ಬೆಂಗಳೂರು: ಎಟಿಎಂಗೆ ಹಣ ತುಂಬಿಸುವ ವಾಹನ ಚಾಲಕ ₹64 ಲಕ್ಷ ಕದ್ದು ಪರಾರಿ..!

ಬೆಂಗಳೂರು: ಎಟಿಎಂಗೆ ಹಣ ತುಂಬಿಸುವ ವಾಹನದ ಚಾಲಕನೊಬ್ಬ ಸುಮಾರು 64 ಲಕ್ಷ ರೂ. ಕದ್ದು ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಮೂಲದ ಯೋಗೇಶ್‌ ಹಣ ಕದ್ದು ಪರಾರಿಯಾಗಿರುವ ಖದೀಮ. ಎಟಿಎಂ ಮೆಷಿನ್‌ಗಳಿಗೆ ಹಣ ತುಂಬಿಸಲು ‘ಸೆಕ್ಯೂರ್‌ ವ್ಯಾಲಿ’ ಏಜೆನ್ಸಿ ಗುತ್ತಿಗೆ ಪಡೆದಿದ್ದು, ಅದರಂತೆ ಮಂಗಳವಾರ ರಾತ್ರಿ 7ರ ವೇಳೆ ಭದ್ರತಾ ವಾಹನದಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿರುವ ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೇರಿದ ಎಟಿಎಂಗೆ ಹಣ ತುಂಬಲು ಸಿಬ್ಬಂದಿ ಮತ್ತು ಗನ್‌ಮ್ಯಾನ್‌ ಒಳಗೆ ಹೋಗಿದ್ದರು. ಈ ಅವಕಾಶವನ್ನು ಬಳಸಿಕೊಂಡ ಆರೋಪಿ, ಬೇರೆ ಎಟಿಎಂ ಕೇಂದ್ರಗಳಿಗೆ ತುಂಬಲು ವಾಹನದಲ್ಲಿಟ್ಟಿದ್ದ ಹಣದ ಜತೆಗೆ ಪರಾರಿಯಾಗಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರಕುಮಾರ್‌ ಮೀನಾ ತಿಳಿಸಿದ್ದಾರೆ. ಚಾಲಕ ಮತ್ತು ಹಣದ ಬ್ಯಾಗ್‌ ಇಲ್ಲದಿರುವುದನ್ನು ಕಂಡು ತಬ್ಬಿಬ್ಬಾದ ಸಿಬ್ಬಂದಿ, ತಕ್ಷಣವೇ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.


from India & World News in Kannada | VK Polls https://ift.tt/3aBcgBz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...