‘ನಾವು ಕ್ಲೀನ್‌ ಆಗಿದ್ದೇವೆ’ ; ಸುಶಾಂತ್‌ ಸಿಂಗ್‌ ಕೇಸ್‌ನಲ್ಲಿ ಮಗನನ್ನು ಸಮರ್ಥಿಸಿಕೊಂಡ ಉದ್ಧವ್ ಠಾಕ್ರೆ

ಮುಂಬೈ: ನಟ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾ‍ಷ್ಟ್ರ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಭಾನುವಾರ ಮಾತನಾಡಿರುವ ಠಾಕ್ರೆ, ಕಂಗನಾ ರಣಾವತ್‌ನಂತಹವರು ಈ ಪ್ರಕರಣದಲ್ಲಿ ಮುಂಬೈ, ಮುಂಬೈ ಪೊಲೀಸ್ ಮತ್ತು ನನ್ನ ಮಗನ ಕುರಿತು ಅಪಪ್ರಚಾರ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿವಸೇನೆ ಆಯೋಜಿಸಿದ್ದ ದಸರಾ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧವೂ ಕಿಡಿಕಾರಿದ್ದಾರೆ. ’ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೀವು ಈಗ ಬಿಹಾರದ ಮಗ ಎಂದು ಹೇಳುತ್ತಿದ್ದೀರಿ. ಅದು ಆಗಿರಲೂ ಬಹುದು. ಆದರೆ ಆ ಕಾರಣದಿಂದ ನೀವು ಮಹಾರಾಷ್ಟ್ರದ ಪುತ್ರರನ್ನು ಕೆಟ್ಟದಾಗಿ ಚಿತ್ರಿಸಿದ್ದೀರಿ.ನನ್ನ ಮಗ ಆದಿತ್ಯ ಠಾಕ್ರೆಯನ್ನು ಕೂಡ ನಿಂದಿಸಿದ್ದೀರಿ. ಆತನನ್ನು ಈ ಪ್ರಕರಣದಲ್ಲಿ ಎಳೆದು ತರುವ ಯತ್ನ ಮಾಡ್ತಿದ್ದೀರಿ. ನೀವು ಏನೆಲ್ಲಾ ಹೇಳ್ತಿರೋ, ಅದೆಲ್ಲ ನಿಮ್ಮಲ್ಲೇ ಇರಲಿ. ಯಾಕಂದ್ರೆ ನಾವು ಕ್ಲೀನ್‌ ಆಗಿದ್ದೇವೆ ಎಂದು ಹರಿಹಾಯ್ದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸುಶಾಂತ್ ಸಿಂಗ್ ಮತ್ತು ಆತನ ಗೆಳತಿ ರಿಯಾ ಚಕ್ರವರ್ತಿ ವಿಚಾರವಾಗಿ ಆದಿತ್ಯ ಠಾಕ್ರೆಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಿರುವವರಿಗೆ ಇದೇ ಮೊದಲ ಬಾರಿ ಸಿಎಂ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಹೆಸರು ಪ್ರಸ್ತಾಪಿಸಿದೇ ಆಕೆಯ ವಿರುದ್ಧ ಕಿಡಿಕಾರಿರುವ ಉದ್ಧವ್ ಠಾಕ್ರೆ, ಕೆಲವರು ನ್ಯಾಯಕ್ಕಾಗಿ ಅಳುತ್ತಿರುವವರು ಮುಂಬೈ ಪೊಲೀಸರನ್ನು ನಿಷ್ಪ್ರಯೋಜಕರು ಎಂದು ದೂರಿದರು. ಅಲ್ಲದೇ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಥರ ಕಾಣ್ತಿದೆ.ಇಲ್ಲಿ ಎಲ್ಲೆಂದರಲ್ಲಿ ಡ್ರಗ್ಸ್‌ ಅಡಿಕ್ಟ್‌ಗಳು ಕಾಣ ಸಿಗ್ತಾರೆ ಎಂದು ಹೀಯಾಳಿಸಿದ್ರು. ಆದರೆ ಅವರಿಗೆ ಗೊತ್ತಿಲ್ಲ ಗಾಂಜಾ ನಿಮ್ಮ ರಾಜ್ಯದಲ್ಲಿ ಇರೋದು. ನಮ್ಮ ಮನೆಯಲ್ಲಿ ನಾವು ತುಳಸಿಗಿಡ ಬೆಳೆಯುತ್ತೇವೆ ಎಂದು ಕಂಗನಾ ವಿರುದ್ಧ ಹೆಸರು ಹೇಳದೆ ಕಿಡಿಕಾರಿದರು. ಇನ್ನು ಮುಂಬೈ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿರುವ ಉದ್ಧವ್ ಠಾಕ್ರೆ, ಅಜ್ಮಲ್ ಕಸಬ್‌ನಂತ ಉಗ್ರನೊಬ್ಬನನ್ನು ಜೀವಂತವಾಗಿ ಸೆರೆಹಿಡಿದ ಏಕೈಕ ಪೊಲೀಸರು ನಮ್ಮ ಮುಂಬೈ ಪೊಲೀಸರು. ಹೀಗಾಗಿ ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವಿಚಾರವಾಗಿ ಮೋದಿ ವಿರುದ್ಧವೂ ವ್ಯಂಗ್ಯವಾಡಿರುವ ಠಾಕ್ರೆ, ಕಂಗಾನಾಗೆ ಮುಂಬೈ ಪಿಓಕೆ ಥರಾ ಕಾಣುವುದಾದರೆ ಇದು ಪ್ರಧಾನಿ ಮೋದಿಗೆ ಮಾಡಿದ ಅವಮಾನವೂ ಆಗಿದೆ. ಪಿಓಕೆಯನ್ನು ಮತ್ತೆ ವಶಪಡಿಸಿಕೊಳ್ಳುವುದಾಗಿ ಮೋದಿ ಹೇಳಿ ಆರು ವರ್ಷಗಳಾಗಿದೆ, ಆದರೆ ಇನ್ನೂ ಆಗಿಲ್ಲ. ಹೀಗಾಗಿ ಇದು ಮೋದಿ ವೈಫಲ್ಯವೂ ಹೌದು ಎಂದು ಟೀಕಿಸಿದ್ದಾರೆ.


from India & World News in Kannada | VK Polls https://ift.tt/3dUAibV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...