಯಾನದ ಆಕರ್ಷಣೆಯನ್ನು ಹೆಚ್ಚಿಸುವ ಹಾಗೂ ಪ್ರಸ್ತುತ ಇರುವ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸುಮಾರು 10 ರಿಂದ 12 ಸಾವಿರದಷ್ಟು ನಾನಾ ತಳಿಯ ಹೂಗಿಡಗಳನ್ನು ಬೆಳೆಸಲಾಗಿದೆ. ಶೀಘ್ರ ಕೂರ್ಗ್‌ ವಿಲೇಜ್‌ ಆರಂಭ ರಾಜಾಸೀಟ್‌ನ ಕೆಳಭಾಗದಲ್ಲಿ ಬರುವ ತೋಟಗಾರಿಕಾ ಇಲಾಖೆಗೆ ಸೇರಿದ 'ಕೂರ್ಗ್‌ ವಿಲೇಜ್‌'ನಲ್ಲಿಯೂ ನಾನಾ ಅಭಿವೃದ್ಧಿ ಕಾಮಗಾರಿ ನಡೆದಿದೆ. ಉದ್ಯಾನದ ಒಳಭಾಗದಲ್ಲಿ ಬರುವ ಇಳಿಜಾರು ಪ್ರದೇಶದಲ್ಲೂ ಹೂವುಗಳನ್ನು ಬೆಳೆಸುವ ಮೂಲಕ ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಯುತ್ತಿದೆ. ಇದರೊಂದಿಗೆ ಕೆಳಭಾಗಕ್ಕೆ ತೆರಳಲು ಇರುವ ಕಾಲುದಾರಿಯನ್ನು ಇಂಟರ್‌ಲಾಕ್‌ ಅಳವಡಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿವೆ. ಶೀಘ್ರದಲ್ಲಿಯೇ ಕೂರ್ಗ್‌ ವಿಲೇಜ್‌ ಕೂಡ ಆರಂಭವಾಗಲಿದೆ ಎಂದು ಶಶಿಧರ್‌ ಮಾಹಿತಿ ನೀಡಿದ್ದಾರೆ. ಕೊರೊನಾದಿಂದಾಗಿ ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ನಡೆಸದಿರಲು ತೀರ್ಮಾನಿಸಲಾಗಿದೆ. ಆದರೆ ಉದ್ಯಾನದಲ್ಲಿ ಸುಂದರ ಹೂವುಗಳನ್ನು ಬೆಳೆಸಿದ್ದು, ಆಕರ್ಷಣೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕ್ರಮ ವಹಿಸಲಾಗಿದೆ. ಶಶಿಧರ್‌ ಎಚ್‌., ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ ಕೊಡಗು


from India & World News in Kannada | VK Polls https://ift.tt/2MMgtKq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...