ಹಾಸನ: ತಾಯಿಯ ಮೇಲೆ ದಾಳಿ ಮಾಡಿದ್ದದ ಚಿರತೆ ಜೊತೆ ಪುತ್ರನ ಸೆಣೆಸಾಟ, ಚಿರತೆ ಸಾವು!

ಅರಸೀಕೆರೆ: ಸೋಮವಾರ ಬೆಳಗ್ಗೆಯಿಂದಲೇ ತಾಯಿ ಹಾಗೂ ಮಗ ಸೇರಿದಂತೆ ನಾಲ್ವರ ಮೇಲೆ ದಾಳಿ ಮಾಡಿದ್ದ ಬೆಂಡೇಕೆರೆ ತಾಂಡ್ಯದಲ್ಲಿ ಮೃತಪಟ್ಟಿದೆ ಎಂದು ವಲಯ ಅರಣ್ಯಾಧಿಕಾರಿ ದಯಾನಂದ್‌ ತಿಳಿಸಿದ್ದಾರೆ. ಭೈರಗೊಂಡನಹಳ್ಳಿ ಬೋವಿ ಕಾಲನಿಯಲ್ಲಿ ತಾಯಿ, ಮಗನ ಮೇಲೆ ದಾಳಿ ಮಾಡಿದ ನಂತರ ಪಶು ವೈದ್ಯಾಧಿಕಾರಿ ಡಾ.ಮುರಳಿ ಮೇಲೆ ದಾಳಿ ಮಾಡಿದ 2 ವರ್ಷದ ಹೆಣ್ಣು ಚಿರತೆ ಬೆಂಡೇಕೆರೆ ತಾಂಡ್ಯ ಸಮೀಪ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಚಿರತೆ ತಲೆಗೆ ತೀವ್ರ ತರವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಚಿರತೆಯನ್ನು ಹಿಮ್ಮೆಟ್ಟಿಸಿದ ಕಿರಣ್‌!ಇನ್ನು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಅರಸೀಕೆರೆಯ ಬೈರಗೊಂಡನಹಳ್ಲಿ ಬೋವಿ ಕಾಲೋನಿಯತ್ತ ಬಂದಿದೆ. ಮನುಷ್ಯನ ನೋಡಿ ಚಿರತೆ ವ್ಯಾಘ್ರವಾಗಿದೆ. ಬೆಳಿಗ್ಗೆ 7.30ರ ಸುಮಾರಿಗೆ ಜಮೀನಿಗೆ ತೆರಳುತ್ತಿದ್ದ ತಾಯಿ-ಮಗನ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ.ಚಂದ್ರಮ್ಮ ಹಾಗೂ ಕಿರಣ್ ಜಮೀನಿಗೆ ತೆರಳುತ್ತಿದ್ದ ವೇಳೆ ಚಂದ್ರಮ್ಮ ಮೇಲೆ ಚಿರತೆ ಎರಗಿದೆ. ತನ್ನ ತಾಯಿಯ ಮೇಲೆ ಎರಗಿದ ಚಿರತೆಯನ್ನು ಕಂಡ ಕಿರಣ್ ಚಿರತೆಯ ಕುತ್ತಿಗೆ ಬಿಗಿ ಹಿಡಿದು 15 ನಿಮಿಷ ಕಾಲ ಸೆಣೆಸಿದ್ದಾನೆ. ಕಡೆಗೂ ಸೋತ ಚಿರತೆ ಅಲ್ಲಿಂದ ಕಾಲು ಕಿತ್ತಿದೆ. ಇನ್ನು ಚಿರತೆ ದಾಳಿಯಿಂದ ಗಾಯಗೊಂಡಿರುವ ಕಿರಣ್ ಹಾಗೂ ಚಂದ್ರಮ್ಮನವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.


from India & World News in Kannada | VK Polls https://ift.tt/3aLTlF6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...