ನಂಜನಗೂಡಿನಲ್ಲಿ ಗಂಡ - ಹೆಂಡತಿ ಜಗಳಕ್ಕೆ ಬಲಿಯಾಯ್ತು ಮಾವನ ಜೀವ..!

(ಮೈಸೂರು): ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬ ಮಾತಿದೆ. ಆದ್ರೆ, ಇಲ್ಲಿ ಇಬ್ಬರ ಜಗಳಕ್ಕೆ ಮೂರನೆಯವರು ಬಲಿಯಾಗಿದ್ದಾರೆ..! ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ.. ಗಂಡ ಜಗಳ ವಿಕೋಪಕ್ಕೆ ತಿರುಗಿತ್ತು. ಹೆಂಡತಿ ವಿಷ ಸೇವಿಸಿದಳು. ಈ ವೇಳೆ ಆಕೆಯ ತವರು ಮನೆಯವರು ವಾಗ್ವಾದ ನಡೆಸಿದರು. ಎರಡು ಕುಟುಂಬಗಳ ನಡುವೆ ಮಾರಾಮಾರಿಯೇ ನಡೆಯಿತು. ಈ ವೇಳೆ, ಪತಿಯ ತಂದೆ ಸಾವಿಗೀಡಾಗಿದ್ದಾರೆ. ಪಟ್ಟಣದ ಹೌಸಿಂಗ್ ಬೋಡ್ ಕಾಲೋನಿಯ ಕೃಷ್ಣ ಶೆಟ್ಟಿ (73) ಮೃತಪಟ್ಟ ಹಿರಿಯರು. ಮೃತರ ಪುತ್ರ ರಂಗನಾಥ್ ಹಾಗೂ ಈತನ ಪತ್ನಿ ಸಂಧ್ಯಾ ನಡುವೆ ವೈಮನಸ್ಸು ಉಂಟಾಗಿತ್ತು. ಕಳೆದ ಭಾನುವಾರ ಸಂಧ್ಯಾ ವಿಷ ಸೇವಿಸಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಯ ತಿಳಿದು ಸಂಧ್ಯಾ ಅವರ ತವರು ಮನೆಯವರು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆ ಬಳಿಯಿದ್ದ ಸಂಧ್ಯಾ ಅವರ ಪತಿ ರಂಗನಾಥ್, ಮಾವ ಕೃಷ್ಣಶೆಟ್ಟಿ, ಅತ್ತೆ ವಿಜಯಲಕ್ಷ್ಮಿ ಅವರೊಂದಿಗೆ ಸಂಧ್ಯಾ ತವರು ಮನೆಯವರು ಜಗಳಕ್ಕೆ ಇಳಿದರು. ನಿಮ್ಮ ಕಿರುಕುಳದಿಂದ ನಮ್ಮ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆರೋಪಿಸಿ, ಗಲಾಟೆ ಮಾಡಿದರು. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಕೃಷ್ಣಶೆಟ್ಟಿ ಗಾಯಗೊಂಡು ನಿತ್ರಾಣವಾದರು. ತಕ್ಷಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದ್ರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು. ಇದೀಗ ಮೃತ ಕೃಷ್ಣಶೆಟ್ಟಿ ಅವರ ಪತ್ನಿ ವಿಜಯಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಪತಿಯ ಸಾವಿಗೆ ಸೊಸೆ ಸಂಧ್ಯಾಳ ಕುಟುಂಬದವರಾದ ಸುಬ್ರಹ್ಮಣ್ಯ, ಕನ್ಯಾಕುಮಾರಿ, ರಂಗನಾಥ್, ಹರೀಶ್ ಹಾಗೂ ಪ್ರಸಾದ್ ಕಾರಣರಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ. ವಿಷ ಸೇವಿಸಿದ್ದ ಸಂಧ್ಯಾ ಚೇತರಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ನಂಜನಗೂಡು ಠಾಣೆಯಲ್ಲಿ ದೂರು ದಾಖಲಾಗಿದೆ.


from India & World News in Kannada | VK Polls https://ift.tt/3l0xtbw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...