ಕಂಪನಿಗಳ ಹೆಸರಿನಲ್ಲಿ ಸೈಬರ್‌ ವಂಚನೆ: ಸ್ವಯಂ ಉದ್ಯೋಗದ ಕನಸು ಕಂಡವರಿಗೆ ಪಂಗನಾಮ!

ಆರ್‌.ಶ್ರೀಧರ್‌ ರಾಮನಗರ ‌ ರಾಮನಗರ: ಜಾಲತಾಣಗಳಲ್ಲಿ ಸ್ವಯಂ ಉದ್ಯೋಗಕ್ಕೆ ಸಹಕಾರ ನೀಡಲಾಗುವುದೆಂಬ ಜಾಹಿರಾತುಗಳ ಸತ್ಯಾಸತ್ಯತೆ ಪರಿಶೀಲಿಸದೇ ಹೋದರೆ, ಕೈಯಲ್ಲಿದ್ದುದನ್ನು ಕಳೆದುಕೊಳ್ಳುವುದರ ಜತೆಗೆ ಲಕ್ಷಾಂತರ ರೂ. ಸಾಲಗಾರರಾಗಬೇಕಾಗುತ್ತದೆ. ಸೈಬರ್‌ ವಂಚಕರ ನಯವಾದ ಮಾತಿಗೆ ಮರುಳಾದ ಕನಕಪುರ ತಾಲೂಕಿನ ಸುನೀಲ್‌ ಎಂಬ ಯುವಕ, ಕೈಯಲ್ಲಿದ್ದ ಅಷ್ಟೂ ಹಣವನ್ನು ಕಳೆದುಕೊಂಡಿದ್ದಾರೆ. ಸೈಬರ್‌ ಸೆಂಟರ್‌ ಹೆಸರಿನಲ್ಲಿ ವಂಚನೆ ಕೆಲವು ವಾರಗಳ ಹಿಂದೆ ಜಾಲತಾಣಗಳಲ್ಲಿ ಕಾಣಿಸಿಕೊಂಡ ಜಾಹೀರಾತನ್ನು ನಂಬಿದ ಕನಕಪುರದ ಅರಳಾಳುಸಂದ್ರದ ನಿವಾಸಿ ಸುನೀಲ್‌, ಸೈಬರ್‌ಸೆಂಟರ್‌ ತೆರೆಯುವ ಆಸೆ ವ್ಯಕ್ತಪಡಿಸಿ ತಮ್ಮ ಫೋನ್‌ ನಂಬರನ್ನು ಅಪ್‌ಲೋಡ್‌ ಮಾಡಿದ್ದರು. ಇದಾಗಿ ಮೂರೇ ದಿನಗಳಲ್ಲಿ ಅವರಿಂದ ವಂಚಕರು 2.5 ಲಕ್ಷ ರೂ.ಗಳನ್ನು ದೋಚಿದ್ದಾರೆ. ಏನಿದು ಪ್ರಕರಣ? ಬೆವ್‌ ಸಿಎಸ್‌ಬಿ ಪಾಯಿಂಟ್‌ಗಳ ಮೂಲಕ ಸೈಬರ್‌ ಸೆಂಟರ್‌ ತೆರೆಯಲು ಎಲ್ಲ ರೀತಿಯ ಸವಲತ್ತು, ಬಾಡಿಗೆ, ಕಟ್ಟಡದ ಅಡ್ವಾನ್ಸ್‌ ಎಲ್ಲವನ್ನು ಕಂಪನಿಯೇ ನೀಡಲಿದೆ ಎಂದು ಸುನೀಲ್‌ರನ್ನು ನಂಬಿಸಿದ ಖದೀಮರು, ಕಂಪನಿಯ ಗ್ರಾಹಕರಾಗಲು 50 ಸಾವಿರ ಡೆಪಾಸಿಟ್‌ ಮಾಡಬೇಕು. ನಿಮಗೆ ನಂಬಿಕೆ ಇಲ್ಲದಿದ್ದರೆ, ಈ ಹಿಂದೆ ನಮ್ಮ ಕಂಪನಿಯಿಂದ ಸೈಬರ್‌ ಸೆಂಟರ್‌ ತೆರೆದಿರುವವರನ್ನು ವಿಚಾರಿಸಬಹುದು ಎಂದು ತಮ್ಮದೇ ವ್ಯಕ್ತಿಯ ದೂರವಾಣಿ ಸಂಖ್ಯೆ ನೀಡಿದ್ದರು. ಇದನ್ನು ನಂಬಿದ ಸುನೀಲ್‌ 50 ಸಾವಿರ ರೂ.