ಬೆಂಗಳೂರಿನಲ್ಲಿ ನೇಪಾಳ ಮೂಲದ ಕಳ್ಳನ ಬಂಧನ; 13 ಲಕ್ಷ ರೂ. ಮೌಲ್ಯದ ಆಭರಣ ವಶ

ಬೆಂಗಳೂರು: ಮನೆಕಳವು ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಬಾಣಸವಾಡಿ ಠಾಣಾ ಪೊಲೀಸರು, ಆತನಿಂದ 13 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರ್‌.ಟಿ. ನಗರ ವ್ಯಾಪ್ತಿಯ ಕನಕನಗರದಲ್ಲಿರುವ ವೈಟ್‌ಲೈಟ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಬೀರೇಂದರ್‌ ಕುಮಾರ್‌ (23) ಬಂಧಿತ. ಮೂಲತಃ ನೇಪಾಳದವನಾದ ಈತನಿಂದ 13 ಲಕ್ಷ ರೂ. ಮೌಲ್ಯದ 265 ಗ್ರಾಂ ಚಿನ್ನಾಭರಣ, 2.7 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಮನೆಗಳ್ಳತನದ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ. ಈತನೊಂದಿಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ನೇಪಾಳ ಮೂಲದ ಮತ್ತೊಬ್ಬ ಆರೋಪಿ ರಮೇಶ್‌ ಬಿಸ್ವಾನ್‌ ಕರಮ್‌ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬೀರೇಂದರ್‌ ಕುಮಾರ್‌ ಹಲವು ವರ್ಷಗಳಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ತಾನು ಕಾವಲು ಕಾಯುತ್ತಿದ್ದ ಮನೆಗಳ ಬೀಗ ಹಾಕಿರುವುದನ್ನು ಗುರುತಿಸಿ ರಾತ್ರಿ ಸಮಯದಲ್ಲಿ ಮನೆಗೆ ಕನ್ನಹಾಕಿ ಕಳವು ಮಾಡುತ್ತಿದ್ದ. ಕದ್ದ ಮಾಲುಗಳನ್ನು ಮಾರಲು ಹೋದಾಗ ಪೊಲೀಸರು ಅನುಮಾನಗೊಂಡು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕನ್ನಕಳವು ಬಗ್ಗೆ ಸುಳಿವು ನೀಡಿದ್ದಾನೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.


from India & World News in Kannada | VK Polls https://ift.tt/3asjgR0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...