4 ಚೆಕ್‌ಪೋಸ್ಟ್‌ಗಳಲ್ಲಿ ಕೇರಳಿಗರ ಮೇಲೆ ಕಟ್ಟೆಚ್ಚರ... 13 ಗಡಿ ಬಂದ್‌.. ಗಡಿನಾಡ ಕನ್ನಡಿಗರ ಆಕ್ರೋಶ

ಕೇರಳದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಭಾರೀ ವೇಗದಲ್ಲಿ ಹರಡುತ್ತಿರುವಂತೆ, ಕೇರಳದ ಪಕ್ಕದಲ್ಲಿರುವ ಗಡಿ ಜಿಲ್ಲೆಗಳಲ್ಲಿ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿತ್ಯ ಈ ಗಡಿಗಳಲ್ಲಿ ಸಾವಿರಾರು ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ದಕ್ಷಿಣ ಕನ್ನಡದಲ್ಲಿ ಸೋಂಕು ಹೆಚ್ಚಳವಾಗುವ ಆತಂಕ ಎದುರಾಗಿದೆ. ಹೀಗಾಗಿ ಕೇರಳದಿಂದ ಆಗಮಿಸುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ವರದಿ ಇರುವವರನ್ನು ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿಸಲಾಗಿದೆ. ಹಲವು ಗಡಿಗಳನ್ನೂ ಕೂಡ ಮುಚ್ಚಲಾಗಿದೆ. ಇದು ಗಡಿನಾಡ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.


4 ಚೆಕ್‌ಪೋಸ್ಟ್‌ಗಳಲ್ಲಿ ಕೇರಳಿಗರ ಮೇಲೆ ಕಟ್ಟೆಚ್ಚರ... 13 ಗಡಿ ಬಂದ್‌... ಗಡಿನಾಡ ಕನ್ನಡಿಗರ ಆಕ್ರೋಶ

ಕೇರಳದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಭಾರೀ ವೇಗದಲ್ಲಿ ಹರಡುತ್ತಿರುವಂತೆ, ಕೇರಳದ ಪಕ್ಕದಲ್ಲಿರುವ ಗಡಿ ಜಿಲ್ಲೆಗಳಲ್ಲಿ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿತ್ಯ ಈ ಗಡಿಗಳಲ್ಲಿ ಸಾವಿರಾರು ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ದಕ್ಷಿಣ ಕನ್ನಡದಲ್ಲಿ ಸೋಂಕು ಹೆಚ್ಚಳವಾಗುವ ಆತಂಕ ಎದುರಾಗಿದೆ. ಹೀಗಾಗಿ ಕೇರಳದಿಂದ ಆಗಮಿಸುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ವರದಿ ಇರುವವರನ್ನು ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿಸಲಾಗಿದೆ. ಹಲವು ಗಡಿಗಳನ್ನೂ ಕೂಡ ಮುಚ್ಚಲಾಗಿದೆ. ಇದು ಗಡಿನಾಡ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.



​ನಾಲ್ಕು ಗಡಿಗಳು ಮಾತ್ರ ಓಪನ್
​ನಾಲ್ಕು ಗಡಿಗಳು ಮಾತ್ರ ಓಪನ್

ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸಲು ಸುಮಾರು 17 ರಸ್ತೆಗಳಿವೆ. ಈ ರಸ್ತೆಗಳ ಮೂಲಕವೇ ನೂರಾರು ಮಂದಿ ನಿತ್ಯ ಪ್ರಯಾಣ ಮಾಡುತ್ತಾರೆ. ಇದೀಗ ಕೇರಳದಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಳವಾದ ಕಾರಣ 4 ರಸ್ತೆಗಳನ್ನು ಹೊರೆತುಪಡಿಸಿ ಉಳಿದ ಎಲ್ಲಾ ರಸ್ತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಚ್ಚಿದೆ. ಮಂಗಳೂರು ತಾಲೂಕಿನ ತಲಪಾ, ಬಂಟ್ವಾಳ ತಾಲೂಕಿನ ಸಾರಡ್ಕ, ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು, ಸುಳ್ಯದ ಜಾಲ್ಸೂರು ಗಡಿ ಮೂಲಕ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಉಳಿದ 13 ಕ್ಕೂ ಹೆಚ್ಚಿನ ಗಡಿಗಳನ್ನು ಬಂದ್‌ ಮಾಡಲಾಗಿದೆ.



