ಸಂಬಳವಿಲ್ಲದೆ ಕೋವಿಡ್‌ ವಾರಿಯರ್ಸ್‌ಗಳ ಪರದಾಟ: 39 ಆರೋಗ್ಯ ಕೇಂದ್ರದ ವೈದ್ಯರಿಗೆ ಸಂಕಷ್ಟ!

ಬೆಂಗಳೂರು: ಕಳೆದ ವರ್ಷ ಆಗಸ್ಟ್‌ನಲ್ಲಿ ಕೋವಿಡ್‌ ವಾರಿಯರ್ಸ್‌ ಆಗಿ ನೇಮಕಗೊಂಡ ನಗರ ಜಿಲ್ಲೆಯ 39 ಪ್ರಾಥಮಿಕ ಆರೋಗ್ಯ ಕೇಂದ್ರದ ಸುಮಾರು 30ಕ್ಕೂ ಹೆಚ್ಚು ವೈದ್ಯರು ಮೂರು ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ನವೆಂಬರ್‌, ಡಿಸೆಂಬರ್‌ ಮತ್ತು ಜನವರಿಯಿಂದ ವೈದ್ಯರಿಗೆ ಸಂಬಳವಾಗಿಲ್ಲ. ಆಗಸ್ಟ್‌ , 2020ರಲ್ಲಿ ರಾಜ್ಯ ಸರಕಾರ ಮಾಸಿಕ 60 ಸಾವಿರ ನೀಡುವುದಾಗಿ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಿಕೊಂಡಿತ್ತು. ಆದರೆ ಕೇವಲ ಮೂರು ತಿಂಗಳು ಮಾತ್ರ ಸಂಬಳ ನೀಡಿ ಆನಂತರದ ಸಂಬಳ ನೀಡಲು ಮೀನಮೇಷ ಎಣಿಸುತ್ತಿದೆ. ಗುತ್ತಿಗೆ ಆಧಾರದಲ್ಲಿ ಸೇವೆಗೆ ನೇಮಕವಾದ ಬಹುತೇಕ ವೈದ್ಯರು ಕೊರೊನಾ ಕಾಲದಲ್ಲಿ ಕುಟುಂಬದವರ ವಿರೋಧ ಕಟ್ಟಿಕೊಂಡು, ತಮ್ಮ ಜೀವವನ್ನೇ ಒತ್ತೆ ಇಟ್ಟು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ನ್ಯಾಷನಲ್‌ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ಆ್ಯಕ್ಟ್ (ಎನ್‌ಡಿಎಂಎ) ಪ್ರಕಾರ ಕೋವಿಡ್‌-19ಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡಿಲ್ಲದಿದ್ದರೆ, ಮಾಸ್ಕ್‌ ಹಾಕಿಲ್ಲವಾದರೆ ಅಥವಾ ಎನ್‌ಡಿಎಂಎ ಕಾನೂನು ಉಲ್ಲಂಘನೆ ಮಾಡಿದರೆ ಕ್ರಿಮಿನಲ್‌ ಅಪರಾಧ ಆಗುತ್ತದೆ. ಆದರೆ ಅದೇ ಆ್ಯಕ್ಟ್ ನಲ್ಲಿ ನೇಮಕವಾದ ವೈದ್ಯರಿಗೆ ಸರಿಯಾದ ಸಮಯದಲ್ಲಿ ಸಂಬಳ ನೀಡದೇ ಇರುವುದು ಮಾತ್ರ ವಿಪರ್ಯಾಸ. ಜಿಲ್ಲಾ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದರೆ ''ಮುಂದಿನ ಆದೇಶ ಬರುವವರೆಗೂ ಕೆಲಸ ಮಾಡಿ ಎನ್ನುತ್ತಾರೆ. ಸಂಬಳ ಕೇಳಿದರೆ ಮಾತ್ರ ಮೌನಕ್ಕೆ ಶರಣಾಗುತ್ತಾರೆ'' ಎನ್ನುತ್ತಾರೆ ವೈದ್ಯರೊಬ್ಬರು. ಸೇವೆಯನ್ನು ಮುಂದುವರಿಸಿ ಕೋವಿಡ್‌-19 ಸಂಪೂರ್ಣ ಹೋಗಿಲ್ಲ. ಲಸಿಕಾ ಅಭಿಯಾನ ಈಗ ತಾನೆ ಆರಂಭವಾಗಿದೆ. ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮ ಏನಾದರೂ ಉಂಟಾದರೆ ತಕ್ಷಣ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಅದಕ್ಕೆ ಸೂಕ್ತ ವೈದ್ಯರ ಅಗತ್ಯವಿದೆ. ಹಾಗಾಗಿ ಸಾಮೂಹಿಕ ವ್ಯಾಕ್ಸಿನೇಷನ್‌ ಡ್ರೈವ್‌ಗಳಲ್ಲಿ ತಮ್ಮನ್ನು ಬಳಸಿಕೊಳ್ಳಬೇಕು ಎಂದು ಕೋವಿಡ್‌ ವಾರಿಯರ್ಸ್‌ ವೈದ್ಯರು ಆಗ್ರಹಿಸಿದ್ದಾರೆ. ಮೇ ತಿಂಗಳಲ್ಲಿ ನೇಮಕವಾದ ವೈದ್ಯರ ಗುತ್ತಿಗೆಯನ್ನು ನವೀಕರಿಸಲಾಗಿದೆ ಹಾಗೆಯೇ ನಮ್ಮ ಗುತ್ತಿಗೆಯನ್ನೂ ಕೂಡ ನವೀಕರಿಸಿ ಎನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಆರೋಗ್ಯ ತಜ್ಞರು ಭಾರತ ಪ್ರತಿಯೊಬ್ಬರಿಗೂ ಲಸಿಕೆ ಸಿಗಲು ಕನಿಷ್ಠ ಮೂರು ವರ್ಷ ಬೇಕು ಎನ್ನುತ್ತಾರೆ. ಅಲ್ಲಿಯವರೆಗಾದರೂ ಸೇವೆಯನ್ನು ಮುಂದುವರಿಸಿ ಎನ್ನುವುದು ವೈದ್ಯರ ಆಗ್ರಹ. ಬಿಬಿಎಂಪಿಯಲ್ಲೂಇದೇ ಗೋಳುಬಿಬಿಎಂಪಿಯಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಕೋವಿಡ್‌ ನಿರ್ವಹಣೆಗೆ 200 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇವರಿಗೂ ಕೂಡ ಕಳೆದ ಎರಡು ತಿಂಗಳುಗಳಿಂದ ಸಂಬಳ ಪಾವತಿಯಾಗಿಲ್ಲ. ನವೆಂಬರ್‌ ವೇತನವನ್ನು ಜನವರಿಯಲ್ಲಿ ನೀಡಲಾಗಿದೆ. ಕೋವಿಡ್‌ ನಿರ್ವಹಣೆಗಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ರಾಜ್ಯದ ಬಹುತೇಕ ವೈದ್ಯರು ಸಂಬಳವಿಲ್ಲದೆ ಪರದಾಡುತ್ತಿದ್ದಾರೆ.


from India & World News in Kannada | VK Polls https://ift.tt/36X6nh5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...