ಹೊಸದಿಲ್ಲಿ: ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲರ ಒಗ್ಗಟ್ಟನ್ನು ಕೋರಿರುವ ಪ್ರಧಾನ ಕಾರ್ಯದರ್ಶಿ , ವೈರಸ್ ವಿರುದ್ಧ 'ಜನರ ಲಸಿಕೆ' ಅತ್ಯಂತ ಅಗತ್ಯವಿದೆ ಎಂದು ಹೇಳಿದ್ದಾರೆ. ಆಫ್ರಿಕನ್, ಕೆರೆಬಿಯನ್, ಫೆಸಿಫಿಕ್ ರಾಜ್ಯಗಳ ಸಂಘಟನೆಯ (ಒಎಸಿಪಿಎಸ್) ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಂಟೋನಿಯೊ ಗುಟೆರಸ್, ''ಸದ್ಯಕ್ಕೆ ರೋಗಕ್ಕೆ ಲಸಿಕೆಯಿಲ್ಲ. ನಾವು ಒಗಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಲಸಿಕೆಯನ್ನು ಅಭಿವೃದ್ಧಪಡಿಸಬಹುದಾಗಿದೆ'' ಎಂದು ಹೇಳಿದರು. ''ನಾವು ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ಪಾಠವೊಂದಿದೆ. ಲಸಿಕೆ ಮಾತ್ರ ಸಾಕಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ಪಡೆಯುತ್ತಾನೆ ಎಂಬುದನ್ನು ಖಚಿತಪಡಿಸಲು ಜಾಗತಿಕ ಒಗ್ಗಟ್ಟಿನ ಅಗತ್ಯವಿದೆ'' ಎಂದರು. ''ಜಗತ್ತಿನಾದ್ಯಂತ ಕೊರೊನಾ ವೈರಸ್ ಅಗಾಧ ಮಾನವ ಸಂಕಷ್ಟಗಳು ಹಾಗೂ ಆರ್ಥಿಕ ತೊಂದರೆಯನ್ನುಂಟು ಮಾಡಿದೆ. ಈ ಸಾಂಕ್ರಾಮಿಕ ರೋಗವನ್ನು ಎದುರಿಸಬೇಕಾದರೆ, ಸುಸ್ಥಿರ ಭವಿಷ್ಯವನ್ನು ನಿರ್ಮಿಸಬೇಕಾದರೆ ಐಕ್ಯತೆ ಹಾಗೂ ಒಗ್ಗಟ್ಟಿನ ಅಗತ್ಯವಿದೆ'' ಎಂದು ಹೇಳಿದರು. ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕವಾಗಿ ಅತಿ ಕೆಟ್ಟದಾಗಿ ಬಾಧಿಸಿರುವ ಕೈಗಳಿಗೆ ಹಣವನ್ನು ನೀಡಲು ಆದತ್ಯೆಯನ್ನು ನೀಡಬೇಕು. ಹಾಗೆಯೇ ಹಿಂದುಳಿದವರ ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸಬೇಕು ಎಂದು ವಿಡಿಯೋ ಭಾಷಣದಲ್ಲಿ ತಿಳಿಸಿದರು. ಜಗತ್ತು 1930ರ ಬಳಿಕ ಅತಿ ದೊಡ್ಡ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದೇವೆ. ಜಿ20 ಗುಂಪಿನ ಸಾಲದ ಉಪಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ ಇದು ಸಾಕಾಗುವುದಿಲ್ಲ ಎಂದವರು ಹೇಳಿದರು. ಸಣ್ಣ ದ್ವೀಪ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಅತಿ ಹೆಚ್ಚಿನ ಸವಾಲನ್ನು ಎದುರಿಸುತ್ತಿದೆ ಎಂದವರು ಸೇರಿಸಿದರು.
from India & World News in Kannada | VK Polls https://ift.tt/2MuXNeP