ಸೈಕಲ್‌ ಸವಾರರಿಗೆ ಗುಡ್‌ನ್ಯೂಸ್‌..! ಆರ್‌ಸಿ ಕಾಲೇಜಿನಿಂದ ರೇಸ್‌ಕೋರ್ಸ್‌ವರೆಗೆ ಸೈಕಲ್‌ ಪಥ ಸಂಚಾರಕ್ಕೆ ಮುಕ್ತ

ಬೆಂಗಳೂರು: ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿಈಗ ಸುಲಭವಾಗಿ ಸೈಕಲ್‌ ಸವಾರಿ ಮಾಡಬಹುದಾಗಿದೆ. ಸೈಕಲ್‌ಗೆಂದೇ ಪ್ರತ್ಯೇಕ ಪಥ ರೆಡಿಯಾಗಿದ್ದು, ಸವಾರಿಗೆ ಸಿದ್ಧವಾಗಿದೆ. ಆರ್‌ಸಿ ಕಾಲೇಜಿನಿಂದ ರೇಸ್‌ಕೋರ್ಸ್‌ವರೆಗೆ ಸೈಕಲ್‌ ಪಥ ಸಂಚಾರಕ್ಕೆ ಮುಕ್ತವಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ಮಾರ್ಟ್‌ ಸಿಟಿ ಅಭಿಯಾನದ ಭಾಗವಾಗಿ ನಗರದ ಆಯ್ದ ಪ್ರದೇಶಗಳಲ್ಲಿ 30 ಕಿ.ಮೀ ಸೈಕಲ್‌ ಪಥ ನಿರ್ಮಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಕಮರ್ಷಿಯಲ್‌ ಸ್ಟ್ರೀಟ್‌, ರಾಜಭವನ ರಸ್ತೆ, ತಿಮ್ಮಯ್ಯ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಕ್ವೀನ್ಸ್‌ ರಸ್ತೆ ಸೇರಿದಂತೆ ಒಟ್ಟು 36 ರಸ್ತೆಗಳಲ್ಲಿ ರಸ್ತೆಯ ಎರಡೂ ಬದಿಗೆ ಸೈಕಲ್‌ ಪಥ ನಿರ್ಮಾಣವಾಗಲಿದೆ. ನವೆಂಬರ್‌ನೊಳಗೆ 5 ಕಿ.ಮೀ ಪಥ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ತಡವಾಗಿ ಅನುಷ್ಠಾನಗೊಂಡಿದೆ. ಮಾರ್ಚ್ನಲ್ಲಿ 30 ಕಿ.ಮೀ ಸೈಕಲ್‌ ಪಥ ನಿರ್ಮಿಸುವ ಗುರಿ ಇದೆ. ಆದರೆ ಇದೀಗ ಅದು ಜೂನ್‌ ತಿಂಗಳಿಗೆ ಮುಂದೂಡಲ್ಪಟ್ಟಿದೆ. ನಗರ ಭೂ ಸಾರಿಗೆ ಇಲಾಖೆಯು ಈಗಾಗಲೇ ಹದಿನಾಲ್ಕು ರಸ್ತೆಗಳನ್ನು ಸೂಚಿಸಿರುವುದಾಗಿ ತಿಳಿದುಬಂದಿದೆ. ಇದರ ನಡುವೆ ಕೂಡ 35 ಕಿ.ಮೀ ಉದ್ದ ಮಾರ್ಗದ ಸಿಲ್ಕ್‌ ಬೋರ್ಡ್‌ ಹಾಗೂ ಲೋರಿ ಜಂಕ್ಷನ್‌ ನಡುವೆ ಸೈಕಲ್‌ ಲೇನ್‌ ರೂಪಿಸುವತ್ತ ಚಿಂತನೆ ನಡೆಸಿದೆ. ಲೋರಿ ಜಂಕ್ಷನ್‌ನಿಂದ ಮಹದೇವಪುರದವರೆಗೆ ಐದು ಕಿ.ಮೀ ವ್ಯಾಪ್ತಿಯಲ್ಲಿ ಸೈಕಲ್‌ ಲೇನ್‌ ಸಿದ್ಧವಾಗಿದ್ದು, ಸಿಲ್ಕ್‌ ಬೋರ್ಡ್‌ ಹಾಗೂ ಇಬ್ಬಲೂರು ಜಂಕ್ಷನ್‌ ನಡುವೆ ಕೆಲಸ ಪ್ರಗತಿಯಲ್ಲಿದೆ.


from India & World News in Kannada | VK Polls https://ift.tt/36E4NAj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...