ಅಮೆರಿಕದಲ್ಲಿ ಜನಾಂಗೀಯ ಪ್ರತಿಭಟನೆ; ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ

ವಾಷಿಂಗ್ಟನ್: ಬಿಳಿಯ ಪೊಲೀಸ್ ದೌರ್ಜನ್ಯದಿಂದಾಗಿ ಕಪ್ಪು ವರ್ಣಿಯ ಸಾವಿಗೀಡಾಗಿರುವ ಬೆನ್ನಲ್ಲೇ ಅಮೆರಿಕದಲ್ಲಿ ಉಂಟಾಗಿರುವ ಎಲ್ಲೆಡೆ ಹಬ್ಬಿದ್ದು, ಭಾರಿ ಹಿಂಸಾಚಾರ ನಡೆದಿದೆ. ಈ ಮಧ್ಯೆ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಪ್ರತಿಮೆಯನ್ನು ಪ್ರತಿಭಟನಾಕಾರರು ಹಾನಿಗೊಳಿಸಿ ಅಪವಿತ್ರಗೊಳಿಸಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಶಾಂತಿದೂತ ಭಾರತೀಯ ಪಿತಾಮಹ ಮಹಾತ್ಮ ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ದೌರ್ಜನ್ಯನಿಂದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ ಬೆನ್ನಲ್ಲೇ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಕರ್ಫ್ಯೂ ಮಧ್ಯೆ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಹಲೆವೆಡೆ ವ್ಯಾಪಕ ಹಿಂಸಾಚರಗಳು ಭುಗಿಲೆದ್ದಿದೆ. ಇದರ ಕಿಚ್ಚು ಪ್ರಪಂಚದ ಎಲ್ಲೆಡೆ ಹರಡಿದ್ದು, ಅನೇಕ ಕಡೆಗಳಲ್ಲಿ ಪ್ರತಿಭಟನೆಯು ಕಾವೇರಿದೆ. ನಿರಾಯುಧ ಕಪ್ಪು ವರ್ಣೀಯ ವ್ಯಕ್ತಿಯನ್ನು ಮಿನ್ನಿಯಾಪೊಲೀಸ್‌ನ ಬಿಳಿ ಪೊಲೀಸ್ ಅಧಿಕಾರಿಯೊಬ್ಬರು ಒಂಬತ್ತು ನಿಮಿಷಗಿಂತಲೂ ಹೆಚ್ಚು ಕಾಲ ಮೊಣಕಾಲು ಕುತ್ತಿಗೆಗೆ ಹಿಸುಕಿದ ಕಾರಣ ಸಾವು ಸಂಭವಿಸಿತ್ತು. ಅಮೆರಿಕ ಹೊರತಾಗಿ ಫ್ರಾನ್ಸ್‌ನ ಪ್ಯಾರಿಸ್, ಆಸ್ಟ್ರೇಲಿಯಾದ ಸಿಡ್ನಿ, ಅರ್ಜೇಂಟೀನಾ, ಬ್ರೆಜಿಲ್, ಕೆನೆಡಾ ಹಾಗೂ ನ್ಯೂಜಿಲೆಂಡ್‌ನಲ್ಲೂ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಅಮೆರಿಕದಲ್ಲಿ 40 ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಅಲ್ಲದೆ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಶ್ವೇತ ಭವನದಲ್ಲಿ ಪ್ರತಿಭಟನೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಕರ್‌ನಲ್ಲಿ ಅಡಗಿ ಕುಳಿತಿರುವ ಘಟನೆಯು ನಡೆದಿತ್ತು. ಈ ಮಧ್ಯೆ ಹಿಂಸಾಚಾರವನ್ನು ಮಟ್ಟ ಹಾಕಲು ಸೇನೆಯನ್ನು ಬಳಕೆ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ರವಾನಿಸಿದ್ದರು.


from India & World News in Kannada | VK Polls https://ift.tt/3cwVr9u

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...