'ಚಹಲ್‌ ಜೋಕ್‌ ಮಾಡುತ್ತಿದ್ದಾರೆಂದು ಭಾವಿಸಿದ್ದೆ' ತೇವಾಟಿಯಾ ಮೊದಲ ಪ್ರತಿಕ್ರಿಯೆ!

ಹೊಸದಿಲ್ಲಿ: ವಿರುದ್ಧ ಐದು ಪಂದ್ಯಗಳ ಟಿ20 ಸರಣಿಗೆ 19 ಸದಸ್ಯರ ಭಾರತ ತಂಡದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಚೊಚ್ಚಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆ ಮೂಲಕ ಭಾರತ ಪ್ರತಿನಿಧಿಸುವ ತಮ್ಮ ಮೊದಲ ಕನಸನ್ನು ಹರಿಯಾಣ ಆಲ್‌ರೌಂಡರ್ ನನಸು ಮಾಡಿಕೊಂಡಿದ್ದಾರೆ. ಯುಎಇಯಲ್ಲಿ ನಡೆದಿದ್ದ 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಹುಲ್‌ ತೇವಾಟಿಯಾ ಗಮನಾರ್ಹ ಪ್ರದರ್ಶನ ತೋರಿದ್ದರು. ಹಲವು ಪಂದ್ಯಗಳಲ್ಲಿ ನಿರ್ಣಾಯಕ ಪ್ರದರ್ಶನ ತೋರಿ ರಾಜಸ್ಥಾನ್‌ ರಾಯಲ್ಸ್‌ಗೆ ಗೆಲುವು ತಂದುಕೊಟ್ಟಿದ್ದರು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿರುವ ತೇವಾಟಿಯಾ, ಇದೀಗ ಡ್ರೆಸ್ಸಿಂಗ್‌ ರೂಂ ಗೂ ಲಗ್ಗೆ ಇಟ್ಟಿದ್ದಾರೆ. ಟೀಮ್‌ ಇಂಡಿಯಾ ಟಿ20 ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಹರಿಯಾಣ ತಂಡದ ಸಹ ಆಟಗಾರರಾದ ಹಾಗೂ ಮೊಹಿತ್‌ ಶರ್ಮಾ ಹೇಳಿದ ಬಗ್ಗೆ ನಂಬಿರಲಿಲ್ಲ. ಸಹ ಆಟಗಾರರು ತಮಾಷೆ ಮಾಡುತ್ತಿದ್ದಾರೆಂದು ಭಾವಿಸಿದ್ದೆ ಎಂದು ರಾಹುಲ್‌ ತೇವಾಟಿಯಾ ಇಂಡಿಯನ್‌ ಇಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ. "ಯುಜಿ ಭಾಯ್‌ (ಚಹಲ್) ಮೊದಲ ಬಾರಿ ನನಗೆ ಹೇಳಿದಾಗ, ನಾನು ಅದನ್ನು ತಮಾಷೆ ಎಂದು ಭಾವಿಸಿದ್ದೆ. ಭಾರತ ತಂಡಕ್ಕೆ ಆಯ್ಕೆಯಾಗುತ್ತೇನೆಂದು ಎಂದೂ ಅಂದುಕೊಂಡಿರಲಿಲ್ಲ. ಮೋಹಿತ್‌ ಭಾಯ್‌( ಶರ್ಮಾ) ಕೂಡ ನನ್ನ ಕೊಠಡಿಗೆ ಬಂದು ಇದೇ ಸುದ್ದಿಯನ್ನು ನೀಡಿದ್ದರು," ಎಂದು ತೇವಾಟಿಯಾ ತಿಳಿಸಿದರು. "ಜೀವನವು ಯಾವಾಗಲೂ ಸವಾಲುಗಳನ್ನು ಎಸೆಯುತ್ತದೆ. ಹರಿಯಾಣದ ಮೂರು ಸ್ಪಿನ್ನರ್‌ಗಳು ಈಗಾಗಲೇ ಭಾರತ ಪ್ರತಿನಿಧಿಸಿದ್ದಾರೆ; ಅಮಿತ್ ಮಿಶ್ರಾ, ಚಹಲ್‌ ಹಾಗೂ ಜಯಂತ್ ಯಾದವ್. ಒಂದು ವೇಳೆ ಅವಕಾಶ ಸಿಕ್ಕರೆ ಅದನ್ನು ಸಂಪೂರ್ಣ ಸದುಪಯೋಗಪಡಿಸಿಕೊಳ್ಳಬೇಕೆಂದು ಅಂದುಕೊಂಡಿದ್ದೆ. ಅದರಂತೆ 2020ರ ಐಪಿಎಲ್‌ ಮುಗಿದ ಬಳಿಕ ಹಲವರು ನನ್ನ ಬಳಿ ಇದೇ ಮಾತನ್ನು ಹೇಳಿದ್ದರು. ಇದೇ ಪ್ರದರ್ಶನ ಮುಂದುವರಿಸಿದರೆ, ಖಂಡಿತಾ ಭಾರತ ತಂಡ ಪ್ರತಿನಿಧಿಸುವ ಅವಕಾಶ ಸಿಗಬಹುದು ಎಂದು ನನಗೆ ನಾನೇ ಹೇಳಿಕೊಂಡಿದ್ದೆ," ಎಂದು ಹೇಳಿದರು. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೇರಿದಂತೆ ಹಲವು ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್‌ ಕೊಠಡಿ ಶೇರ್ ಮಾಡುವುದು ಅದ್ಭುತ ಅನುಭವವಾಗಲಿದೆ ಎಂದು ರಾಹುಲ್‌ ತೇವಾಟಿಯಾ ತಿಳಿಸಿದರು. "ಡ್ರೆಸ್ಸಿಂಗ್ ಕೊಠಡಿಯನ್ನು ಹಲವು ಹಿರಿಯ ಆಟಗಾರರೊಂದಿಗೆ ಹಂಚಿಕೊಳ್ಳುವುದು ಮತ್ತು ಅವರ ಕೆಲಸದ ನೀತಿಯನ್ನು ಹತ್ತಿರದಿಂದ ನೋಡುವುದು ಉತ್ತಮವಾಗಿರುತ್ತದೆ. ಭಾರತ ತಂಡದೊಂದಿಗೆ ಇರುವ ಅನುಭವವು ಸಂಪೂರ್ಣ ವಿಭಿನ್ನವಾಗಿದೆ ಎಂದು ಈ ಹಿಂದೆ ಕೇಳಿದ್ದೇನೆ. ಟೀಮ್‌ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆದಾರರು ನನ್ನ ಮೇಲೆ ವಿಶ್ವಾಸ ತೋರಿಸಿದ್ದಾರೆ, ” ಎಂದರು. 2020ರ ಐಪಿಎಲ್‌ ಟೂರ್ನಿಯಲ್ಲಿ ರಾಹುಲ್‌ ತೇವಾಟಿಯಾ ಆಡಿದ 14 ಪಂದ್ಯಗಳಿಂದ 255 ರನ್‌ ಹಾಗೂ 10 ವಿಕೆಟ್‌ ಕಬಳಿಸಿದ್ದರು. ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ 53 ರನ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಅಜೇಯ 45 ರನ್‌ ಗಳಿಸಿದ್ದು ತೇವಾಟಿಯಾ ಪಾಲಿಗೆ ಅದ್ಭುತ ಇನಿಂಗ್ಸ್‌ಗಳು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37AQxIZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...