ಬಾಡಿಗೆದಾರರನ್ನು ಓಡಿಸಲು ಕಾಡು ಪ್ರಾಣಿಗಳ ಮಾಂಸವಿಟ್ಟು ಜೈಲು ಸೇರಿದ ಮನೆ ಮಾಲೀಕರು!

- ಆರ್‌.ಶ್ರೀಧರ್‌/ರವಿಕಿರಣ್‌.ವಿ. ಬಾಡಿಗೆದಾರನನ್ನು ಮನೆಯಿಂದ ಬಿಡಿಸಲು ವನ್ಯಜೀವಿಗಳ ಮಾಂಸ ಬಚ್ಚಿಟ್ಟು, ಆತನನ್ನು ಜೈಲಿಗೆ ತಳ್ಳುವ ಕುತಂತ್ರವನ್ನು ಹೆಣೆದು ಕೊನೆಗೆ ಸಿಸಿಟಿವಿಯಲ್ಲಿ ದೃಶ್ಯದ ಮೂಲಕ ಸಿಕ್ಕಿಬಿದ್ದು ಜೈಲು ಸೇರಿದ ಘಟನೆ ರಾಮನಗರದಲ್ಲಿ ವರದಿಯಾಗಿದೆ. ತಂತ್ರದಲ್ಲಿ ಭಾಗಿಯಾದ ಮಾಲೀಕರ ಅಳಿಯ ತಲೆಮರೆಸಿಕೊಂಡಿದ್ದಾರೆ. ಏನಿದು ಪ್ರಕರಣ?: ರಾಮನಗರದ ನ್ಯೂ ಎಕ್‌ಸ್ಟೆನ್ಶನ್‌ ಏರಿಯಾದಲ್ಲಿ ಸಿರಾಜ್‌ ಎಂಬವರ ಮನೆಯಿದೆ. ಅವರು ವಿದೇಶದಲ್ಲಿದ್ದು, ಮನೆಯನ್ನು ಧಾರವಾಡ ಮತ್ತು ಶಿವಮೊಗ್ಗ ಮೂಲದ ಇಬ್ಬರು ಯುವಕರಿಗೆ ಬಾಡಿಗೆಗೆ ನೀಡಿದ್ದರು. ಇದರ ಹೊಣೆಯನ್ನು ರಾಮನಗರದಲ್ಲೇ ಇರುವ ಸಹೋದರ ಇಕ್ಬಾಲ್‌ ನೋಡಿಕೊಳ್ಳುತ್ತಿದ್ದಾರೆ. ಬಾಡಿಗೆದಾರರನ್ನು ಬಿಡಿಸಿದರೆ ಆ ಮನೆಯಲ್ಲಿ ತಾವೇ ಪುಕ್ಕಟೆಯಾಗಿ ತಂಗಬಹುದು ಎಂಬ ಯೋಜನೆ ರೂಪಿಸಿದ ಇಕ್ಬಾಲ್‌ ಅಳಿಯ ಪರ್ವಿಷ್‌ ಜತೆ ಸೇರಿ ಸಂಚೊಂದನ್ನು ರೂಪಿಸಿದರು. ಬಾಡಿಗೆದಾರರಿಗೆ ಗೊತ್ತಾಗದಂತೆ ಅಣ್ಣನ ಮನೆಯಲ್ಲಿ ಕದ್ದು ಮುಚ್ಚಿ ವನ್ಯಜೀವಿಗಳ ಮಾಂಸವನ್ನು ತಂದಿಟ್ಟ ಇಕ್ಬಾಲ್‌ ಹಾಗೂ ಪರ್ವಿಷ್‌, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾರಂಭಿಸಿದರು. ಕಳೆದ 15 ದಿನಗಳಿಂದಲೂ ಪದೇ ಪದೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲು ಆರಂಭಿಸಿದರು. ಕೊನೆಗೆ ಶುಕ್ರವಾರ ಸಂಜೆ 4.45ರ ಹೊತ್ತಿಗೆ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳಿಗೆ, ಮನೆಯಲ್ಲಿ ನಾಲ್ಕು ಗೌಜಲಕ್ಕಿ, ಒಂದು ನವಿಲು, ಎರಡು ಕಾಡುಕೋಳಿ, ಮೂರುವರೆ ಕೆಜೆಯಷ್ಟು ಜಿಂಕೆ ಮಾಂಸ ಸೇರಿ ಹತ್ತಕ್ಕೂ ಹೆಚ್ಚು ಕಾಡು ಪ್ರಾಣಿಗಳ ಮಾಂಸ ಪತ್ತೆಯಾಗಿದೆ. ಫ್ಲ್ಯಾನ್‌ ತಲೆಕೆಳಗಾಗಿಸಿದ ಸಿಸಿಟಿವಿ: ಪೊಲೀಸರು ದಾಳಿ ಬಳಿಕ ಬಾಡಿಗೆದಾರರ ಬಗ್ಗೆ ಅಕ್ಕಪಕ್ಕದವರ ಬಳಿ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು, ಇಷ್ಟು ಸಾಲದು ಎಂಬಂತೆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದರು. ಇದರಲ್ಲಿ ದೂರು ನೀಡಿದವರೇ ಬಾಡಿಗೆದಾರರ ಮನೆಯಲ್ಲಿ ಮಾಂಸ ತಂದಿಟ್ಟರುವುದು ಕಂಡು ಬಂದಿತ್ತು. ಆರೋಪಿ ಇಕ್ಬಾಲ್‌ನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಅಳಿಯ ಪರ್ವೀಷ್‌ ನಾಪತ್ತೆಯಾಗಿದ್ದಾನೆ. ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಲು ದೂರುದಾರರೇ ಮನೆಯಲ್ಲಿ ಕಾಡು ಪ್ರಾಣಿಗಳ ಮಾಂಸ ತಂದಿಟ್ಟಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. - ದಾಳೇಶ್‌, ವಲಯ ಅರಣ್ಯಾಧಿಕಾರಿ, ರಾಮನಗರ.


from India & World News in Kannada | VK Polls https://ift.tt/2GQpr2V

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...