ನೆಗೆಟಿವ್‌ ವರದಿ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶಕ್ಕೆ ಅನುಮತಿ
ನೆಗೆಟಿವ್‌ ವರದಿ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶಕ್ಕೆ ಅನುಮತಿ

ಕೇರಳದಿಂದ ರಾಜ್ಯಕ್ಕೆ ಪ್ರವೇಶ ಮಾಡುವವರಿಗೆ ಕಡ್ಡಾಯವಾಗಿ ಕೋವಿಡ್‌ ನೆಗೆಟಿವ್‌ ವರದಿ ತರುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ನೆಗೆಟಿವ್‌ ವರದಿ ಇದ್ದರೆ ಮಾತ್ರ ಪ್ರವೇಶ ನೀಡುವುದಾಗಿ ಜಿಲ್ಲಾಡಳಿತ ಸೂಚನೆ ನೀಡಿದೆ. ಸೋಮವಾರ ತಲಪಾಡಿ ಗಡಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸೇರಿ, ಇಡೀ ಅಧಕಾರಿಗಳ ತಂಡ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿತ್ತು. ಆದರೆ ಯಾರೊಂದಿಗೂ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಇಲ್ಲದ ಕಾರಣ, ಅವರಿಗೆ ಎಚ್ಚರಿಕೆ ನೀಡಿ ಮಂಗಳೂರು ಪ್ರವೇಶಕ್ಕೆ ಅನುಮತಿ ನೀಡಲಾಯ್ತು. ಅಲ್ಲದೇ ಮಂಗಳವಾರದಿಂದ ಕಡ್ಡಾಯವಾಗಿ ತರಲು ಸೂಚನೆ ನೀಡಲಾಗಿದೆ. ದಿನ ನಿತ್ಯ ಸಂಚರಿಸುವವರು ಪ್ರತೀ ಎರಡು ವಾರಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವ ನಿಯಮ ರೂಪಿಸಲಾಗಿದೆ.



​ದ.ಕ ಜಿಲ್ಲಾಡಳಿತ ನಿಯಮಕ್ಕೆ ಗಡಿನಾಡ ಕನ್ನಡಿಗರು ಆಕ್ರೋಶ
​ದ.ಕ ಜಿಲ್ಲಾಡಳಿತ ನಿಯಮಕ್ಕೆ ಗಡಿನಾಡ ಕನ್ನಡಿಗರು ಆಕ್ರೋಶ

ಕೇರಳದಿಂದ ಆಗಮಿಸುವವರಿಗೆ ಹಲವು ಕಟ್ಟುಪಾಡುಗಳನ್ನು ವಿಧಿಸಿರುವ ದಕ್ಷಿಣ ಕನ್ನಡ ಜಿಲ್ಲಾಡಡಳಿತದ ಧೋರಣೆಗೆ ಗಡಿನಾಡ ಕನ್ನಡಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೈನಂದಿನ ಸಾವಿರಾರು ವಿದ್ಯಾರ್ಥಿಗಳು, ಕಾರ್ಮಿಕರು ಮಂಗಳೂರಿಗೆ ಬರುತ್ತಿದ್ದು, ಏಕಾಏಕಿ ಹೊಸ ನಿಯಮ ಜಾರಿಗೆ ತಂದಿದ್ದರಿಂದ ಅವರಿಗೆ ತೊಂದರೆ ಉಂಟಾಗಿದೆ. ಅಲ್ಲದೇ ಶಾಲಾ-ಕಾಲೇಜುಗಳ ಪರೀಕ್ಷೆ ಆರಂಭವಾಗುತ್ತಿರುವ ವೇಳೆಯಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಠಿಣ ನಿರ್ಧಾರ ತೆಗೆದುಕೊಂಡಿದ್ದನ್ನು ವಿರೋಧಿಸಿದ್ದಾರೆ. ಅಲ್ಲದೇ ಗಡಿ ನಿರ್ಬಂಧ ತೆರವುಗೊಳಿಸದಿದ್ದರೆ ಕರ್ನಾಟಕದ ಯಾವುದೇ ವಾಹನ ಕಾಸರಗೋಡಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟಿಸಿದ್ದಾರೆ.



