ವಿಂಡೀಸ್‌ ವಿರುದ್ಧ ಓಡಿಐ, ಟಿ20 ಸರಣಿಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ!

ಹೊಸದಿಲ್ಲಿ: ಮುಂಬರುವ ವೆಸ್ಟ್ ಇಂಡೀಸ್‌ ಪ್ರವಾಸದ ಓಡಿಐ ಹಾಗೂ ಟಿ20 ಸರಣಿಗಳಿಗೆ ತಂಡವನ್ನು ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆ ದಿಮುತ್‌ ಕರುಣರತ್ನೆ ಪ್ರವಾಸಿಗರನ್ನು ಮುನ್ನಡೆಸಲಿದ್ದಾರೆ. ಶ್ರೀಲಂಕಾ ಕ್ರೀಡಾ ಸಚಿವ ನಮಲ್‌ ರಾಜಪಕ್ಸ ಅವರು ತಂಡಗಳಿಗೆ ಅನುಮತಿ ನೀಡಿದ್ದಾರೆ. ಸೊಮವಾರ ಕೊರೊನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ವೇಗಿ ಲಹಿರು ಕುಮಾರ ಅವರ ಸ್ಥಾನಕ್ಕೆ ಸುರಂಗ ಲಕ್ಮಲ್‌ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ತಂಡದಲ್ಲಿ ಕುಮಾರ ಅವರ ಹೆಸರು ಉಲ್ಲೇಖಿಸಿದ್ದರೂ ಅವರು ತಂಡದೊಂದಿಗೆ ಪ್ರಯಾಣ ಮಾಡುವುದಿಲ್ಲ. ಫೆಬ್ರುವರಿ 23 ರಂದು ಶ್ರೀಲಂಕಾ ತಂಡ ಕೆರಿಬಿಯನ್‌ಗೆ ಪ್ರವಾಸ ಮಾಡಲಿದೆ. ವಿಂಡೀಸ್‌ ಪ್ರವಾಸದಲ್ಲಿ ಶ್ರೀಲಂಕಾ ತಂಡ ಮೂರು ಟಿ20 ಹಾಗೂ ಮೂರು ಓಡಿಐ ಪಂದ್ಯಗಳಲ್ಲಿ ಆತಿಥೇಯರ ವಿರುದ್ಧ ಸೆಣಸಲಿದೆ. ಮಾರ್ಚ್‌ 3 ರಿಂದ ಏಪ್ರಿಲ್‌ 2ರವರೆಗೆ ತಂಡವು ಅಂಟಿಗುವಾದಲ್ಲಿ ಬಯೋ ಬಬಲ್‌ಗೆ ಒಳಗಾಗಲಿದೆ. ಇದಕ್ಕೂ ಮುನ್ನ ವೇತನ ವಿಚಾರದಲ್ಲಿ ಎದುರಾದ ಅಸಮಾಧಾನ ಕಾರಣ ಶ್ರೀಲಂಕಾ ತಂಡದ ಬೌಲಿಂಗ್‌ ಕೋಚ್‌ ಹುದ್ದೆಗೆ ನೇಮಕಗೊಂಡ ಕೆಲವೇ ದಿನಗಳಲ್ಲಿ ಮಾಜಿ ಎಡಗೈ ವೇಗದ ಬೌಲರ್‌ ಚಮಿಂಡಾ ವಾಸ್‌ ರಾಜೀನಾಮೆ ನೀಡಿದ್ದಾರೆ. ಶ್ರೀಲಂಕಾ ತಂಡ ಕೈಗೊಳ್ಳಲಿದ್ದು, ಈ ಸಲುವಾಗಿ ತಂಡದ ಬೌಲರ್‌ಗಳಿಗೆ ಮಾರ್ಗದರ್ಶನ ನೀಡುವಂತೆ ಕ್ರಿಕೆಟ್‌ ಶ್ರೀಲಂಕಾ ಇತ್ತೀಚೆಗಷ್ಟೇ ಚಮಿಂಡಾ ವಾಸ್‌ ಅವರನ್ನು ಬೌಲಿಂಗ್‌ ಕೋಚ್‌ ಹುದ್ದೆಗೆ ನೇಮಕ ಮಾಡಿತ್ತು. 