ಕೊಯಮತ್ತೂರು: ಹೋಟೆಲ್‌ಗಳಲ್ಲಿ ಕಡಿಮೆ ಅಂದರೂ ಬಿರಿಯಾನಿ ದರ 100 ರೂ. ಇರುತ್ತದೆ. ಸಾಮಾನ್ಯವಾಗಿ ರಸ್ತೆ ಬದಿ ಚಿಕನ್ ಬಿರಿಯಾನಿ ತಿಂದರೂ 70 ರಿಂದ 80 ರೂ. ಒಂದು ಪ್ಲೇಟ್‌ಗೆ ನೀಡಬೇಕಾಗುತ್ತದೆ. ಆದರೆ ತಮಿಳುನಾಡಿನ ಕೊಯಮತ್ತೂರಿನ ಈ ಮಹಿಳೆಯ ಅಂಗಡಿಯಲ್ಲಿ ಚಿಕನ್ ಬಿರಿಯಾನಿ ಬೆಲೆ ಕೇವಲ 20.ರೂ. ಹೌದು, ನಂಬಲು ಅಸಾಧ್ಯವಾದರು ಇದು ಸತ್ಯ. ಕೇವಲ 20.ರೂ. ಇದ್ದರೆ ಹೊಟ್ಟೆ ತುಂಬ ಬಿರಿಯಾನಿ ಈ ಮಹಿಳೆಯ ಅಂಗಡಿಯಲ್ಲಿ ತಿನ್ನಬಹುದು. ಅಷ್ಟಕ್ಕೂ ಇಷ್ಟು ಕಡಿಮೆಗೆ ಮಹಿಳೆ ಬಿರಿಯಾನಿ ಯಾಕೆ ನೀಡುತ್ತಿದ್ದಾರೆ ಅಂತ ಆಶ್ವರ್ಯವಾಗುತ್ತಿದ್ಯಾ? ಹಾಗಾದರೆ ಅದಕ್ಕೆ ಉತ್ತರ ಇಲ್ಲಿದೆ. ಕಡಿಮೆ ದರದಲ್ಲಿ ಎಲ್ಲರಿಗೂ ಅನ್ನ ನೀಡಬೇಕು, ಎಲ್ಲರ ಹಸಿವು ನೀಗಿಸಬೇಕು ಎನ್ನುವುದು ಕೊಯಮತ್ತೂರು ನಿವಾಸಿಯಾಗಿರುವ ಈ ಮಹಿಳೆಯ ಉದ್ದೇಶವಂತೆ. ಈ ನಿಟ್ಟಿನಲ್ಲಿ ರಸ್ತೆ ಬದಿ ಚಿಕ್ಕ ಬಿರಿಯಾನಿ ಅಂಗಡಿಯನ್ನು ಇವರು ಇಟ್ಟಿದ್ದಾರೆ. ಸಾಮಾನ್ಯವಾಗಿ ಅನೇಕರಿಗೆ ಬಿರಿಯಾನಿ ತಿನ್ನಬೇಕು ಎನ್ನುವ ಆಸೆ ಇರುತ್ತದೆ. ಆದರೆ ಹಣ ಇರುವುದಿಲ್ಲ. ಹೀಗಾಗಿ ಕಡಿಮೆ ಬೆಲೆ ಅಂದರೆ ಕೇವಲ 20 ರೂ.ಗೆ ಬಿರಿಯಾನಿಯನ್ನು ಈ ಮಹಿಳೆ ನೀಡುತ್ತಿದ್ದಾರೆ. ಇನ್ನು ಹಣ ಇಲ್ಲದೆ ಬರುವ ಹಸಿದವರಿಗೆ ಇಲ್ಲಿ ಉಚಿತವಾಗಿ ಬಿರಿಯಾನಿ ಮಹಿಳೆ ನೀಡುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಉತ್ತಮ ಬಿರಿಯಾನಿಯನ್ನು ಮಹಿಳೆಯೇ ತಯಾರಿಸಿ ತೆಗೆದುಕೊಂಡು ಬಂದು ಕೊಯಮತ್ತೂರಿನ ಬೀದಿಯಲ್ಲಿ ಚಿಕ್ಕ ಅಂಗಡಿ ಮೂಲಕ ಮಾರಾಟ ಮಾಡುತ್ತಿದ್ದಾರೆ. ಹೆಚ್ಚು ಹಣಕ್ಕೆ ಬಿರಿಯಾನಿ ಮಾರಾಟ ಮಾಡುವವರ ಮಧ್ಯೆ ಕಡಿಮೆ ಬೆಲೆ ಹಾಗೂ ಉಚಿತವಾಗಿ ಬಿರಿಯಾನಿ ನೀಡುವ ಈ ಮಹಿಳೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
from India & World News in Kannada | VK Polls https://ift.tt/36HYFaf