ಕೊರೊನಾದಿಂದಾಗಿ ಕೆಲವರಿಗೆ ಕೋಮು ದ್ವೇಷ ಸಾಧಿಸಲಾಗಲಿಲ್ಲ: ಮೋಹನ್ ಭಾಗವತ್!

ನಾಗ್ಪುರ್: ದೇಶದಲ್ಲಿ ಹಬ್ಬಿದ ಮಾರಕ ಹಾವಳಿಯ ಪರಿಣಾಮವಾಗಿ, ಕೆಲವರಿಗೆ ತಮ್ಮ ಕೋಮು ದ್ವೇಷವನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖ್ಯಸ್ಥ ಹೇಳಿದ್ದಾರೆ. ನಾಗ್ಪುರ್‌ದ ಕೇಂದ್ರ ಕಚೇರಿಯಲ್ಲಿ ವಿಜಯದಶಮಿ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಾರ್ಷಿಕ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ವಿರೋಧಿ ಆಂದೋಲನದ ನೆರಳಲ್ಲಿ ದೇಶದಾದ್ಯಂತ ಕೋಮು ದಳ್ಳುರಿ ಹಬ್ಬಿಸಲು ಹುನ್ನಾರ ನಡೆಸಿದವರಿಗೆ ಕೊರೊನಾ ಆಘಾತ ನೀಡಿದೆ ಎಂದು ಹೇಳಿದರು. ಆರ್ಟಿಕಲ್ 370, ರದ್ದತಿ, ರಾಮಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್ ರತೀರ್ಪು ಹಾಗೂ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ಜನತೆ ತೋರಿದ ಸಂಯಮ ಹಾಗೂ ಸಂವೇದನೆ ನಿಜಕ್ಕೂ ಅದ್ಭುತವಾದದು ಎಂದು ಮೋಹನ್ ಭಾಗವತ್ ನುಡಿದರು. ಸಿಎಎ ಯಾವುದೇ ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿಯಲ್ಲ. ಬದಲಿಗೆ ನೆರೆಯ ದೇಶಗಳಲ್ಲಿ ಸಂಕಷ್ಟಕ್ಕೀಡಾಗಿರುವ ನಮ್ಮ ಸಹೋದರರಿಗೆ ನೆರವು ನೀಡಲು ಜಾರಿಗೆ ತಂದ ಕಾನೂನು ಎಂದು ಮೋಹನ್ ಬಾಗವತ್ ಹೇಳಿದರು. ಸಿಎಎ ಹೆಸರಿನಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಈ ಕೀಳು ರಾಜಕೀಯವನ್ನು ದೇಶದ ಜನತೆ ಸ್ಪಷ್ಟವಾಗಿ ತಿರಸ್ಕರಿಸಿರುವುದು ಸಂತಸದ ಸಂಗತಿ ಎಂದು ಭಾಗವತ್ ನುಡಿದರು. ಅಲ್ಲದೇ ನಮ್ಮ ಮುಸ್ಲಿಂ ಸಹೋದರರು ಸುಳ್ಳು ರಾಜಕೀಯ ದಾಳಕ್ಕೆ ಬಲಿಯಾಗಬಾರದು ಎಂದು ಭಾಗವತ್ ಮನವಿ ಮಾಡಿದರು. ಕೊರೊನಾ ವೈರಸ್ ಹಾವಳಿಯಿಂದ ದೇಶ ನಲುಗಿದ್ದು ಹೌದಾದರೂ, ಕೇಂದ್ರ ಸರ್ಕಾರದ ಶಿಸ್ತುಬದ್ಧ ನೀತಿ ಮತ್ತು ಜನತೆಯ ಸಹಕಾರದಿಂದ ವೈರಾಣು ಅಬ್ಬರವನ್ನು ತಗ್ಗಿಸಲು ಸಾಧ್ಯವಾಗಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಅಭಿಪ್ರಾಯಪಟ್ಟರು. ಇದೇ ವೇಳೆ ಲಡಾಖ್ ಗಡಿಯಲ್ಲಿ ಚೀನಾದ ಆಕ್ರಮಣವನ್ನು ಪ್ರಸ್ತಾಪಿಸಿದ ಮೋಹನ್ ಭಾಗವತ್, ನೆಲದಾಹಿ ಚೀನಾದ ಹುನ್ನಾರಗಳಿಗೆ ನಮ್ಮ ಸೇನೆ ದಿಟ್ಟ ಉತ್ತರ ನೀಡಿದೆ ಎಂದು ಹೇಳಿದರು. ಭಾರತ ಮಾತ್ರವಲ್ಲದೇ ತೈವಾನ್, ವಿಯೆಟ್ನಾಂ, ಜಪಾನ್ ಹಾಗೂ ಅಮೆರಿಕದೊಂದಿಗೂ ದ್ವೇಷ ಸಾಧಿಸುತ್ತಿರುವ ಚೀನಾ ವಿರುದ್ಧ ಜಾಗತಿಕ ಕ್ರಮ ಕೈಗೊಳ್ಳುವ ಸಮಯವಿದು ಎಂದು ಭಾಗವತ್ ಅಭಿಪ್ರಾಯಪಟ್ಟರು.


from India & World News in Kannada | VK Polls https://ift.tt/35qY9fq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...