ನಾಲ್ಕನೇ ಟಿ20ಯಲ್ಲಿ ಎಸಗಿದ ಪ್ರಮಾದಕ್ಕೆ ದಂಡ ತೆತ್ತ ಟೀಮ್‌ ಇಂಡಿಯಾ!

ವೆಲ್ಲಿಂಗ್ಟನ್‌: ಆತಿಥೇಯ ನ್ಯೂಜಿಲೆಂಡ್‌ ಎದುರು ಟೀಮ್‌ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ಸೂಪರ್‌ ಓವರ್‌ ಗೆಲುವೇನೋ ದಾಖಲಿಸಿತು, ಆದರೆ ಅದೇ ಪಂದ್ಯದಲ್ಲಿ ಎಸಗಿದ ಪ್ರಮಾದಕ್ಕೆ ಭಾರಿ ದಂಡ ತೆತ್ತಿದೆ. ಇಲ್ಲಿನ ವೆಸ್ಟ್‌ಪ್ಯಾಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐದು ಪಂದ್ಯಗಳ ಸರಣಿಯ ನಾಲ್ಕನೇ ಹಣಾಹಣಿಯಲ್ಲಿ ಭಾರತ ತಂಡದ 20 ಓವರ್‌ಗಳನ್ನು ಎಸೆಯಲು ನೀಡಲಾಗಿದ್ದ ಸಮಯದ ಮುಕ್ತಾಯಕ್ಕೆ ಇನ್ನು 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಈ ಕಾರಣಕ್ಕೆ ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ಪಂದ್ಯದ ಸಂಭಾವನೆಯಲ್ಲಿನ ಶೇ.40 ರಷ್ಟು ದಂಡವಾಗಿ ತೆರುವಂತೆ ಸೂಚಿಸಿದ್ದಾರೆ. "ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್‌ 2.22 ನಿಯಮದ ಅನುಗುಣವಾಗಿ ನಿಧಾನಗತಿಯಲ್ಲಿ ಓವರ್‌ಗಳನ್ನು ಎಸೆದ ಕಾರಣಕ್ಕೆ ಕನಿಷ್ಠ ಕ್ರಮವಾಗಿ ತಂಡದ ಎಲ್ಲಾ ಆಟಗಾರರಿಗೂ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಂಪೂರ್ಣ 20 ಓವರ್‌ಗಳನ್ನು ಎಸೆಯುವಲ್ಲಿ ಟೀಮ್‌ ಇಂಡಿಯಾ ವಿಫಲವಾಗಿದೆ," ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆನ್‌ಫೀಲ್‌ ಅಂಪೈರ್‌ಗಳಾದ ಕ್ರಿಸ್‌ ಬ್ರೌನ್‌ ಮತ್ತು ಶಾನ್‌ ಹೇಗ್‌ ಹಾಗೂ ಥರ್ಡ್‌ ಅಂಪೈರ್‌ ಆಷ್ಲೇ ಮೆಹ್ರೊಟಾ ಟೀಮ್‌ ಇಂಡಿಯಾ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ ಮಂದಗತಿಯ ಬೌಲಿಂಗ್‌ ಪ್ರಮಾದವನ್ನು ಕ್ಯಾಪ್ಟನ್‌ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆದಿಲ್ಲ. ಪಂದ್ಯದಲ್ಲಿ 166 ರನ್‌ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್‌ ತಂಡ 165 ರನ್‌ ಗಳಿಸುವಷ್ಟಕ್ಕೆ ಶಕ್ತವಾಗಿ ಸರಣಿಯಲ್ಲಿ 2ನೇ ಬಾರಿ ಸೂಪರ್‌ ಓವರ್‌ ಆಡುವಂತಾಯಿತು. ಸೋಲುವಂತಿದ್ದ ಪಂದ್ಯದಲ್ಲಿ ಗೆಲ್ಲಲು ಮತ್ತೊಂದು ಅವಕಾಶ ಪಡೆದುಕೊಂಡ ಭಾರತ ಸೂಪರ್‌ ಓವರ್‌ನಲ್ಲಿ ಕಿವೀಸ್‌ ನೀಡಿದ 14 ರನ್‌ಗಳ ಗುರಿ ಎದುರು 16 ರನ್‌ ಚಚ್ಚಿ ಪಂದ್ಯ ಗೆದ್ದುಕೊಂಡಿರು. ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ಟಿ20 ಪಂದ್ಯ ಮೌಂಟ್‌ ಮೌಂಗಾನುಯ್‌ನ ಬೇ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ (ಫೆ.02) ನಡೆಯಲಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ 5-0 ಅಂತರದಲ್ಲಿ ಸರಣಿ ವೈಟ್‌ವಾಷ್‌ ಮಾಡುವ ಗುರಿ ಹೊಂದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OivCRv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...