ಗೋಲ್ಡ್‌ ರಷ್‌ ಸ್ಕೀಂ ಆಮಿಷ; ವಿಪ್ರೋ ನೌಕರರ ಸೋಗಿನಲ್ಲಿ ವಂಚನೆ, ಟೆಲಿಗ್ರಾಂನಲ್ಲಿ ಮಾಹಿತಿ ಸಂಗ್ರಹ!

ಬೆಂಗಳೂರು: ಕಂಪನಿಯ 'ಗೋಲ್ಡ್‌ ರಷ್‌' ಸ್ಕೀಂನಲ್ಲಿ ಭಾಗವಹಿಸಿ ಹಣ ಗಳಿಸಬಹುದೆಂದು ಹೇಳಿ ಮೆಸೆಂಜರ್‌ ಮೂಲಕ ಸಾರ್ವಜನಿಕರ ಖಾಸಗಿ ಮಾಹಿತಿಯನ್ನು ಅಪರಿಚಿತ ಕಿಡಿಗೇಡಿಗಳು ಸಂಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ. 'ಗೋಲ್ಡ್‌ ರಷ್‌' ಎಂಬ ಸ್ಕೀಂ ವಿಪ್ರೋ ಕಂಪನಿಗೆ ಸೇರಿದ್ದಾಗಿದೆ. ಅದರಲ್ಲಿ ನಾವು ನೌಕರರಾಗಿದ್ದೇವೆ ಎಂದು ಹೇಳಿ 'ಗೋಲ್ಡ್‌ ರಷ್‌ ಟೀಮ್‌ -25' ಹೆಸರಿನಲ್ಲಿ ಟೆಲಿಗ್ರಾಂನಲ್ಲಿ ಗ್ರೂಪ್‌ ಕ್ರಿಯೇಟ್‌ ಮಾಡಲಾಗಿದೆ. ಅದರಲ್ಲಿ ಸಾರ್ವಜನಿಕರಿಂದ ಖಾಸಗಿ ಮಾಹಿತಿ ಸಂಗ್ರಹಿಸಿ ಮೋಸ ಮಾಡುತ್ತಿದ್ದಾರೆ. ಆ ಗ್ರೂಪ್‌ನಲ್ಲಿ ಕೆಲವು ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಶೇರ್‌ ಮಾಡಲಾಗಿದ್ದು, ವೈಯಕ್ತಿಕ ಮಾಹಿತಿ ಅಪ್‌ಲೋಡ್‌ ಮಾಡಲು ಕೇಳಲಾಗುತ್ತಿದೆ. ಆದರೆ, ಆ ರೀತಿಯ ಯಾವುದೇ ವೆಬ್‌ಸೈಟ್‌ ಅಥವಾ ಪಾರ್ಟ್‌ ಟೈಂ ಸ್ಕೀಂಗಳನ್ನು ವಿಪ್ರೋ ಆರಂಭಿಸಿಲ್ಲ. ವಿಪ್ರೋ ಹೆಸರು ದುರುಪಯೋಗ ಮಾಡಿಕೊಂಡು ಜನರಿಗೆ ಮೋಸ ಮಾಡಲಾಗುತ್ತಿದೆ. ಟೆಲಿಗ್ರಾಂ ಖಾತೆಯನ್ನು ನಿಷ್ಕ್ರೀಯಗೊಳಿಸಿ ಮೋಸ ಮಾಡುತ್ತಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಿಪ್ರೋ ಕಂಪನಿಯ ಅಧಿಕಾರಿಯೊಬ್ಬರು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.


from India & World News in Kannada | VK Polls https://ift.tt/2OPioi7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...