ನ್ಯಾಯಾಲಯಕ್ಕೆ ಹೋಗುತ್ತೇವೆ ಎಚ್ಚರಿಕೆ
ನ್ಯಾಯಾಲಯಕ್ಕೆ ಹೋಗುತ್ತೇವೆ ಎಚ್ಚರಿಕೆ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ ಮಾರ್ಗಸೂಚಿಯಲ್ಲಿ ಯಾವುದೇ ಕಾರಣಕ್ಕೂ ರಾಜ್ಯಗಳ ಗಡಿಗಳನ್ನು ಮುಚ್ಚಕೂಡದು ಎಂದು ಹೇಳಿದೆ. ಆದರೆ ಕರ್ನಾಟಕ ಸರ್ಕಾರ ಗಡಿ ಬಂದ್ ಮಾಡಿ, ಕೇಂದ್ರದ ಮಾರ್ಗಸೂಚಿಯನ್ನು ಮುರಿದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಜನವರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಯಾವುದೇ ಕಾರಣಕ್ಕೂ ಅಂತಾರಾಜ್ಯ ವಾಹನ ಸಂಚಾರಕ್ಕೆ ತಡೆಯೊಡ್ಡಬಾರದು ಎಂದು ಹೇಳಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾತ್ರ ಇದನ್ನು ಪಾಲಿಸುತ್ತಿಲ್ಲ ಎಂದಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬಂದಾಗ ಇರದ ಯಾವುದೇ ನಿರ್ಬಂಧ, ಅವರು ತೆರಳಿದ ಬಳಿಕ ಹೇರಲಾಗಿದೆ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.



ಕರ್ನಾಟಕದ ವಾಹನ ತಡೆದು ಪ್ರತಿಭಟನೆ
ಕರ್ನಾಟಕದ ವಾಹನ ತಡೆದು ಪ್ರತಿಭಟನೆ

ಕೇರಳದಿಂದ ಬರುವವರಿಗೆ ಬಿಗಿ ನಿಯಮ ಜಾರಿಗೊಳಿಸಿದಕ್ಕೆ ಆಕ್ರೋಶಿತರಾಗಿರುವ ಗಡಿನಾಡ ಕನ್ನಡಿಗರು, ಕರ್ನಾಟಕದಿಂದ ಬರುವ ವಾಹನಗಳಿಗೆ ತಡೆಯೊಡ್ಡಿ ಪ್ರತಿಭಟಿಸಿದರು. ಒಂದು ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ರಾಷ್ಟ್ರೀಯ ಹೆದ್ದಾರಿ ತಡೆಯದಂತೆ ಕರ್ನಟಕ ಪೊಲೀಸರು ಮುಂದಾದರೂ, ‘ಕರ್ನಾಟಕ ಪೊಲೀಸ್‌ ಗೋ ಬ್ಯಾಕ್‌’ ಎಂದು ಘೋಷಣೆ ಕೂಗಿದರು. ಬಳಿಕ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.





from India & World News in Kannada | VK Polls https://ift.tt/3aLf1S8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...