ಅಬುಧಾಬಿ: ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವಣ ಜಟಾಪಟಿಗೆ ವೇದಿಕೆ ಸಿದ್ಧವಾಗಿದೆ. ಹೈ ವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಎದುರು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು, ವೇಗಿ ಅಂಕಿತ್ ರಜಪೂರ್ ಅವರ ಬದಲಿಗೆ ಆಲ್‌ರೌಂಡರ್ ಮಹಿಪಾಲ್ ಲೊಮ್ರೊರ್‌ಗೆ ಸ್ಥಾನ ನೀಡಿದೆ. ರಾಯಲ್ ಚಾಲೆಂಜರ್ಸ್ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯಿತು. ಎರಡೂ ತಂಡಗಳು ಟೂರ್ನಿಯಲ್ಲಿ 3 ಪಂದ್ಯಗಳನ್ನು ಆಡಿ ಒಂದು ಸೋಲು ಮತ್ತು 2 ಪಂದ್ಯಗಳಲ್ಲಿ ಜಯ ದಾಖಲಿಸಿ ಸುಸ್ಥಿತಿಯಲ್ಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಅವಕಾಶವಿದೆ. ಇತ್ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ ಪ್ಲೇಯಿಂಗ್ XI: ದೇವದತ್ ಪಡಿಕ್ಕಲ್, ಆರೊನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ'ವಿಲಿಯರ್ಸ್ (ವಿಕೆಟ್‌ಕೀಪರ್), ಶಿವಂ ದುಬೇ, ಗುರುಕೀರತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಆಡಮ್ ಝಾಂಪ, ಯುಜ್ವೇಂದ್ರ ಚಹಲ್. ಆರ್‌ಆರ್ ಪ್ಲೇಯಿಂಗ್ XI: ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಟಿಯಾ, ಮಹಿಪಾಲ್ ಲೊಮ್ರೊರ್, ಟಾಮ್ ಕರ್ರನ್, ಶ್ರೇಯಾಸ್ ಗೋಪಾಲ್, ಜೋಫ್ರ ಆರ್ಚರ್, ಜಯದೇವ್ ಉನಾದ್ಕಟ್. ತಂಡಗಳ ವಿವರರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಆರೊನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೆಟ್‌ಕೀಪರ್), ಶಿವಂ ದುಬೇ, ಗುರುಕೀರತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಇಸುರು ಉದನಾ, ನವದೀಪ್ ಸೈನಿ, ಆಡಮ್ ಝಾಂಪ, ಯುಜ್ವೇಂದ್ರ ಚಹಲ್, ಉಮೇಶ್ ಯಾದವ್, ಡೇಲ್ ಸ್ಟೇನ್, ಪಾರ್ಥಿವ್ ಪಟೇಲ್, ಮೊಯೀನ್ ಅಲಿ, ಪವನ್ ನೇಗಿ, ಕ್ರಿಸ್ ಮಾರಿಸ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ಜಾಶ್ ಫಿಲಿಪ್, ಶಹಬಾಜ್ ಅಹ್ಮದ್. ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಟಾಮ್ ಕರ್ರನ್, ಶ್ರೇಯಾಸ್ ಗೋಪಾಲ್, ಜೋಫ್ರ ಆರ್ಚರ್, ಜಯದೇವ್ ಉನಾದ್ಕಟ್, ಅಂಕಿತ್ ರಾಜ್‌ಪೂತ್, ಡೇವಿಡ್ ಮಿಲ್ಲರ್, ಯಶಸ್ವಿ ಜೈಸ್ವಾಲ್, ವರುಣ್ ಆರನ್, ಅನಿರುದ್ಧ ಜೋಶಿ, ಮನನ್ ವೊಹ್ರಾ, ಆಂಡ್ರ್ಯೂ ಟೈ, ಶಶಾಂಕ್ ಸಿಂಗ್, ಮಹಿಪಾಲ್ ಲೊಮ್ರೊರ್, ಓಶೇನ್ ಥಾಮಸ್, ಮಾಯಾಂಕ್ ಮಾರ್ಕಂಡೆ, ಅನುಜ್ ರಾವತ್, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2F1PJC8