ಆಕ್ಸಿಜನ್‌ ಇಲ್ಲದೆ ಒದ್ದಾಡುತ್ತಿವೆ ಉದ್ಯಮ ಘಟಕಗಳು..!

ಹುಬ್ಬಳ್ಳಿ/ಮಂಗಳೂರು: ಕೊರೊನಾದಿಂದ ಆಕ್ಸಿಜನ್‌ ಸಿಲಿಂಡರ್‌ಗಳೆಲ್ಲಾಆಸ್ಪತ್ರೆ ಪಾಲಾಗುತ್ತಿವೆ. ಇದರಿಂದ ಗ್ಯಾರೇಜ್‌, ಪೀಠೋಪಕರಣ, ಕಪಾಟು, ಅಲ್ಯುಮಿನಿಯಂ ಕೈಗಾರಿಕೆ, ಫ್ಯಾಬ್ರಿಕೇಶನ್‌, ರೂಫಿಂಗ್‌ ಘಟಕಗಳಿಗೆ ಪ್ರಾಣವಾಯುವಿಲ್ಲದೆ ಏದುಸಿರು ಬಿಡುತ್ತಿವೆ. ಆಕ್ಸಿಜನ್‌ ಸಿಲಿಂಡರ್‌ ಪೂರೈಸುವ ಏಜೆನ್ಸಿಗಳು ಆಕ್ಸಿಜನ್‌ ಸಿಲಿಂಡರ್‌ಗಳನ್ನು ಕಡ್ಡಾಯವಾಗಿ ಆಸ್ಪತ್ರೆಗಳಿಗೆ ಒದಗಿಸುವಂತೆ ಆದೇಶ ಹೊರಡಿಸಿರುವುದರಿಂದ ಈಗ ಪರದಾಟ ಶುರುವಾಗಿದ್ದು, ಆಕ್ಸಿಜನ್‌ ವಿತರಣಾ ಘಟಕಗಳು ಶೇ. 90ಕ್ಕಿಂತ ಹೆಚ್ಚಿನ ಪ್ರಮಾಣದ ಆಮ್ಮಜನಕವನ್ನು ಆಸ್ಪತ್ರೆಗಳಿಗೆ ನೀಡುತ್ತಿವೆ. ಆಕ್ಸಿಜನ್‌ ಮೇಲೆ ಅವಲಂಬಿತವಾದ ಸ್ಟೀಲ್‌, ಶುಗರ್‌ ಹಾಗೂ ಹೈಡ್ರಾಲಿಕ್‌ ಮೆಷಿನ್‌ನಂತಹ ದೊಡ್ಡ ದೊಡ್ಡ ಇಂಡಸ್ಟ್ರಿಗಳು ಆಕ್ಸಿಜನ್‌ ಕೊರತೆ ಎದುರಿಸುತ್ತಿವೆ. ಆಕ್ಸಿಜನ್‌ ಉತ್ಪಾದನೆ ಮಾಡುವ ತೋರಣಗಲ್‌ನ ಜಿಂದಾಲ್‌, ಕೊಪ್ಪಳದ ಕಲ್ಯಾಣಿ ಸ್ಟೀಲ್‌ ಫ್ಯಾಕ್ಟರಿಗಳನ್ನು ಬಿಟ್ಟರೆ ಉಳಿದ ಶೇ. 95ರಷ್ಟು ದೊಡ್ಡ ಉದ್ಯಮಗಳು ಆಕ್ಸಿಜನ್‌ ಇಲ್ಲದೇ ನಲುಗಿ ಹೋಗಿವೆ. ಇದು ಸಹಜವಾಗಿ ಈ ಕ್ಷೇತ್ರವನ್ನು ನಂಬಿರುವ ಕಾರ್ಮಿಕ, ಕಚ್ಚಾ ವಸ್ತು ಪೂರೈಕೆ, ಸಾರಿಗೆ ಸೇರಿದಂತೆ ಅನೇಕ ವಲಯಗಳ ಮೇಲೆ ದುಷ್ಪರಿಣಾಮ ಬೀರಿದೆ. ನಿತ್ಯ 1500 ಟನ್‌ ಉತ್ಪಾದನೆ: ರಾಜ್ಯದ ಎಂಟು ಆಕ್ಸಿಜನ್‌ ಕೇಂದ್ರಗಳಲ್ಲಿಸುಮಾರು 1200-1500 ಟನ್‌ ಲಿಕ್ವಿಡ್‌ ಆಕ್ಸಿಜನ್‌ ಉತ್ಪಾದನೆ ಆಗುತ್ತಿದೆ. ಕೋವಿಡ್‌ಗೂ ಮುನ್ನ ಒಟ್ಟು ಉತ್ಪಾದನೆಯ ಶೇ. 20-22ರಷ್ಟು ಆಸ್ಪತ್ರೆಗೆ ಬಳಕೆ ಆಗುತ್ತಿತ್ತು. ಉಳಿದ ಶೇ. 70-75ರಷ್ಟು ಕೈಗಾರಿಕೆಗಳಿಗೆ ಬಳಸಲಾಗುತ್ತಿತ್ತು. ಇದೀಗ ಶೇ. 90ರಷ್ಟು ಆಸ್ಪತ್ರೆಗಳಿಗೆ ಬಳಕೆಯಾಗುತ್ತಿದೆ. ದರ ಏರಿಕೆ: ಏಳು ಕ್ಯುಬಿಕ್‌ ಮೀಟರಿನ ಸಿಲಿಂಡರಿಗಿದ್ದ 500 ರೂ. ದರ 600ರೂ. ಗಳಿಗೇರಿದೆ. ಗುಜರಿ ಅಂಗಡಿಗಳಲ್ಲಿ ಸ್ಕ್ಯಾ‌ಪ್‌ ಕಟ್ಟಿಂಗಿಗೂ ಆಕ್ಸಿಜನ್‌ ಸಿಲಿಂಡರ್‌ ಅಗತ್ಯವಿದ್ದು ಉಡುಪಿ ಜಿಲ್ಲೆ ಮಾತ್ರವಲ್ಲ ರಾಜ್ಯದ ಸಾವಿರಾರು ಗ್ಯಾರೇಜು ಸಹಿತ ವೆಲ್ಡಿಂಗ್‌ ಶಾಪ್‌ಗಳಿಗೆ ಆಕ್ಸಿಜನ್‌ ಕೊರತೆ ಶಾಪವಾಗಿ ಪರಿಣಮಿಸಿದೆ.


from India & World News in Kannada | VK Polls https://ift.tt/36pqSU4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...