ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕ ಇಳಿಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆರ್‌ಬಿಐ ನಿರ್ದೇಶ

ಹೊಸದಿಲ್ಲಿ: , ದರ ಸಾರ್ವಕಾಲಿಕ ಏರಿಕೆ ಕಂಡ ಬೆನ್ನಲ್ಲೇ, ಪರೋಕ್ಷ ತೆರಿಗೆ ಕಡಿತಗೊಳಿಸಿ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಪೆಟ್ರೋಲ್‌ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೇರುವ ತೆರಿಗೆಯ ಪಾಲು ಶೇ.60 ಇದ್ದು, ಡೀಸೆಲ್ ಮೇಲೆ ಎರಡೂ ಸರ್ಕಾರಗಳು ಶೇ.54 ರಷ್ಟು ತೆರಿಗೆ ವಿಧಿಸುತ್ತಿದೆ. ಇದನ್ನು ಕಡಿತಗೊಳಿಸಿ ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಆರ್ಥಿಕತೆಯ ಮೇಲಿನ ಒತ್ತಡ ಕಡಿಮೆ ಮಾಡಲು ತೆರಿಗೆ ಪ್ರಮಾಣ ಇಳಿಕೆ ಮಾಡಬೇಕು ಎಂದು ಆರ್‌ಬಿಐ ಗವರ್ನರ್‌ ಹೇಳಿದ್ದಾರೆ. ಫೆಬ್ರವರಿ 6 ರಂದು ಮುಕ್ತಾಯವಾದ ಹಣಕಾಸು ಸಮಿತಿಯ ಸಭೆಯಲ್ಲಿ ಶಕ್ತಿಕಾಂತ ದಾಸ್‌ ಅವರು ಈ ಮಾತನ್ನು ಹೇಳಿದ್ದಾರೆ. ಆ ಸಭೆಯ ನಿರ್ಣಯಗಳು ಸೋಮವಾರ ಬಿಡುಗಡೆಯಾಗಿದೆ. ಡಿಸೆಂಬರ್‌ನಿಂದ ಗ್ರಾಹಕ ದರ ಸೂಚ್ಯಂಕ ಶೇ.5.5ರಷ್ಟಿದ್ದು, ಇದರಿಂದ ಉಂಟಾಗುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಹಣದುಬ್ಬರದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರ ಪ್ರಭಾವ ಸಾರಿಗೆ ಹಾಗೂ ಆರೋಗ್ಯ ವಲಯಕ್ಕೆ ಹೆಚ್ಚು ತಟ್ಟಿದೆ ಎಂದು ದಾಸ್‌ ಹೇಳಿದ್ದಾರೆ. ಅಲ್ಲದೇ ಇದನ್ನು ಸರಿಪಡಿಸಲು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ವಿಧಿಸಲಾಗುವ ಪರೋಕ್ಷ ತೆರಿಗೆಯನ್ನು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಕಡಿತಗೊಳಿಸಬೇಕು. ಇದು ಆರ್ಥಿಕತೆಯ ಮೇಲಿನ ಒತ್ತಡ ಕಡಿತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಅಂದಾಜಿನ ಪ್ರಕಾರ 2021ರ ಮಧ್ಯಭಾಗದಲ್ಲಿ ಕಚ್ಚಾ ತೈಲದ ದರ ಬ್ಯಾರಲ್‌ಗೆ $65 ತಲುಪಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಇರ ಇಳಿಕೆಯಾಗುತ್ತಿದ್ದರೂ, ಗ್ರಾಹಕರ ಸಿಗುವ ತೈಲದ ದರ ಏರುಮುಖವಾಗುತ್ತಲೇ ಸಾಗಿದೆ. ಇದರ ಪರೋಕ್ಷ ಪ್ರಭಾವ ಅಗತ್ಯ ವಸ್ತುಗಳ ಮೇಲೆ ಆಗುತ್ತಿದೆ. 2020-21 ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಿನಲ್ಲಿ ಕೇಂದ್ರ ಸರ್ಕಾರಕ್ಕೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಕರದಿಂದಾಗಿ 2.36 ಲಕ್ಷ ಕೋಟಿ ಆದಾಯ ಬಂದಿದೆ. ಒಂದು ವರ್ಷದಲ್ಲಿ ಅದು 3.61 ಲಕ್ಷ ಕೋಟಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.


from India & World News in Kannada | VK Polls https://ift.tt/2NzBcSa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...