
ಬೆಳಗಾವಿ: ನಗರ ಪೋಲಿಸರು ದಂಧೆಯಲ್ಲಿ ಸಿಲುಕಿಕೊಂಡಿದ್ದ ಅಮಾಯಕ ಯುವತಿಯರನ್ನು ಮಾಡಿ ಅವರ ಪಾಲಕರ ಬಳಿಗೆ ಸೇರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರ ಪೊಲೀಸರು ಕಳೆದ ಎರಡು ವಾರಗಳ ಹಿಂದೆ ನಗರದಲ್ಲಿ ಬೇರೆ ಬೇರೆ ರಾಜ್ಯದ ಅಮಾಯಕ ಯುವತಿಯರನ್ನು ಬಳಸಿಕೊಂಡು ಕೆಲ ಕಿರಾತಕರು ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ನಗರದ ಹಲವು ಏರಿಯಾಗಳಲ್ಲಿ ಯುವತಿಯರ ಹೆಸರಲ್ಲಿ ಬಾಡಿಗೆ ಮನೆಗಳನ್ನು ಮಾಡಿ, ವಾಟ್ಸ್ ಆಫ್ ಮುಖಾಂತರ ಯುವತಿಯರ ಪೋಟೊಗಳನ್ನ ಹಾಕಿ ಗ್ರಾಹಕರನ್ನು ಸೆಳೆದು ದಂಧೆ ನಡೆಸುತ್ತಿದ್ದರ ಬಗ್ಗೆ ನಗರದ ಎಪಿ ಎಮ್ ಸಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ವಿವಿಧ ಹೈಟೆಕ್ ವೇಶ್ಯಾವಾಟಿಕೆಯ ದಂಧೆ ಮಾಡುತ್ತಿದ್ದ ಅಡ್ಡಾಗಳ ಮೇಲೆ ದಾಳಿ ಮಾಡಿ ದಂಧೆಯಲ್ಲಿ ತೊಡಗಿದ್ದ ಇಬ್ಬರ ಏಜೆಂಟರನ್ನ ಬಂಧಿಸಿದ್ದರು. ಫೆ.7ರಂದು ಬೆಳಗಾವಿಯ ಸದಾಶಿವನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಎಪಿಎಂಸಿ ಠಾಣೆ ಪೊಲೀಸರು ಬೇಧಿಸಿದ್ದರು. ಆದ್ರೆ ಈ ಪ್ರಕರಣ ಈಗ ಮತ್ತೊಂದು ರೋಚಕ ಸ್ವರೂಪ ಪಡೆದುಕೊಂಡಿದೆ. ಎಪಿಎಂಸಿ ಠಾಣೆ ಸಿಪಿಐ ಜಾವೇದ್ ಮುಷಾಪುರೆ ನೇತೃತ್ವದಲ್ಲಿ ದಾಳಿ ಮಾಡಿದ್ದ ವೇಳೆ ಇಬ್ಬರು ಯುವತಿಯರನ್ನು ರಕ್ಷಿಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಏಜೆಂಟ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಈ ಯುವತಿಯರನ್ನು ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಆದ್ರೆ ನಗರದ ಪೊಲೀಸರು ತನಿಖೆ ಮಾಡಿದಾಗ ರಕ್ಷಣೆ ಮಾಡಿರುವ ಉತ್ತರ ಪ್ರದೇಶದ ಮೂಲದ ಅಮಾಯಕ ಯುವತಿಯನ್ನು ಕಿರಾತಕರು ಅಪಹರಿಸಿ ವೇಶ್ಯಾವಾಟಿಕೆ ದಂಧೆಗೆ ನೂಕಿರುವ ಮನಕಲುಕವ ಸಂಗತಿ ತಿಳಿದು ಬೆಳಗಾವಿ ಪೋಲಿಸರು ಯುವತಿಯನ್ನ ಅವರ ಪಾಲಕರ ಬಳಿ ಸೇರಿಸುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. 2017ರಲ್ಲಿ ಉತ್ತರಪ್ರದೇಶದಿಂದ ನಾಪತ್ತೆಯಾಗಿದ್ದ ಈ ಮುಂಬೈ, ಪುಣೆ, ಸೇರಿದಂತೆ ನಾನಾ ಕಡೆಗಳಲ್ಲಿ ಸುತ್ತಾಡಿ ಬದುಕಿನ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿಕೊಂಡು ಆನೇಕ ದೌರ್ಜನ್ಯ ಎದುರಿಸಿ ಕೊನೆಗೆ ಬೆಳಗಾವಿಗೆ ಬಂದಿದ್ದಳು. ಬೆಳಗಾವಿಯಲ್ಲಿ ಕೂಡಾ ಕೆಲ ದುರಳರ ಹಣದ ಆಸೆಗೆ ಬಲಿಯಾಗಿ ವೇಶ್ಯಾವಾಟಿಕೆಗೆ ಅನಿವಾರ್ಯ ಕಾರಣಗಳಿಂದಾಗಿ ಸಿಲುಕಿಕೊಂಡಿದ್ದಳು. ಆ ಯುವತಿ ಪೊಲೀಸರ ಸಹಾಯದಿಂದ ಮತ್ತೆ ಪಾಲಕರ ಮಡಿಲು ಸೇರಿದ್ದಾಳೆ. ಈಕೆಯ ಪಾಲಕರು ಕಳೆದ ಮೂರು ವರ್ಷಗಳಿಂದ ಮುಂಬೈ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಹುಡುಕಾಟ ನಡೆಸಿದ್ದರು. ಹಾಗೂ ಹೀಗೋ ಪಾಲಕರು ತಮ್ಮ ಮಗಳನ್ನ ಅರಸುತ್ತ ಬೆಳಗಾವಿಗೆ ಬಂದು ನಂತರ ಬೆಳಗಾವಿ ಎಪಿಎಂಸಿ ಪೊಲೀಸರನ್ನು ಸಂಪರ್ಕಿಸುತ್ತಿದ್ದಂತೆ ಬೆಳಗಾವಿಯಲ್ಲಿ ತಮ್ಮ ಮಗಳು ಇರುವ ಬಗ್ಗೆ ಗೊತ್ತಾಗಿದೆ. ಹೀಗಾಗಿ ತಮ್ಮ ಮಗಳನ್ನು ಕರೆದುಕೊಂಡು ಹೋಗಲು ಮಂಗಳವಾರ ಬೆಳಗಾವಿ ಎಪಿಎಂಸಿ ಠಾಣೆಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿ ಡಿಸಿಪಿ (ಕಾನೂನ ಮತ್ತು ಸುವ್ಯವಸ್ಥೆ) ಡಾ.ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ಯುವತಿಯನ್ನು ಅವಳ ಪಾಲಕರ ಮತ್ತು ಪೊಲೀಸರ ಸಮ್ಮುಖದಲ್ಲಿ ಪಾಲಕರಿಗೆ ಹಸ್ತಾಂತರಿಸಿ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟರು
from India & World News in Kannada | VK Polls https://ift.tt/3srbvCl