ಗೆಳೆಯರೊಂದಿಗೆ ಹೀಗಾ ಮಾತಾಡೋದು?: ಭಾರತ ಕಲುಷಿತ ಎಂದ ಟ್ರಂಪ್‌ಗೆ ಬಿಡೆನ್ ಗುದ್ದು!

ವಾಷಿಂಗ್ಟನ್: ಇತ್ತೀಚಿಗೆ ನಡೆದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆಯಲ್ಲಿ, ಭಾರತ-ಚೀನಾದ ಗಾಳಿ ಕಲುಷಿತವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಅವರ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಹೇಳಿಕೆಯನ್ನು ಟೀಕಿಸುತ್ತಿರುವ ಭಾರತೀಯರು, ಭಾರತವನ್ನು ಸಾರ್ವಜನಿಕವಾಗಿ ಅಪಮಾನಗೊಳಿಸಿದ ಟ್ರಂಪ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕೂಡ ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದು, ಗೆಳಯರೊಂದಿಗೆ(ಭಾರತ) ಮಾತನಾಡುವ ರೀತಿ ಇದಲ್ಲ ಎಂದು ಟ್ರಂಪ್ ಅವರ ಕಾಲೆಳೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜೋ ಬಿಡೆನ್, ಎಂದು ಹೇಳುವ ಮೂಲಕ ಟ್ರಂಪ್ ಭಾರತೀಯರ ಮನ ನೋಯಿಸಿದ್ದಾರೆ. ಟ್ರಂಪ್ ಹೇಳಿಕೆ ಭಾರತೀಯರಿಗೆ ನೋವುಂಟು ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ. ಗೆಳೆಯರೊಂದಿಗೆ ಹೀಗೆ ಮಾತನಾಡಬಾರದು. ಅಷ್ಟೇ ಅಲ್ಲದೇ ಟ್ರಂಪ್ ಅವರಾಡಿದ ಮಾತುಗಳಿಂದ ಜಾಗತಿಕ ಹವಾಮಾನ ಸಮಸ್ಯೆ ಪರಿಹಾರವೂ ಕಾಣದು ಎಂದು ಜೋ ಬಿಡೆನ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕನ್ ಭಾರತೀಯರ ಮನ ಗೆಲ್ಲಲು ಟ್ರಂಪ್ ಅವರ ಹೇಳಿಕೆಯನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಜೋ ಬಿಡೆನ್, ಭಾರತೀಯರನ್ನು 'ಗೆಳೆಯರು' ಎಂದು ಕರೆಯುವ ಮೂಲಕ ಅಮೆರಿಕನ್ ಭಾರತೀಯ ಸಮುದಾಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ.


from India & World News in Kannada | VK Polls https://ift.tt/2TnCkb0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...