ಮೊಬೈಲ್‌ ನೆಟ್‌ವರ್ಕ್‌ಗಾಗಿ 50 ಅಡಿ ಎತ್ತರದ ತೊಟ್ಟಿಲು ಏರಿದ ಮಧ್ಯ ಪ್ರದೇಶ ಸಚಿವ: ನೆಟ್ಟಿಗರಿಂದ ಟ್ರೋಲ್‌

ಅಶೋಕ ನಗರ (ಮ.ಪ್ರ): ಮೊಬೈಲ್‌ ನೆಟ್‌ವರ್ಕ್‌ಗಾಗಿ ಮಧ್ಯಪ್ರದೇಶದ ಸಚಿವರೊಬ್ಬರು ಐವತ್ತು ಅಡಿ ಎತ್ತರಕ್ಕೆ ಏರಿದ ಘಟನೆ ಮಧ್ಯಪ್ರದೇಶದ ಆಶೋಕ ನಗರ ಎಂಬಲ್ಲಿ ನಡೆದಿದೆ. ಮಧ್ಯಪ್ರದೇಶ ಸಾರ್ವಜನಿಕ ಆರೋಗ್ಯ ಸಚಿವ ಬಜೇಂದ್ರ ಸಿಂಗ್ ಮೊಬೈಲ್‌ ನೆಟ್‌ವರ್ಕ್‌ಗಾಗಿ ಜಾತ್ರೆಯಲ್ಲಿ ಇಡಲಾಗಿದ್ದ ಐವತ್ತು ಅಡಿ ಎತ್ತರದ ತೊಟ್ಟಿಲು ಏರಿದ್ದಾರೆ. ಸದ್ಯ ಇದು ಸಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಆಹಾರವಾಗಿದೆ. ಅಶೋಕ ನಗರದ ಅಮ್ಕೋ ಎಂಬ ಗ್ರಾಮದಲ್ಲಿ ನಡೆಯುತ್ತಿದ್ದ ಭಗವದ್‌ ಕಥ ಎಂಬ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ್ದರು. ಈ ವೇಳೆ ಮೊಬೈಲ್‌ ನೆಟ್‌ವರ್ಕ್‌ಗೆ ಪರದಾಡಿದ ಸಚಿವರು ಕೊನೆಗೆ ಜಾತ್ರೆಯ ಆಕರ್ಷಣೆಗಾಗಿ ಇಡಲಾಗಿದ್ದ ಐವತ್ತು ಅಡಿ ಎತ್ತರದ ತೊಟ್ಟಿಲು ಏರಿ ಮಾತನಾಡಿದ್ದಾರೆ. ಸಚಿವರು ತೊಟ್ಟಿಲಿನಲ್ಲಿ ಕುಳಿತು ಫೋನ್‌ನಲ್ಲಿ ಮಾತನಾಡುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಇದು ಡಿಜಿಟಲ್‌ ಇಂಡಿಯಾ ಎಂದು ನೆಟ್ಟಿಗರು ಕುಹಕವಾಡಿದ್ದಾರೆ. ಹಳ್ಳಿಯ ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು, ಹೀಗಾಗಿ ನೆಟ್‌ವರ್ಕ್‌ ಸಿಗದೇ ಸಚಿವರು ಪರದಾಡಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ, ಗ್ರಾಮಸ್ಥರು ವಿವಿಧ ಸಮಸ್ಯೆಗಳೊಂದಿಗೆ ನನ್ನ ಹತ್ತಿರ ಬರುತ್ತಿದ್ದರು. ಆದರೆ ಈ ಬಗ್ಗೆ ಫೋನ್‌ ಮುಖಾಂತರ ಅಧಿಕಾರಿಗಳೊಂದಿಗೆ ಚರ್ಚಿಸಲು ಸಾಧ್ಯವಾಗಿಲ್ಲ. ಹೀಗಾಗಿ ತೊಟ್ಟಿಲು ಏರಬೇಕಾಯ್ತು ಎಂದು ಹೇಳಿದ್ದಾರೆ. ಅಲ್ಲದೇ ಈ ಕಾರ್ಯಕ್ರಮವನ್ನು ತಾನೇ ಆಯೋಜಿಸುತ್ತಿರುವುದಾಗಿಯೂ ಹೇಳಿದ್ದಾರೆ. ಸಚಿವರ ಈ ಹೇಳಿಕೆಯೂ ನೆಟ್ಟಿಗರ ತಮಾಷೆಗೆ ಆಹಾರವಾಗಿದೆ. ಬಿಜೆಪಿ ಡಿಜಿಟಲ್‌ ಇಂಡಿಯಾ ಎಂದು ಹೇಳುತ್ತದೆ. ಆದರೆ ವಾಸ್ತವ ಸ್ಥಿತಿ ಇದು ಎಂದು ನೆಟ್ಟಿಗರು ಆಡಿಕೊಂಡಿದ್ದಾರೆ.


from India & World News in Kannada | VK Polls https://ift.tt/3qCdJOF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...