ಮೈಸೂರು: ಮೈಸೂರು ಅಂದಾಕ್ಷಣ ಪ್ರತಿಯೊಬ್ಬರ ಮನಸಲ್ಲಿ ಒಂದೋ ಅರಮನೆ ಕಣ್ಣೆದುರು ಬರುತ್ತೆ ಅಥವಾ ದಸರಾ ಬರುತ್ತೆ.ಅನೇಕರಿಗೆ ಅರಮನೆ, ದಸರಾ ಇವೆರಡರ ವೈಭವ ಕಣ್ಮುಂದೆ ಹಾದು ಹೋಗುತ್ತೆ. ಪ್ರತಿ ವರ್ಷದಂತೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕ್ಷಣ ಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಐತಿಹಾಸಿಕ ಜಂಬೂಸವಾರಿ ನಡೆಯಲಿದ್ದು ಈಗಾಗಲೇ ಭರದ ಸಿದ್ಧತೆ ನಡೆದಿದೆ. ಆದರೆ ಪ್ರತಿ ವರ್ಷದ ಜಂಬೂ ಸವಾರಿಗಿಂತ ಈ ಬಾರಿ ಸ್ವಲ್ಪ ಭಿನ್ನವಾಗಿರಲಿದ್ದು, ಇಡೀ ಜಗತ್ತನ್ನೇ ವಕ್ಕರಿಸಿರುವ ಮಹಾಮಾರಿಯಿಂದ ಜಂಬೂ ಸವಾರಿಯ ಪ್ಲಾನ್‌ನಲ್ಲಿ ಬದಲಾವಣೆ ತರಲಾಗಿದೆ. ಹೀಗಾಗಿ ಈ ಬಾರಿ ಸರಳ ದಸರೆಯ ಕಾರಣ ವೈಭವದ ದಸರೆಯು ಹಿಂದಿನ ವೈಭವವನ್ನು ಕಳೆದುಕೊಂಡಿದೆ. ವಿಶೇಷ ಅಂದರೆ ಕೇವಲ ಅರಮನೆಯ ಆವರಣದಲ್ಲಿ ಮಾತ್ರ ಈ ಬಾರಿ ಮೆರವಣಿಗೆ ಸಾಗಲಿದೆ. ದಶಕಗಳಿಂದ ಆರಂಭವಾದ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಅಂಬಾವಿಲಾಸ ಅರಮನೆಯೊಳಗೆ ಆರಂಭವಾಗುತ್ತಿದ್ದಂತೆ ಸುಮಾರು 5 ಕಿಲೋ ಮೀಟರ್‌ವರೆಗೂ ಸಾಗಿ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಕೊನೆಯಾಗುತ್ತಿತ್ತು. ಆದರೆ ಈ ಬಾರಿ ಅದು ಕೇವಲ 450 ಮೀಟರ್‌ಗೆ ಮಾತ್ರ ಸೀಮಿತವಾಗಿದೆ. ಮಧ್ಯಾಹ್ನ 2:59 ರಿಂದ 3:20 ರೊಳಗಿನ ಶುಭ ಮಕರ ಲಗ್ನದಲ್ಲಿ ಜಂಬೂ ಸವಾರಿ ನಡೆಯಲಿದೆ. ಇನ್ನು ಪ್ರತಿ ಬಾರಿ ದಸರೆಯ ಪ್ರಮುಖ ಆಕರ್ಷಣೆಯಾಗಿ ಜನರ ಕಣ್ಮನ ಸೆಳೆಯುತ್ತಿದ್ದದ್ದು, ಗಜಪಡೆಯ ಜಂಬೂಸವಾರಿ. ಪ್ರತಿ ವರ್ಷ 12 ರಿಂದ 13 ಆನೆಗಳು ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಿರುತ್ತಿತ್ತು. ಆದರೆ ಈ ಬಾರಿ ಕೇವಲ 5 ಆನೆಗಳು ಮಾತ್ರ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿವೆ. ಸುಮಾರು 5 ಸಾವಿರ ಜನರು ಅರಮನೆಯೊಳಗೆ ಭಾಗಿಯಾಗಲಿರುವ ಅರಮನೆಯಲ್ಲಿ ಜಂಬೂಸವಾರಿ ವೀಕ್ಷಿಸಲು ಈ ಬಾರಿ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಕೇವಲ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ಈ ಬಾರಿ ಕೇವಲ 6 ಕಲಾ ತಂಡಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅಷ್ಟೇ ಅಲ್ಲ ಈ ಬಾರಿ ಕೇವಲ ಕೊರೊನಾ ಜಾಗೃತಿ ಸೇರಿದಂತೆ 2 ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಇರಲಿದೆ. ಇದೆಲ್ಲದರ ನಡುವೆ ಜಂಬೂಸವಾರಿ ಪ್ರಮುಖ ಆಕರ್ಷಣೆ ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆ ಬದಲಾಗಿದೆ. ಇದೇ ಮೊದಲ ಬಾರಿಗೆ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಇಷ್ಟು ವರ್ಷ ಅಂಬಾರಿ ನೇತೃತ್ವವು ಅಭಿಮನ್ಯು ಹೆಗಲೇರಿದೆ. ಇನ್ನು ದಸರೆಯಲ್ಲಿ ನಡೆಯುತ್ತಿದ್ದ ಪಥಸಂಚಲನ, ವಿವಿಧ ಕಸರತ್ತು ಪ್ರದರ್ಶನ. ಮೇಯರ್ ಕುದುರೆ ಸವಾರಿ ಸೇರಿದಂತೆ ಹಲವು ಆಚರಣೆಗೆ ಬ್ರೇಕ್ ಬಿದ್ದಿದೆ. ಈ ಎಲ್ಲಾ ಕಾರಣದಿಂದ ದಸರೆಯ ಆಚರಣೆ ಒಂದರ್ಥದಲ್ಲಿ ಯಾವುದೇ ವೈಭವ ಕಾಣುತ್ತಿಲ್ಲ ಎನ್ನಬಹುದು.
from India & World News in Kannada | VK Polls https://ift.tt/2HxFJRS