ದೇಶದ 4 ರಾಜ್ಯಗಳಲ್ಲಿ ಪೆಟ್ರೋಲ್‌ ದರ ಇಳಿಕೆ: ಕರ್ನಾಟಕದಲ್ಲಿ ಯಾವಾಗ?

ಬೆಂಗಳೂರು: ಹಾಗೂ ಬೆಲೆ ಸಾರ್ವಕಾಲಿಕ ದಾಖಲೆ ಮುಟ್ಟಿದ್ದು, ಇನ್ನೂ ಇವುಗಳ ದರ ಹೆಚ್ಚಳವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನನಗೂ ಧರ್ಮ ಸಂಕಟವನ್ನು ತಂದೊಡ್ಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರೆ, ಒಪೆಕ್‌ ರಾಷ್ಟ್ರಗಳ ಮೇಲೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಗೂಬೆ ಕೂರಿಸಿದ್ದಾರೆ. ಇವೆಲ್ಲದರ ನಡುವೆ ಹಲವು ರಾಜ್ಯಗಳು ತೆರಿಗೆ ಇಳಿಸಿ ಗ್ರಾಹಕರಿಗೆ ಅಲ್ಪ ಮಟ್ಟಿನ ರಿಲೀಫ್‌ ನೀಡಿದೆ. ದೇಶದ ಒಟ್ಟು ನಾಲ್ಕು ರಾಜ್ಯಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಈ ಪೈಕಿ ಎರಡು ರಾಜ್ಯಗಳಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಚುನಾವಣೆ ಇಲ್ಲದ ರಾಜ್ಯಗಳಲ್ಲಿಯೂ ಕೂಡ ತೈಲ ಬೆಲೆ ಇಳಿಕೆಯಾಗಿದ್ದು, ಕರ್ನಾಟದಲ್ಲೂ ತೈಲ ಬೆಳೆ ಇಳಿಕೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಕೋವಿಡ್‌, ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸರ್ಕಾರದಿಂದ ತೈಲ ಬೆಲೆ ಇಳಿಕೆಯ ರಿಲೀಫ್‌ನ ನಿರೀಕ್ಷೆಯಲ್ಲಿದ್ದಾರೆ. ಇನ್ನೆರಡು ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಸುಂಕವನ್ನು ₹1 ಇಳಿಕೆ ಮಾಡಿದೆ. ಇದಕ್ಕೂ ಮುನ್ನ ದೇಶದಲ್ಲೇ ರಾಜಸ್ಥಾನ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು ಶೇ.38 ರಿಂದ ಶೇ.36ಕ್ಕೆ ಇಳಿಕೆ ಮಾಡಿತ್ತು. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿಯೂ ತೈಲ ಬೆಲೆ ಇಳಿಕೆ ಕಂಡಿದೆ. ಕೋವಿಡ್‌ ನಷ್ಟ ಸರಿದೂರಿಸಲು ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ ಹೇರಲಾಗಿದ್ದ ₹5 ತೆರಿಗೆಯನ್ನು ರದ್ದುಗೊಳಿಸಿದೆ. ಈಶಾನ್ಯದ ಸಣ್ಣ ರಾಜ್ಯ ಮೇಘಾಲಯ ತೈಲ ಬೆಲೆಯಲ್ಲಿ ಭಾರೀ ರಿಲೀಫ್‌ ನೀಡಿದ್ದು, ಪೆಟ್ರೋಲ್‌ ಮೇಲೆ ಲೀಟರ್‌ಗೆ ₹7.40 ಹಾಗೂ ಡೀಸೆಲ್‌ ಮೇಲೆ ₹7.10 ಇಳಿಕೆ ಮಾಡಿದೆ. ಈ ವರೆಗೆ ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲು ನಿರಾಕರಿಸಿದೆ. ಇಳಿಸುವ ಪ್ರಸ್ತಾಪ ಕೂಡ ಸರ್ಕಾರದ ಮುಂದಿಲ್ಲ. ಹೀಗಾಗಿ ಜನ ಸಾಮಾನ್ಯರಿಗೆ ನಿರೀಕ್ಷೆ ಇರುವುದು ರಾಜ್ಯ ಸರ್ಕಾರದಿಂದ ಮಾತ್ರ. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇಂಧನದ ಮೇಲಿರುವ ಸುಂಕ ಇಳಿಕೆ ಮಾಡಬೇಕು ಎಂದು ಜನ ಸಾಮಾನ್ಯರು ಆಗ್ರಹಿಸುತ್ತಿದ್ದಾರೆ. ಈ ವೆರೆಗೆ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ ಮಾಡಿದ ರಾಜ್ಯಗಳಿಗಿಂತ ತೆರಿಗೆ ಸಂಗ್ರಹದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ.


from India & World News in Kannada | VK Polls https://ift.tt/3aHeNeM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...