ಗಳನ್ನು ಅಕೌಂಟ್‌ಗೆ ಹಾಕಿದ್ದಾರೆ. ಇದಾದ ಬಳಿಕ ನಿಮ್ಮ ಹೆಸರಿನಲ್ಲಿ ಒಡಿ ಅಕೌಂಟ್‌ ತೆರೆಯಲಾಗಿದೆ ಎಂದು ನಂಬಿಸಿದ್ದಾರೆ. ಇನ್ನು ನಿಮ್ಮ ತೆರೆಯಲು ರಿಜಿಸ್ಟ್ರೇಶನ್‌ ಆಗಬೇಕಿದೆ. ಇದಕ್ಕಾಗಿ 1,57500 ರೂ. ಪಾವತಿಸಬೇಕು. ಕಂಪನಿಯ ನೋಂದಣಿ ಮುಗಿದ ತಕ್ಷಣ ನಿಮ್ಮ ಹಣವನ್ನು ಮರಳಿಸಲಾಗುವುದು ಎಂದು ನಂಬಿಸಿ 52,500 ರೂ.ಗಳಂತೆ ಮೂರು ಕಂತುಗಳಲ್ಲಿ ಹಣ ಪಡೆದಿದ್ದಾರೆ. ಮತ್ತೆ ಅದೂ ಇದೂ ನೆಪವೊಡ್ಡಿ 50 ಸಾವಿರ ಪಡೆದುಕೊಂಡಿದ್ದಾರೆ. ಇಷ್ಟಾದ ಬಳಿಕ ಸುನೀಲ್‌ ಅವರ ವಾಟ್ಸ್‌ಆ್ಯಪ್‌ ನಂಬರಿಗೆ ಕಂಪನಿಯೊಂದಿಗೆ 5 ವರ್ಷದ ಅಗ್ರಿಮೆಂಟ್‌ ಮಾಡಿಕೊಂಡಿರುವ ಕಾಫಿಯೊಂದು ಬಂದಿದೆ. ಸೈಬರ್‌ ಸೆಂಟರ್‌ಗೆ ಅಗತ್ಯವಿರುವ ವಸ್ತುಗಳನ್ನು ಕೊರಿಯರ್‌ ಮಾಡಲಾಗಿದೆ ಎಂದು ಟ್ರ್ಯಾಕಿಂಗ್‌ ಐಡಿಯನ್ನು ಸಹ ಕಳುಹಿಸಿದ್ದಾರೆ. ಮತ್ತೆ ಮತ್ತೆ ಹಣ ಕಿತ್ತರು ಇದನ್ನೆಲ್ಲಾ ನೋಡಿದ ಬಳಿಕ ಇನ್ನೇನು ಸ್ವಂತ ಸೈಬರ್‌ ಸೆಂಟರ್‌ನ ಮಾಲೀಕರಾಗುವ ಕನಸು ಕಂಡ ಸುನೀಲ್‌ಗೆ ಮತ್ತೆ ಕರೆ ಮಾಡಿದ ವಂಚಕರು, ನಿಮಗೆ 10 ಲಕ್ಷದ ಒಡಿ ಅಪ್ರೂವಲ್‌ ಆಗಿದೆ. ಆದರೆ ಅದಕ್ಕಾಗಿ 90 ಸಾವಿರ ರೂ.ಗಳ ಜಿಎಸ್‌ಟಿ ಹಣ ಪಾವತಿ ಮಾಡಬೇಕು. ನೀವು 45 ಸಾವಿರ ರೂ. ಹಾಕಿ. ಕಂಪನಿಯಿಂದ 45 ಸಾವಿರ ರೂ. ಪಾವತಿಸುವುದಾಗಿ ಹೇಳಿದ್ದಾರೆ. ಹಿಂದು ಮುಂದು ನೋಡದೇ ಸುನೀಲ್‌ ಮತ್ತೆ 45 ಸಾವಿರ ರೂ. ಹಣ ಜಮೆ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಮತ್ತೆ ಕರೆ ಮಾಡಿದ ವಂಚಕರು, ನಿಮ್ಮ ಹಣ ಕಂಪನಿಯ ಅಕೌಂಟ್‌ಗೆ ಜಮೆ ಆಗುತ್ತಿಲ್ಲ. ಆದ್ದರಿಂದ ಮತ್ತೊಮ್ಮೆ ಹಾಕಿ ಎಂದು ನಂಬಿಸಿ ಮತ್ತೆ 45 ಸಾವಿರ ರೂ. ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೇ, ಸೈಬರ್‌ ಸೆಂಟರ್‌ ತೆರೆಯಲು ಎಲ್ಲವು ಸಿದ್ದವಿದೆ. ಆದರೆ, ಇನ್ಸೂರೆನ್ಸ್‌ ಕಟ್ಟಬೇಕು ಎಂಬ ಕಾರಣ ನೀಡಿ, ಮತ್ತೆ 37,750 ರೂ.ಗಳನ್ನು ಪಡೆದುಕೊಂಡಿದ್ದಾರೆ. ಇದಾದ ಬಳಿಕ ವಂಚಕರ ದೂರವಾಣಿ ಸ್ಥಗಿತಗೊಂಡಿದೆ. ಸುನೀಲ್‌ ಎಷ್ಟೇ ಕರೆ ಮಾಡಿದರೂ ರಾಂಗ್‌ ನಂಬರ್‌ ಎಂಬ ಉತ್ತರ ಕೇಳಿ ಬರುತ್ತಿದೆ. ಆಗ ಸುನೀಲ್‌ಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಅವರು ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಾಹೀರಾತು ನಂಬಿ ನಾನು 2.35 ಲಕ್ಷ ರೂ. ಕಳೆದುಕೊಂಡಿದ್ದೇನೆ. ಈಗಲೂ, ವಂಚಕರ ದೂರವಾಣಿ ಸಂಖ್ಯೆಗಳು ಚಾಲ್ತಿಯಲ್ಲಿವೆ. ನನ್ನೊಂದಿಗೆ ಮಾತನಾಡುವಾಗ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿದ್ದರು. ದೂರು ನೀಡಿ ಒಂದು ವಾರ ಕಳೆದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಿಟ್ಟಿದ್ದ ಎಲ್ಲ ಹಣವನ್ನು ಕಳೆದುಕೊಂಡಿದ್ದೇನೆ. ಸುನೀಲ್‌, ಹಣ ಕಳೆದುಕೊಂಡವರು ಹಳ್ಳಿಗರನ್ನೇ ಟಾರ್ಗೆಟ್‌ ಮಾಡಿಕೊಂಡು ವಂಚಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಇಂತಹ ಪ್ರಕರಣ ಕಡಿಮೆ. ಜನರು ಸತ್ಯಾಸತ್ಯತೆ ಪರಿಶೀಲಿಸದೇ ಜಾಹೀರಾತುಗಳನ್ನು ನಂಬಬಾರದು. ಸುನೀಲ್‌ ಎಂಬಾತ 2 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಎಸ್‌.ಗಿರೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ


from India & World News in Kannada | VK Polls https://ift.tt/39II3B3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...