2009ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸದ ಅಪ್ರತಿಮ ಎಡಗೈ ವೇಗಿ ಶ್ರೀಲಂಕಾ ಪರ ಆಡಿದ 111 ಟೆಸ್ಟ್‌ ಪಂದ್ಯಗಳಲ್ಲಿ 355 ವಿಕೆಟ್‌ಗಳನ್ನು ಪಡೆದ ಅನುಭವ ಹೊಂದಿದ್ದಾರೆ. ಇದೇ ಕಾರಣಕ್ಕೆ ವೇಗದ ಬೌಲರ್‌ಗಳಿಗೆ ಮಾರ್ಗದರ್ಶನ ನೀಡುವಂತೆ ಕೋಚ್‌ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ ವೇತನ ವಿಚಾರದಲ್ಲಿ ಎದುರಾದ ಅಸಮಾಧಾನ ಕಾರಣ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕ್ರಿಕೆಟ್‌ ಶ್ರೀಲಂಕಾ ತಿಳಿಸಿದೆ. "ಜಾಗತಿಕ ಮಟ್ಟದಲ್ಲಿ ಎಲ್ಲೆಡೆ ಆರ್ಥಿಕ ಸಂಕಷ್ಟವಿದೆ. ಇಂತಹ ಕಷ್ಟದ ಸಮಯದಲ್ಲಿ ಇಂಥದ್ದೊಂದು ನಿರ್ಧಾರ ಅತೀವ ಬೇಸರ ತಂದಿದೆ. ಚಮಿಂಡಾ ವಾಸ್‌ ಬೇಜವಾಬ್ದಾರಿಯುತವಾಗಿ ರಾಜೀನಾಮೆ ನೀಡಿದ್ದಾರೆ. ತಂಡ ಪ್ರವಾಸ ಕೈಗೊಳ್ಳಲು ಕೆಲವೇ ದಿನಗಳು ಇರುವ ಸಂದರ್ಭದಲ್ಲಿ ವೈಯಕ್ತಿಕ ಹಿತಾಸಕ್ತಿ ಸಲುವಾಗಿ ಇಂಥದ್ದೊಂದು ನಿರ್ಧಾರ ಮಾಡಿದ್ದಾರೆ," ಎಂದು ಕ್ರಿಕೆಟ್‌ ಶ್ರೀಲಂಕಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್‌ 3, 5 ಹಾಗೂ 7 ರಂದು ಮೂರು ಟಿ20 ಪಂದ್ಯಗಳು ಕೂಲಿಡ್ಜ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಜರುಗಲಿವೆ. ಮಾರ್ಚ್‌ 10, 12 ಹಾಗೂ 14 ರಂದು ವಿವಿಯನ್‌ ರಿಚರ್ಡ್ಸ್ ಗ್ರೌಂಡ್‌ನಲ್ಲಿ ಓಡಿಐ ಪಂದ್ಯಗಳು ನಡೆಯಲಿವೆ. ಸೀಮಿತ ಓವರ್‌ಗಳ ಸರಣಿ ಮುಗಿದ ಬಳಿಕ ಮಾರ್ಚ್‌ 21 ರಿಂದ ಮೊದಲನೇ ಟೆಸ್ಟ್ ಹಾಗೂ ಮಾರ್ಚ್‌ 29 ರಿಂದ ಎರಡನೇ ಟೆಸ್ಟ್ ಆರಂಭವಾಗಲಿದೆ. ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ (ನಾಯಕ), ದಸೂನ್‌ ಶನಕ, ದನುಷ್ಕ, ದನುಷ್ಕ ಗುಣತಿಲಕೆ, ಪಥುಮ್ ನಿಸ್ಸಂಕಾ, ಅಶೆನ್ ಬಂಡಾರ, ಒಶಾಡ ಫೆರ್ನಾಂಡೊ, ದಿನೇಶ್ ಚಂಡಿಮಾಲ್‌, ಏಂಜೆಲೋ ಮ್ಯಾಥ್ಯೂಸ್‌, ನಿರೋಶನ್‌ ಡಿಕ್ವಲ್‌, ತಿಸಾರ್‌ ಪೆರೆರಾ, ಕಮಿಂಡು ಮೆಂಡೀಸ್‌, ವನಿಂದು ಹಸರಂಗ, ರಮೇಶ್ ಮೆಂಡೀಸ್‌, ಲಹಿರು ಕುಮಾರ, ನುವಾನ್ ಪ್ರದೀಪ್‌, ಅಸಿಷ್ಟ ಫೆರ್ನಾಂಡೊ. ದುಷ್ಮಂಥ ಚಮೀರಾ, ಅಕಿಲಾ ದನಂಜಯ್‌, ಲಕ್ಷಣ್‌ ಸಂಡಕನ್‌, ದಿಲ್ಷಾನ್‌ ಮದುಶಂಕ, ಸುರಂಗ ಲಕ್ಮಲ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NMooYy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...