ಬೆಂಗಳೂರು: ಶುಕ್ರವಾರ ದೇಶದ ಮಹಾನಗರಗಳಲ್ಲಿ ಮತ್ತೆ ಇಳಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಡೀಸೆಲ್ ದರದಲ್ಲಿ ಕೊಂಚ ಕೊಂಚವಾಗೆ ಇಳಿಕೆ ಕಾಣುತ್ತಿದೆ. ಇದು ಜನ ಸಾಮಾನ್ಯನಿಗೆ ಭಾರೀ ಖುಷಿ ನೀಡಿದೆ. ಯಾಕೆಂದರೆ ಡೀಸೆಲ್ ದರ ಇಳಿಕೆಯಿಂದ ಅಗತ್ಯ ವಸ್ತುಗಳ ಬೆಲೆಯು ಇಳಿಯುತ್ತದೆ ಎನ್ನುವುದು ಮಾರುಕಟ್ಟೆ ಪರಿಣಿತರ ಅಭಿಪ್ರಾಯ. ಸರಕು ಸಾಗಾಟದ ವೆಚ್ಚ ಕಡಿಮೆಯಾದಂತೆ ವಸ್ತುಗಳ ಬೆಲೆಯು ಇಳಿಯುತ್ತದೆ. ಇನ್ನು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಹಾಗಾದರೆ ಅಕ್ಟೋಬರ್ 2ರ ಶುಕ್ರವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ. ಸಿಲಿಕಾನ್ ಸಿಟಿ ಪೆಟ್ರೋಲ್: 83.69 ರೂ. ಡೀಸೆಲ್: 74.63 ರೂ. (₹0.19 ಪೈಸೆ ಇಳಿಕೆ ) ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್: 81.06 ರೂ. ಡೀಸೆಲ್: 70.46 ರೂ. (₹0.19 ಪೈಸೆ ಇಳಿಕೆ ) ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್: 87.74 ರೂ. ಡೀಸೆಲ್: 76.86 ರೂ. (₹0.19 ಪೈಸೆ ಇಳಿಕೆ ) ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್:84.14 ರೂ. ಡೀಸೆಲ್: 75.95 ರೂ. (₹0.15 ಪೈಸೆ ಇಳಿಕೆ )
from India & World News in Kannada | VK Polls https://ift.tt/3cPzG6D